ರಾಜ್ಯದಲ್ಲಿ ಎರಡು ಪ್ರತ್ಯೇಕ ದುರಂತಗಳು: ನಾಲ್ಕು ಸಾವು, ಲಕ್ಷಾಂತರ ರು ಮೌಲ್ಯದ ಆಯಿಲ್ ಬೆಂಕಿಗಾಹುತಿ
ರಾಜ್ಯವು ಸೋಮವಾರ ಎರಡು ಕರಾಳ ಘಟನೆಗಳಿಗೆ ಸಾಕ್ಷಿಯಾಯಿತು. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ಕಟ್ಟಡ ಕುಸಿದು ಆರು ಮಂದಿ ಸಾವನಪ್ಪಿ 12 ಕ್ಕೂ ಹೆಚ್ಚೂ ಮಂದಿ ಗಾಯಗೊಂಡಿದ್ದಾರೆ. ಬೆಂಗಳೂರಿನ ನೆಲಮಂಗಲ ಬಳಿ ಆಲಿವ್ ಆಯಿಲ್ ಕಾರ್ಖಾನೆಗೆ ಬೆಂಕಿಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ಬೆಂಕಿಗೆ ಆಹುತಿಯಾಗಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಪಾರ್ಸೆಲ್ ವಿಭಾಗದ ಒಂದು ಹಂತಸ್ತಿನ ಹಳೆ ಕಟ್ಟಡವನ್ನು ಕೆಡವುತ್ತಿದ್ದಾಗ ದುರಂತ ಸಂಭವಿಸಿದೆ. ಕಟ್ಟಡದ ಅವಷೇಶಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆಯಿಂದ ತೆರವು ಕಾರ್ಯಚರಣೆ ನಡೆಯುತ್ತಿದೆ.
ನೆಲಮಂಗಲದ ಆಲೀವ್ ಕಾರ್ಖಾನೆಯಲ್ಲಿ 200 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಚಹಾ ವಿರಾಮದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಪ್ರಾಣಹಾನಿ ಸಂಭವಿಸಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಬೆಂಕಿ ನಂದಿಸಲು 5 ಅಗ್ನಿಶಾಮಕಗಳು ಕಾರ್ಯನಿರ್ವಹಿಸುತ್ತಿವೆ.
ಗುಜರಾತ್ ನಲ್ಲಿ ಮೊದಲ ವಿಮಾನಯಾನ ಪಾರ್ಕ್
ದೇಶದ ಮೊದಲ ವಿಮಾನಯಾನ ವಲಯವನ್ನು ಸ್ಥಾಪಿಸಲು ಹೊರಟಿರುವ ಗುಜರಾತ್ ಸರ್ಕಾರ ವಿಮಾನಯಾನ ಕ್ಷೇತ್ರದಲ್ಲಿ ನೂತನ ಅಧ್ಯಾಯ ಬರೆಯಲು ಸಿದ್ಧತೆ ನಡೆಸಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ, ವೃತ್ತಿಪರರಿಗೆ, ನೀತಿ ನಿರೂಪಕರಿಗೆ ಹಾಗೂ ವ್ಯಾಪಾರಿ ವರ್ಗದವರಲ್ಲಿವಿಮಾನಯಾನ ಕ್ಷೇತ್ರದ ಪ್ರಾಮುಖ್ಯದ ಬಗ್ಗೆ ಜಾಗೃತಿ ಮೂಡಿಸಲು ಒತ್ತು ನೀಡುತ್ತಿದೆ. ಇದರಲ್ಲಿ ವಿಮಾನ, ತರಬೇತಿ ಶಾಲೆ, ಹೆಲಿಪ್ಯಾಡ್ ಮತ್ತು ಸಣ್ಣ ಸಣ್ಣ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸಲಿವೆ. ರಾಜ್ಯದ ಬಾಗೊದರದಿಂದ 30 ಕಿ ಮೀ ದೂರದಲ್ಲಿ ಸುಮಾರು 150 ಎಕರೆ ಪ್ರದೇಶದಲ್ಲಿ ಈ ಯೋಜನೆ ರೂಪಿಸಲಾಗುತ್ತಿದೆ ಎಂದು ಗುಜರಾತ್ ರಾಜ್ಯ ವಿಮಾನಯಾನ ಮೂಲಸೌಕರ್ಯ ಕಂಪನಿ ಲಿಮಿಟೆಡ್ (ಜಿಯುಜೆಎಸ್ ಎಐಎಲ್) ನ ಸಿಇಒ ಅಜಯ್ ಚೌಹಾಣ್ ತಿಳಿಸಿದ್ದಾರೆ.
ಚಿನ್ನಕ್ಕೆ ಪಾನ್ ಸಂಖ್ಯೆ ಕಡ್ಡಾಯ ವಿರೋಧಿಸಿ ಫೆ.10 ದೇಶವ್ಯಾಪ್ತಿ ಪ್ರತಿಭಟನೆ
ಎರಡು ಲಕ್ಷ ರು ಗಿಂತ ಹೆಚ್ಚಿನ ಚಿನ್ನ ಖರೀದಿಸಲು ಪಾನ್ ಸಂಖ್ಯೆ ಕಡ್ಡಾಯಗೊಳಿಸಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಫೆಬ್ರವರಿ 10 ರಂದು ರಾಷ್ಟ್ರವ್ಯಾಪ್ತಿ ಪ್ರತಿಭಟನೆ ನಡೆಯಲಿದೆ ಎಂದು ಜೆಮ್ಸ್ ಅಂಡ್ ಜೂವೆಲರಿ ಟ್ರೇಡ್ ಫೆಡರೇಶನ್ ಸೋಮವಾರ ಹೇಳಿದೆ.
ಕಳೆದ ಜನವರಿ 1 ರಿಂದ ಜಾರಿಗೆ ತಂದಿರುವ ಈ ಕಾನೂನನ್ನು ವಿರೋಧಿಸಿ 300 ಕ್ಕೂ ಸಂಘಟನೆಗಳು ಮತ್ತು1 ಲಕ್ಷಕ್ಕೂ ಹೆಚ್ಚೂ ಚಿನ್ನದ ಅಂಗಡಿಗಳನ್ನು ಬಂದ್ ಮಾಡಿ ಮಾಲಿಕರು ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ರೈಲು ಪ್ರಯಾಣಿಕರಿಗೆ ಊಟದ ದರದಲ್ಲಿವಿನಾಯಿತಿ!
ರೈಲು ಪ್ರಯಾಣಿಕರಿಗೆ ಇನ್ನೂ ಮುಂದೆ ವಿಧ ವಿಧದ ಕಾಫಿ ಮತ್ತು ಸ್ನಾಕ್ಸ್ ಸಿಗಲಿದೆ. ಇಷ್ಟೇ ಅಲ್ಲದೆ ಮುಂಗಡ ಆದೇಶ ನೀಡಿದವರಿಗೆ ಊಟದ ದರದಲ್ಲೂ ಶೇ 10 ರಷ್ಟು ವಿನಾಯತಿ ಪಡೆಯುವ ಅವಕಾಶವನ್ನು ಭಾರತೀಯ ರೈಲ್ವೆ ಆಹಾರ ಸರಬರಾಜು ಮತ್ತು ಪ್ರವಾಸೋದ್ಯಮ ನಿಗಮ (ಐಆರ್ ಸಿಟಿಸಿ) ಕಲ್ಪಿಸಿದೆ.
ಚಾಯೊಸ್ ಎಂಬ ಸಂಸ್ಥೆ ರೈಲ್ವೆ ಇಲಾಖೆ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು ಸುಮಾರು 25 ಬಗೆಯ ಚಹಾಗಳ ರುಚಿ ಪ್ರಯಾಣಿಕರಿಗೆ ಲಭ್ಯವಾಗಲಿದೆ.
ಊಟದ ದರದಲ್ಲಿ ವಿನಾಯಿತಿ ಪಡೆಯಲು ಐಆರ್ ಸಿಟಿಸಿ ಮುಖಾಂತರ ಇ ಕ್ಯಾಟರಿಂಗ್ ನಲ್ಲಿ ಬುಕ್ ಮಾಡಬೇಕು. 300 ರು ಗಿಂತ ಅಧಿಕ ಮೊತ್ತದ ಊಟಕ್ಕೆ ಮಾತ್ರ ಅನ್ವಯಿಸಲಿದೆ.