ಈ 3 ವಿಡಿಯೋ ನೋಡಿ, ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಅನ್ನಬೇಕಾದದ್ದು ಸನ್ನಿ ಲಿಯೋನಿಗೋ, ರಾಧಿಕಾ ಆಪ್ಟೆಗೋ ಹೇಳಿ…

ಡಿಜಿಟಲ್ ಕನ್ನಡ ಟೀಮ್

ರಾಧಿಕಾ ಆಪ್ಟೆ..

ಸೆನ್ಶುವಸ್ ಎಂಬ ಪದಕ್ಕೆ ತೀರ ಹೊಂದುವ ನಟಿ ಇವರು ಅಂಥ ಕೆಲವು ಪರ್ಫಾರ್ಮನ್ಸ್ ನೋಡುತ್ತಲೇ ಅನ್ನಿಸುತ್ತದೆ. ಬೋಲ್ಡ್ ಎಂಬ ಪದವನ್ನೂ ಈಕೆಗೆ ಚೌಕಾಶಿ ಇಲ್ಲದೇ ಉಪಯೋಗಿಸಬಹುದು.

ದೇಹ ಚೆಲುವನ್ನು ಮಾತ್ರವೇ ಅವಲಂಬಿಸಿದವರು ಎಷ್ಟೇ ಪ್ರಜ್ವಲಿಸಿ ಜನರನ್ನು ಸಮ್ಮೋಹಗೊಳಿಸಿದರೂ ಆ ಸೆಳೆತದ ಆಯಸ್ಸು ಕಡಿಮೆ. ಹಾಗಲ್ಲದೇ ದೇಹ ಸೌಂದರ್ಯದೊಂದಿಗೆ ಬುದ್ಧಿ ಕೆಣಕುವ, ಭಾವಾಭಿವ್ಯಕ್ತಿಸುವ, ಭಿನ್ನ ನಿರೂಪಣೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವವರು ಬಹುಕಾಲ ಕಾಡುತ್ತಾರೆ, ಕೆಣಕುತ್ತಾರೆ.

ಇಂಟಲೆಕ್ಟ್ ಮತ್ತು ಸೌಂದರ್ಯ ಸಮೀಕರಣವನ್ನು ಒಂದೆಡೆ ನೋಡಲಿಚ್ಛಿಸುವ ವರ್ಗಕ್ಕೆ ತುಂಬ ಬೇಕು ಬೇಕೆನಿಸುವ ನಟಿ ರಾಧಿಕಾ ಆಪ್ಟೆ.

ಭಾನುವಾರದ ಬಿಡುವಲ್ಲಿ ನೀವು ಕಣ್ತುಂಬಿಸಿಕೊಳ್ಳಬೇಕಾದ ರಾಧಿಕಾರ ಮೂರು ಫರ್ಫಾರ್ಮನ್ಸ್ ಇಲ್ಲಿವೆ. ಅಂದಹಾಗೆ… ಸಂಸ್ಕೃತಿ- ಸೆನ್ಸಾರು ಅಂತೆಲ್ಲ ತುಂಬ ತಲೆಕೆಡಿಸಿಕೊಂಡಿರೋರು ಇವನ್ನೆಲ್ಲ ನೋಡಬೇಡಿ.

ಮರುಭೂಮಿ ನಾಡಿನ ಹಳ್ಳಿಯೊಂದರಲ್ಲಿ ಮಹಿಳೆಯ ಸ್ಥಿತಿ, ಇಲ್ಲದ ಆಯ್ಕೆಗಳು, ಲೈಂಗಿಕ ಭಾವಾಭಿವ್ಯಕ್ತಿ ಆಕೆಯ ಹಕ್ಕಲ್ಲ ಅಂತ ನಡೆದುಕೊಳ್ಳುವ ಗಂಡಸರು, ಈ ನಡುವೆ ಬದುಕಿನ ಹೊಸತನ್ನು ಅನ್ವೇಷಿಸುವುದಕ್ಕೆ ಹೊರಡುವ ನಾಲ್ವರು ಮಹಿಳೆಯರು… ಇಂಥ ಕ್ಯಾನ್ವಾಸಿನ ‘ಪರ್ಚ್ಡ್’ ಚಿತ್ರದಲ್ಲಿ ರಾಧಿಕಾ ಬೋಲ್ಡ್ ಅವತಾರವನ್ನು ನೀವು ಈ ಟ್ರೈಲರ್ ನಲ್ಲಿ ಸವಿಯಬಹುದು. ಸದ್ಯಕ್ಕೆ ಚಿತ್ರೋತ್ಸವಗಳನ್ನು ಸುತ್ತುತ್ತಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿಲ್ಲ.

ಬೆಂಗಾಳಿ ನಿರ್ದೇಶಕ ಸುಜಯ್ ಘೋಷ್, 2015ರಲ್ಲಿ ನಿರ್ದೇಶಿಸಿದ 15 ನಿಮಿಷಗಳ ಸಣ್ಣಚಿತ್ರ ಅಹಲ್ಯಾ. ಇಲ್ಲಿ ಅಹಲ್ಯೆ ಪಾತ್ರದ ರಾಧಿಕಾ ತಾನು ಕಲ್ಲಾಗುವುದಿಲ್ಲ, ಪುರುಷರ ಸೆಳೆದು ಕಲ್ಲಾಗಿಸುತ್ತಾಳೆ.

‘ದಟ್ ಡೆ ಆಫ್ಟರ್ ಎವರಿಡೇ’ ಅನ್ನೋದು ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಶಾರ್ಟ್ ಫಿಲ್ಮ್. ಇಲ್ಲಿ ಬೀದಿ ಕಾಮಣ್ಣರನ್ನು ಎದುರಿಸುವ ಮಾರ್ಗ ಹುಡುಕಿಕೊಳ್ಳುವ ಅಭಿನಯದಲ್ಲಿ ಆರ್ದ್ರವಾಗಿಸುತ್ತಾರೆ ರಾಧಿಕಾ ಆಪ್ಟೆ.

Leave a Reply