ಮಾಜಿ ಸಚಿವ, ಹಿರಿಯ ವಕೀಲ ಎಂ.ಎಂ. ನಾಣಯ್ಯ ನಿಧನ

ಡಿಜಿಟಲ್ ಕನ್ನಡ ಟೀಮ್

ಮಾಜಿ ಮುಖ್ಯಮಂತ್ರಿ ಗುಂಡೂರಾಯರ ಆಪ್ತರು, ಎಸ್.ಎಂ. ಕೃಷ್ಣ ಸಂಪುಟದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಅಬಕಾರಿ ಸಚಿವರೂ ಆಗಿದ್ದ ಹಿರಿಯ ವಕೀಲ ಎಂ.ಎಂ. ನಾಣಯ್ಯ ಮಡಿಕೇರಿ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ನಿಧನರಾಗಿದ್ದಾರೆ. 75 ವರ್ಷ ವಯಸ್ಸಾಗಿದ್ದ ಅವರು ಹೃದ್ರೋಗದಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ ಪ್ರೇಮಾ ಹಾಗೂ ಇಬ್ಬರು ಪುತ್ರರು ಇದ್ದಾರೆ. ಅಂತಿಮ ಸಂಸ್ಕಾರ ಮಡಿಕೇರಿ ತಾಲೂಕಿನ ಬೇತು ಗ್ರಾಮದಲ್ಲಿ ಸೋಮವಾರ ನಡೆಯಲಿದೆ.

ಎರಡು ಬಾರಿ ಶಾಸನಸಭೆಗೆ ಆರಿಸಿ ಬಂದಿದ್ದ ನಾಣಯ್ಯ ಅವರು ಸರಳ, ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದರು. ಕೃಷ್ಣ ಸಂಪುಟದಲ್ಲಿದ್ದಾಗ ಮಡಿಕೇರಿ ಉಸ್ತುವಾರಿ ಸಚಿವರೂ ಆಗಿದ್ದರು. ಮಾಜಿ ಸಚಿವರಾದ ನಂತರ ವಕೀಲ ವೃತ್ತಿಯನ್ನು ಮುಂದುವರಿಸಿದ್ದರು. ಪ್ರಸ್ತುತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಅವರು ಮಡಿಕೇರಿ ತಾಲೂಕು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೊಡಗಿಗೆ ಮೊದಲ ಖಾಸಗಿ ಬಸ್ ತಂದ ಹೆಗ್ಗಳಿಕೆ ಇವರ ತಂದೆ ಮುದ್ದಪ್ಪ ಅವರದು.

Leave a Reply