ಸುದ್ದಿಸಂತೆ: ಜೆ ಎನ್ ಯು ದೇಶವಿರೋಧಿಗಳ ವಿರುದ್ಧ ಕ್ರಮ ಜರುಗದಿದ್ದರೆ ಪದವಿ ವಾಪಸ್ ಅಂದ್ರು ಸೇನಾಧಿಕಾರಿಗಳು, ಡಬ್ಬಿಂಗ್ ಪರ ನಾಳೆ ಕಾರ್ಯಕ್ರಮ, ಡಿಎಂಕೆ- ಕಾಂಗ್ರೆಸ್ ಮೈತ್ರಿ

 

ನಾಳೆ ಡಬ್ಬಿಂಗ್ ಪರ ಚರ್ಚೆ

“ಡಬ್ಬಿಂಗ್ ಯಾಕೆ ಕನ್ನಡಕ್ಕೆ ಬೇಕು?” ಎಂಬ ವಿಷಯದ ಬಗ್ಗೆ ಚರ್ಚಿಸಲು ಫೆಬ್ರವರಿ 14 ರಂದು ಬೆಳಿಗ್ಗೆ 11 ರಿಂದ 12 ರವರೆಗೆ “ತಿಂಗಳ ಅಂಗಳ” ಕಾರ್ಯಕ್ರಮವನ್ನು ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ ಹಮ್ಮಿಕೊಳ್ಳಲಾಗಿದೆ. “ಡಬ್ಬಿಂಗ್ ಕನ್ನಡಿಗರ ಆಯ್ಕೆ ಸ್ವಾತಂತ್ರ್ಯದ ಹಕ್ಕೊತ್ತಾಯ” ಹೊತ್ತಗೆಯ ಬರಹಗಾರ ಆನಂದ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಪರಭಾಷೆಯಲ್ಲಿನ ಜ್ಞಾನ ಮತ್ತು ಮನರಂಜನೆಯನ್ನು ಕನ್ನಡಿಗರು ಕನ್ನಡದಲ್ಲಿ ಪಡೆಯಲು ಹೇರಿದ್ದ ನಿಷೇಧವನ್ನು ಭಾರತೀಯ ಸ್ಪರ್ಧಾ ಆಯೋಗ ಹಿಂಪಡೆದಿದೆ. ಕನ್ನಡಕ್ಕೆ ಯಾಕೆ ಡಬ್ಬಿಂಗ್ ಬೇಕು? ಮುಂದಿನ ದಿನಗಳಲ್ಲಿ ಡಬ್ಬಿಂಗ್ ಸಾಧ್ಯ ಮಾಡಬಹುದಾದ ಕನ್ನಡ ಸಾಧ್ಯತೆಗಳೇನು? ಡಬ್ಬಿಂಗ್ ಮತ್ತು ಕನ್ನಡವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಬಳಸಿಕೊಳ್ಳುವ ಬಗೆಯೇನು? ಎಂಬ ಪ್ರಶ್ನೆಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದೆ.

ಜೆಎನ್ ಯು-ಅಫ್ಜಲ್ ವಿವಾದ: ಮಾಜಿ ಸೈನಿಕಾಧಿಕಾರಿಗಳಿಂದ ಪದವಿ ವಾಪ್ಸಿ ಎಚ್ಚರಿಕೆ

ದೆಹಲಿಯ ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರವಿರೋಧಿ ಚಟುವಟಿಕೆಗಳ ವಿರುದ್ಧ ಹೋರಾಟಕ್ಕೆ ಇದೀಗ ಮಾಜಿ ಸೇನಾಧಿಕಾರಿಗಳು ಬೆಂಬಲ ಘೋಷಿಸಿದ್ದಾರೆ. ಈ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ ಶಿಕ್ಷಣ ಸಂಸ್ಥೆಗಳು ನೀಡಿರುವ ಪದವಿಗಳನ್ನು ಹಿಂದಿರುಗಿಸುತ್ತೇವೆ ಎಂದು ಎಚ್ಚರಿಸಿದ್ದಾರೆ ಈ ಸೇನಾನಿಗಳು. ಜೆ ಎನ್ ಯು ವಿದ್ಯಾರ್ಥಿ ಕೂಟದ ನಾಯಕನೂ ಸೇರಿದಂತೆ ಏಳು ಮಂದಿಯನ್ನು ಈ ಪ್ರಕರಣದಲ್ಲಿ ಈವರೆಗೆ ಬಂಧಿಸಲಾಗಿದೆ.

ವಿಧಾನಸಭೆ ಚುನಾವಣೆ: ಡಿಎಂಕೆ ಜೊತೆ ಕಾಂಗ್ರೆಸ್ ಮೈತ್ರಿ

ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಪ್ರಕ್ಷಗಳು ಮೈತ್ರಿಯನ್ನು ಕಾಂಗ್ರೆಸ್ ಶನಿವಾರ ಘೋಷಿಸಿದೆ. ಈ ಮೂಲಕ ಮುಖ್ಯಮಂತ್ರಿ ಜಯಲಲಿತ ನೇತೃತ್ವದ ಆಡಳಿತರೂಢ ಎಡಿಎಐಎಂಕೆ ಪಕ್ಷವನ್ನು ಎದುರಿಸಲು ಕಾಂಗ್ರೆಸ್ ಮತ್ತು ಡಿಎಂಕೆ ಸಿದ್ಧವಾಗಿವೆ. ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರನ್ನು ಚೆನ್ನೈನಲ್ಲಿ ಭೇಟಿ ಮಾಡಿದ ಕಾಂಗ್ರೆಸ್ ನ ಗುಲಾಂ ನಬಿ ಆಜಾದ್ ಮೈತ್ರಿ ಪಕ್ಕಾಗೊಳಿಸಿದ್ದಾರೆ.

Leave a Reply