ಹಿಮಪಾತದಲ್ಲಿ ಪವಾಡಸದೃಶವಾಗಿ ಬದುಕುಳಿದ ಕರ್ನಾಟಕದ ಯೋಧ!

 

ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ತಮ್ಮ ವಿಲ್ ಪವರ್ ಮತ್ತುದೈಹಿಕಬಲದಿಂದ ಮಿಲಿಟರಿ ಶೌರ್ಯದ ಮಾದರಿಯಾಗಿದ್ದಾರೆ. ಆರುದಿನಗಳ ಹಿಂದೆ ಸಿಯಾಚಿನ್ ನಲ್ಲಾದ ಹಿಮಪಾತದಲ್ಲಿ ಎಲ್ಲ ಹತ್ತು ಯೋಧರೂ ಮೃತರಾಗಿದ್ದಾರೆಂದು ತೀರ್ಮಾನಿಸಲಾಗಿತ್ತು. ಅವರ ಮೃತದೇಹಗಳನ್ನು ತೆಗೆಯುವುದಕ್ಕೆಂದು ಕಾರ್ಯಾಚರಣೆ ನಡೆದಿತ್ತು. ಈ ಕಾರ್ಯಾಚರಣೆಯಲ್ಲಿ ಯೋಧ ಹನುಮಂತಪ್ಪ ಕೊಪ್ಪದ್ ಹಿಮಪಾತದ ಅಡಿಯಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರನ್ನು ದೆಹಲಿಗೆ ತುರ್ತು ಚಿಕಿತ್ಸೆಗಾಗಿ ತರಲಾಗಿದೆ.

ಹನುಮಂತಪ್ಪ ಅವರ ದೇಹಸ್ಥಿತಿ ಗಂಭೀರವಾಗಿದ್ದರೂ, ಈವರೆಗೆ ಕಾಪಾಡಿರುವ ವಿಲ್ ಪವರ್ ಕೈಗೊಡುವುದಿಲ್ಲ ಅಂತ ದೇಶ ಆಶಿಸುತ್ತಿದೆ.

ಜಗತ್ತಿನ ಅತಿ ದುರ್ಗಮ, ಅತಿ ಎತ್ತರದ ನೀರ್ಗಲ್ಲು ಪ್ರದೇಶವಾದ ಸಿಯಾಚಿನ್ ನಲ್ಲಿ ಮಾಮೂಲಿ ದಿನಗಳಲ್ಲೇ ಬದುಕಿರುವುದಕ್ಕೆ ಅತಿ ಕಠಿಣ ತಯಾರಿ ಬೇಕಾಗುತ್ತದೆ. ಹಿಮಪಾತಗಳಾದಾಗ ಮೃತದೇಹಗಳೇ ಸಿಗುವುದಿಲ್ಲ ಎಂಬಂಥ ಸ್ಥಿತಿ ಇದೆ. ಇಂಥ ಪ್ರತಿಕೂಲ ಪರಿಸ್ಥಿತಿ ನಡುವೆ ಯೋಧ ಹನುಮಂತಪ್ಪ ಕೊಪ್ಪದ್ ಜೀವಂತವಾಗಿ ಪತ್ತೆ ಆಗಿರುವುದು ಪವಾಡ ಎಂದೇ ವರ್ಣಿಸಲಾಗುತ್ತಿದೆ.

ಸಾಮಾಜಿಕ ಮಾಧ್ಯಮ, ಮಾಧ್ಯಮಗಳಲ್ಲಿ ದೇಶವೇ ಇವರ ಚೇತರಿಕೆಗೆ ಪ್ರಾರ್ಥಿಸುತ್ತಿರುವುದು ಕಂಡುಬರುತ್ತಿದೆ.

Leave a Reply