ನೇತಾಜಿಗೆ ಭಾರತ ರತ್ನ, ಶಿಫಾರಸು ಪರಿಗಣನೆಗೆ ಕೋರ್ಟ್ ನಿರ್ದೇಶನ

ಡಿಜಿಟಲ್ ಕನ್ನಡ ಟೀಮ್

ನೇತಾಜಿ ಸುಭಾಷ್ ಚಂದ್ರ ಬೊಸ್ ಅವರಿಗೆ ಭಾರತರತ್ನ ಪುರಸ್ಕಾರ ನೀಡುವ ಮತ್ತು ಜನ್ಮವಾರ್ಷಿಕೋತ್ಸವದಂದು ಸಾರ್ವಜನಿಕ ರಜೆ ಘೋಷಿಸುವ ಮನವಿಯನ್ನು ಪರಿಗಣಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತಮಿಳುನಾಡು ಕೇಂದ್ರ ವ್ಯವಸ್ಥಾಪಕ ಟ್ರಸ್ಟಿ ಆದ ಕೆ.ಕೆ ರಮೇಶ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ನ್ಯಾ. ಎಂ ಎಂ ಸುಂದರೇಶ್ ಮತ್ತು ನ್ಯಾ. ಎಸ್ ವಿಮಲ ರವರನ್ನೊಳಗೊಂಡ ವಿಭಾಗಿಯ ಪೀಠ ಈ ಸೂಚನೆ ನೀಡಿದೆ. ಜನವರಿ 23 ರಂದು ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾಗಿದ್ದು ಬೋಸ್ ಅವರ ತ್ಯಾಗವನ್ನು ಭಾರತದ ಪ್ರತಿ ಪ್ರಜೆ ಗೌರವಿಸುತ್ತಾರೆ ಎಂಬುದು ಅರ್ಜಿದಾರರ ಮಾತು.

Leave a Reply