ಸುದ್ದಿಸಂತೆ: ಮೈಸೂರು ಸ್ವಚ್ಛನಗರಿ ಆದ್ರೆ…., ಹುತಾತ್ಮರ ಪಾರ್ಥಿವ ಶರೀರ ಬಂತು, ಅತ್ತ ಸೇನೆ ಸೇರೋಕೆ ಯುವಕರು ಸಿದ್ಧ…

ಮೈಸೂರು ಸ್ವಚ್ಛ ನಗರಿ ಅಂತ ಸಂಭ್ರಮಿಸೋಣ, ದೇಶ ವಾಯುಮಾಲಿನ್ಯದಿಂದ ಸಾಯ್ತಿದೆ ಅಂತ ದಿಗಿಲೂ ಇರಲಿ…

ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವಕಾಂಕ್ಷಿ ಸ್ವಚ್ಛಭಾರತ ಯೋಜನೆಯಲ್ಲಿ ಸಾಂಸೃತಿಕ ನಗರಿ ಮೈಸೂರು ಸತತ ಎರಡನೆ ಬಾರಿಗೆ ಭಾರತದ ಅತ್ಯಂತ ಸ್ವಚ್ಛನಗರ ಎಂಬ ಪಟ್ಟ ಪಡೆದುಕೊಂಡಿದೆ. ದೇಶದ 73 ನಗರಗಳಲ್ಲಿ ಕ್ವಾಲಿಟಿ ಕಂಟ್ರೋಲ್ ಆಫ್ ಇಂಡಿಯಾ (ಕ್ಯೂಸಿಐ) ನಡೆಸಿರುವ ಸ್ವಚ್ಛ ಸರ್ವೇಕ್ಷಣ ಫಲಿತಾಂಶವನ್ನು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಗೊಳಿಸಿದೆ.

ಇದೇ ಫಲಿತಾಂಶದಲ್ಲಿ ಬಿಹಾರದ ಧನಾಬಾದ್ ಅತಿ ಹೆಚ್ಚು ಹೊಲಸಾದ ನಗರ ಎಂಬ ಕುಖ್ಯಾತಿ ಪಡೆದುಕೊಂಡಿದೆ. ದೇಶದ 5 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರು ಮೊದಲ ಸ್ಥಾನ ಮತ್ತು ಚಂಡಿಗಡ, ತಿರುಚಿರಪಲ್ಲಿ, ದೆಹಲಿ (ಎನ್ ಡಿಎಂಸಿ) ಮತ್ತು ವಿಶಾಖಪಟ್ಟಣ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿವೆ.

ಇನ್ನೊಂದಡೆ, ವಾಯುಮಾಲಿನ್ಯದಿಂದ ಸಾವನ್ನಪ್ಪುತ್ತಿರುವವರ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ ಎಂಬ ವರದಿಯೂ ಬಂದಿದೆ. ವಿಶ್ವದಾದ್ಯಂತ ವಾಯುಮಾಲಿನ್ಯದಿಂದ ಪ್ರತಿ ವರ್ಷ ಸಾವನಪ್ಪಿರುವವರ ಸಂಖ್ಯೆ 55 ಲಕ್ಷ! ಇದರಲ್ಲಿ ಅರ್ಧದಷ್ಟು ಸಾವು ಚೀನಾ ಮತ್ತು ಭಾರತದ್ದು! ಇಂತಹದೊಂದು ಆತಂಕ, ಆಘಾತಕಾರಿ ವರದಿಯೊಂದನ್ನು ಸಂಯುಕ್ತ ರಾಷ್ಟಗಳ ವಿಜ್ಞಾನಿಗಳು ಅಮೆರಿಕನ್ ಅಸೋಸಿಯೆಷನ್ ನಲ್ಲಿ ನಡೆದ ವಿಜ್ಞಾನ ವಾರ್ಷಿಕ ಪ್ರಗತಿ ಸಭೆಯಲ್ಲಿ ಬಹಿರಂಗ ಪಡಿಸಿದ್ದಾರೆ.

ಪ್ರತಿ ವರ್ಷ ಚೀನಾದಲ್ಲಿ 16 ಲಕ್ಷ ಜನರು ವಾಯುಮಾಲಿನ್ಯಕ್ಕೆ ಜೀವತೆತ್ತು ಮೊದಲ ಸ್ಥಾನ ಪಡೆದರೆ ಭಾರತದಲ್ಲೂ 14 ಲಕ್ಷ ಮಂದಿ ಸಾವಿನಪ್ಪಿ ನಂತರ ಸ್ಥಾನ ಪಡೆದು ಕೊಂಡಿದೆ. ವಿಜ್ಞಾನಿಗಳು ಕೆನಡಾ, ಚೀನಾ ಮತ್ತು ಭಾರತ ಸೇರಿ ಸುಮಾರು 188 ರಾಷ್ಟ್ರಗಳಲ್ಲಿ1990 ರಿಂದ 2013 ರವರೆಗೆ ವಿಶ್ಲೇಷಣೆ ನಡೆಸಿದ್ದಾರೆ. ವಾಯುಮಾಲಿನ್ಯದಿಂದ ಆರೋಗ್ಯ ಮತ್ತು ಇನ್ನೀತರ ಅಪಾಯದ ಅಂಶಗಳ ಮೇಲೆ ಪರಿಣಾಮ ಬಿರುವ ಬಗ್ಗೆ ವರದಿ ಬಿಡುಗಡೆಗೊಳಿಸಿದ್ದಾರೆ.

ಇತ್ತ… ಅಂತಿಮ ನಮನಕ್ಕಾಗಿ ಹುಟ್ಟೂರಿಗೆ ಬಂದ ಹುತಾತ್ಮರ ದೇಹಗಳು

ಅತ್ತ… 30 ಸಾವಿರ ಯೋಧರ ಭರ್ತಿಗೆ ಸಿದ್ಧರಾಗಿದ್ದಾರೆ ಯುವಜನ

ಇಷ್ಟು ದಿನವೂ ಸಿಯಾಚಿನ್ ನ ವ್ಯಸ್ಥ ವಾತಾವರಣದಲ್ಲೇ ಬಂಧಿಯಾಗಿದ್ದ ಒಂಬತ್ತು ಹುತಾತ್ಮರ ಯೋಧರ ದೇಹವನ್ನು ಸೋಮವಾರ ತರಲಾಗಿದೆ. ಹಾಸನದ ನಾಗೇಶ್, ಮೈಸೂರಿನ ಮಹೇಶ್ ಅವರ ಪಾರ್ಥೀವ ಶರೀರಗಳೂ ಕರ್ನಾಟಕ ತಲುಪಿವೆ.

ಮತ್ತೊಂದೆಡೆ, ಇದೇ ಮೊದಲ ಬಾರಿಗೆ ನೇಮಕಾತಿಯಲ್ಲಿ ನೂತನ ವಿಧಾನಗಳನ್ನು ಅಳವಡಿಸಿ ಆಕಾಂಕ್ಷಿಗಳಿಗೆ ಸ್ಫೂರ್ತಿ ತುಂಬಲು ಸೇನೆ ಸಿದ್ಧವಾಗಿದೆ. ಅದಕ್ಕಾಗಿ 30 ಸಾವಿರ ಸೇನಾಕಾಂಕ್ಷಿಗಳ ಸಮಾವೇಶ ನಡೆಯಲಿದೆ.

ರಾಜಸ್ತಾನದ ಎಂಟು ಜಿಲ್ಲೆಗಳಿಂದ ಒಟ್ಟು 30 ಸಾವಿರ ಸೇನಾಕಾಂಕ್ಷಿಗಳು ಫೆಬ್ರವರಿ 19 ರಿಂದ 28 ರ ವರೆಗೆ ಅಜ್ಮಿರ್ ನಲ್ಲಿ ನಡೆಯುವ ಲಿಖಿತ ಪರೀಕ್ಷೆ ಮತ್ತು ಜೋಧ್ ಪುರ್ ನಲ್ಲಿ ನಡೆಯುವ ದೈಹಿಕ ಪರೀಕ್ಷೆಯ ನೇಮಕದಲ್ಲಿ ಭಾಗವಹಿಸಲು ಸಿದ್ದರಾಗಿದ್ದಾರೆ. ಮೊದಲ ಸಲ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಿರುವ ಸೇನೆಯ ನೇಮಕಾತಿ ವಿಭಾಗ, ನೇರವಾಗಿ ಅರ್ಜಿಸಲ್ಲಿಸುವುದನ್ನು ರದ್ದು ಮಾಡಿದೆ. ಈಗಾಗಲೇ ಅರ್ಜಿ ಸಲ್ಲಿಸುವ ಕೊನೆಯ ದಿನ ಮುಗಿದಿದೆ. ಬೇರೆ ವಲಯಗಳಲ್ಲಿ ಕ್ಯಾಂಪಸ್ ನೇಮಕವನ್ನು ಸುದ್ದಿಯಾಗಿಸುವ ನಾವೆಲ್ಲ, ಈ ವಿದ್ಯಮಾನವನ್ನೂ ಗೌರವದಿಂದ ಕಾಣುವಂತಾಗಲಿ.

ಡಿಕ್ಯಾಪ್ರಿಯೋ ಪ್ರಶಸ್ತಿ ಸಂಭ್ರಮ, ಆಸ್ಕರ್ ಗೂ ಮುಂದುವರಿದೀತೇ ಸಡಗರ?

“ನೈಜ ನಟನೆಗಾಗಿ ಕಾಡುಕೋಣದ ಹಸೀ ಯಕೃತ್ತು ತಿಂದ ಡಿಕ್ಯಾಪ್ರಿಯೋ!” ಎಂಬ ತಲೆಬರಹದ ಕಥೆಯೊಂದನ್ನು ಡಿಜಿಟಲ್ ಕನ್ನಡ ತಂಡ ಓದುಗರಿಗೆ ನೀಡಿತ್ತು. ಇದನ್ನು ನೀವು ಕೂಡ ಓದಿ ಮೆಚ್ಚಿಕೊಂಡಿದ್ರೀ. ಇದರಲ್ಲಿ ನಟ ಡಿಕ್ಯಾಪ್ರಿಯೋ ಆಸ್ಕರ್ ಯಾಕೆ ಇನ್ನೂ ಬಂದಿಲ್ಲ ಅನ್ನೊ ವಿಷಯವನ್ನು ಪ್ರಸ್ತಾಪಿಸಲಾಗಿತ್ತು. “ದಿ ರೆನವೆಂಟ್ ” ಸಿನಿಮಾ ಬಗ್ಗೆ ಚರ್ಚಿಸಲಾಗಿತ್ತು.

ಈಗ ದಿ ರೆನವೆಂಟ್ ಚಿತ್ರ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ (ಬಿಎಎಫ್ ಟಿಎ)ನ ಅತ್ಯುತ್ತಮ 3 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ಆಸ್ಕರ್ ಗೆ ಮತ್ತಷ್ಟು ಹತ್ತಿರವಾಗಿದೆ.

ಅತ್ಯುತ್ತಮ ಚಿತ್ರ ಪ್ರಶಸ್ತಿ, ಇನಾರಿತು ಅವರಿಗೆ ಅತ್ಯುತ್ತಮ ನಿರ್ದೇಶಕ ಮತ್ತು ಲೀಯೋನಾರ್ಡೋ ಡಿಕ್ಯಾಪ್ರಿಯೋ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಗಳು ಲಭಿಸಿವೆ. ಇದು ಡಿಕ್ಯಾಪ್ರಿಯೋ ನ 3ನೇ ಬಿಎಎಫ್ ಟಿಎ ಪ್ರಶಸ್ತಿಯಾಗಿದೆ.

Leave a Reply