ಸಾವಿನ ನೆತ್ತಿ ಸಿಯಾಚಿನ್ ಸಮರಭೂಮಿ, ನೀವು ತಿಳಿದಿರಬೇಕಾದ 5 ಸಂಗತಿಗಳು

ಡಿಜಿಟಲ್ ಕನ್ನಡ ಟೀಮ್

ಸಿಯಾಚಿನ್, ಭಾರತೀಯ ಯೋಧರನ್ನು ಕಂಗೆಡಿಸಿ ಸದ್ಯ ನಮ್ಮೆಲ್ಲರ ಮುಂದೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಪ್ರದೇಶ. ಭೂಮಿಯನ್ನು ಕಾಣದ ಮಟ್ಟಿಗೆ ಹಿಮದ ರಾಶಿಯಿಂದ ಕೂಡಿರುವ ಈ ಪ್ರದೇಶ, ಭಾರತೀಯ ಯೋಧರಿಗೆ ಸವಾಲಿನ ಯುದ್ಧಭೂಮಿ. ಇಲ್ಲಿ ನಮ್ಮ ಯೋಧರು ಎದುರಾಳಿಗಳ ಆಕ್ರಮಣಕ್ಕೆ ಬಲಿಯಾಗಿರುವುದಕ್ಕಿಂತ, ಕಠೋರ ವಾತಾವರಣಕ್ಕೆ ಹೆಚ್ಚು ಬಲಿಯಾಗಿದ್ದಾರೆ. ಈ ಸಿಯಾಚಿನ್ ಎಂಬ ಮೃತ್ಯು ಕೂಪದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

  1. ಭಾರತ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರದ ಚಿತ್ರವನ್ನು ನೋಡಿದಾಗ ನೆತ್ತಿಯ ಬಳಿ ತಗ್ಗಿರುವಲ್ಲಿ ಇರುವುದೇ ಈ ಸಿಯಾಚಿನ್. ಭಾರತ ಮತ್ತು ಪಾಕಿಸ್ತಾನ ನಡುವೆ ವಿವಾದ ಹೊಂದಿರುವ ಗಡಿ ಪ್ರದೇಶ ಇದಾಗಿದ್ದು, 2,600 ಚದರ ಕಿ.ಮೀ ವಿಸ್ತೀಣ ಹೊಂದಿದೆ. ಸಮುದ್ರ ಮಟ್ಟಕ್ಕಿಂದ 6000ಕ್ಕೂ ಹೆಚ್ಚು ಮೀಟರ್ ಎತ್ತರದಲ್ಲಿರುವ ಸಿಯಾಚಿನ್, ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದೇ ಹೆಸರು ಪಡೆದಿದೆ. ಚಳಿಗಾಲದಲ್ಲಿ ಇಲ್ಲಿನ ವಾತಾವರಣ -70 ಡಿಗ್ರಿಯವರೆಗೂ ತಲುಪಿ, ಭಾರತೀಯ ಯೋಧರಿಗೆ ಸವಾಲಾಗಿ ನಿಂತಿದೆ. ಚಳಿಗಾಲದ ವೇಳೆ ಈ ಪ್ರದೇಶದಲ್ಲಿ 1000ಕ್ಕೂ ಹೆಚ್ಚು ಸೆಂ.ಮೀ ಹಿಮಬೀಳುತ್ತದೆ.
  2. ಈ ಸಿಯಾಚಿನ್ ಪ್ರದೇಶ 1984ರಿಂದ ಭಾರತದ ನಿಯಂತ್ರಣದಲ್ಲಿದೆ. ಆ ಕಾರಣ ಪಾಕಿಸ್ತಾನ ಸಾಕಷ್ಟು ಬಾರಿ ಈ ಮಾರ್ಗವಾಗಿ ದಾಳಿ ನಡೆಸಲು ಮುಂದಾಗಿದೆ. ಈ ಪ್ರದೇಶದಲ್ಲಿ ಎರಡೂ ದೇಶಗಳು ತಮ್ಮ ಸೇನೆಯನ್ನು ನಿಯೋಜಿಸಿದೆ. ಈ ಯುದ್ಧಭೂಮಿಯಲ್ಲಿ 1990, 1995, 1996 ಮತ್ತು 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆ ನಡುವೆ ಕಾದಾಟ ನಡೆದಿವೆ.
  3. ಈ ಪ್ರದೇಶದಲ್ಲಿ ಭಾರತ 10 ಸಾವಿರಕ್ಕೂ ಹೆಟ್ಟು ಸೇನಾ ಟ್ರೂಪ್ಸ್ ಗಳನ್ನು ನಿಯೋಜಿಸಿದೆ. ಈ ಟ್ರೂಪ್ಸ್ ಗಳಿಗೆ ಅಗತ್ಯ ವಸ್ತುಗಳನ್ನು ಹೆಲಿಕಾಪ್ಟರ್ ಗಳಲ್ಲಿ ಪೂರೈಸುವುದರಿಂದ 21 ಸಾವಿರ ಅಡಿ ಎತ್ತರದಲ್ಲಿ ಹೆಲಿಪ್ಯಾಡ್ ನಿರ್ಮಿಸಿದೆ.
  4. ಈ ಪ್ರದೇಶ ಸಾಕಷ್ಟು ಬಲಿ ಪಡೆದಿದ್ದು, 1000 ಕ್ಕೂ ಹೆಚ್ಚು ಭಾರತೀಯರು, ಹಿಮಪಾತ, ಅನಾರೋಗ್ಯ ಹಾಗೂ ಅತಿಯಾದ ಚಳಿಯಿಂದ ದೇಹದ ಭಾಗಗಳು ಹಾನಿಯಾಗಿ ಮೃತಪಟ್ಟಿದ್ದಾರೆ. ಇನ್ನು 2012ರಲ್ಲಿ ಹಿಮಪಾತಕ್ಕೆ 140 ಪಾಕಿಸ್ತಾನಿ ಯೋಧರು ಮೃತಪಟ್ಟಿರುವುದು ಅಲ್ಲಿನ ಅತಿ ಹೆಚ್ಚು ಹಾನಿಗೊಳಗಾದ ಪ್ರಕರಣವಾಗಿದೆ.
  5. ಈ ಪ್ರದೇಶವನ್ನು ಕಾಯಲು ಭಾರತ ಕೋಟ್ಯಂತರ ಹಣ ವೆಚ್ಚ ಮಾಡುತ್ತಿದೆ. ಪ್ರತಿ ದಿನಕ್ಕೆ ಸುಮಾರು 6.3 ಕೋಟಿ ಎಂಬಂತೆ ವರ್ಷಕ್ಕೆ 2,300 ಕೋಟಿ ನೀಡುತ್ತಿದೆ. ಈ ಪ್ರದೇಶ ಚೀನಾ ಮತ್ತು ಪಾಕಿಸ್ತಾನ ಗಡಿ ಪ್ರದೇಶಕ್ಕೆ ಹೊಂದಿಕೊಂಡಿದೆಯಾದರೂ ಬಹುತೇಕ ಪ್ರದೇಶ ಭಾರತದ ನಿಯಂತ್ರಣದಲ್ಲಿದೆ.

Leave a Reply