₹251 ಕ್ಕೆ ಸ್ಮಾರ್ಟ್ ಫೋನ್, ಇಂಥ ಸ್ಮಾರ್ಟ್ ಆಫರ್ ಪ್ರಪಂಚದಲ್ಲೇ ಮೊದಲು!

ಡಿಜಿಟಲ್ ಕನ್ನಡ ಟೀಮ್

“ಮೇಕ್ ಇನ್ ಇಂಡಿಯಾ”, “ಡಿಜಿಟಲ್ ಇಂಡಿಯಾ” ಮತ್ತು “ಸ್ಕಿಲ್ ಇಂಡಿಯಾ” ಇವು ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳು.

ಇವುಗಳಲ್ಲೊಂದಾದ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ತಯಾರಾಗಿರುವ ಸ್ಮಾರ್ಟ್ ಪೋನ್ ದರ 500 ರೂಪಾಯಿಗಳಿಂತ ಕಡಿಮೆ ಇರಲಿದೆ ಎಂಬ ರೋಚಕ ಸುದ್ದಿ ಮಂಗಳವಾರ ಚರ್ಚೆಯಾಗಿತ್ತು. ಈಗ ಇದರ ನಿಖರ ದರ ಕೇವಲ “251 ರೂಪಾಯಿಗಳು”! ನಂಬಲು ಕಷ್ಟವೆನಿಸಿದರೂ 251 ರುಗೆ ಮೊಬೈಲ್ ಸಿಗೋದಂತೂ ಗ್ಯಾರಂಟಿ. ಈ ಮೊಬೈಲ್ ಬಿಡುಗಡೆಗೆ ಕೇಂದ್ರ ಸರ್ಕಾರವೆ ವೇದಿಕೆ ಕಲ್ಪಿಸಿದ್ದು, ರಕ್ಷಣಾ ಸಚಿವ ಮನೋಹರ್ ಪರಿಕರ್ ಬಿಡುಗಡೆಗೊಳಿಸಿದ್ದಾರೆ.

ನೋಯ್ಡ್ ಮೂಲದ ರಿಂಗಿಂಗ್ ಬೆಲ್ ಎಂಬ ಪ್ರಾದೇಶಿಕ ಮೊಬೈಲ್ ಕಂಪನಿ ಈ ಪ್ರಯೋಗದಲ್ಲಿ ಯಶ ಸಾಧಿಸಿದೆ. ಇದರ ಮೊದಲ ಭಾಗವಾಗಿ “ಪ್ರೀಡಂ 251” ಎಂಬ ಹೆಸರಿಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟು, ಸಾಕಷ್ಟು ಸಂಚಲನ ಮೂಡಿಸುವ ಭರವಸೆ ಹೊಂದಿದೆ.

ಇದೇ ಕಂಪನಿಯ 2999 ರು ಬೆಲೆಯ 4ಜಿ ಸ್ಮಾರ್ಟ್ ಪೋನ್ ಅನ್ನು ಬಿಜೆಪಿಯ ಹಿರಿಯ ನಾಯಕ, ಸಂಸದ ಮುರಳಿ ಮನೋಹರ ಜೋಷಿ ಬಿಡುಗಡೆಗೊಳಿಸಿದ್ದಾರೆ.

ಮೋದಿ ಅವರ “ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೇಶದ ಅಧಿಕಾರ” ಸಿಗಬೇಕು ಎನ್ನುವ ದೂರದೃಷ್ಟಿಯ ಯೋಜನೆಗೆ ಪೂರಕವಾಗಿ ರಿಂಗಿಂಗ್ ಬೆಲ್ ಕಂಪನಿ ಮೊಬೈಲ್ ಗಳನ್ನು ತಯಾರಿಸುತ್ತಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಗುರುವಾರ ಬೆಳಗ್ಗೆ ಆರರಿಂದ ಬುಕ್ಕಿಂಗ್ ಆಯ್ಕೆ ಲಭ್ಯವಿದ್ದು, ಫೆ. 21ರ ರಾತ್ರಿ ಎಂಟಕ್ಕೆ ಆಫರ್ ಕೊನೆಗೊಳ್ಳಲಿದೆ.

ದೇಶದ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್ ಪೋನ್ ಗಳ ಬೆಲೆ 2500 ರು ಗಿಂತ ಹೆಚ್ಚಿದೆ. ಕಳೆದ ವರ್ಷ ರಿಲಯನ್ಸ್ ಮತ್ತು ಡಾಟಾವಿಂಡ್ ಕಂಪನಿಗಳು 999 ರು ಬೆಲೆಗೆ ಪ್ರಪಂಚದ ಅತಿ ಅಗ್ಗದ ದರದ ಮೊಬೈಲ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದವು. ಆದರೆ ಇಲ್ಲಿಯತನಕ ಬಿಡುಗಡೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಅಮೆರಿಕವನ್ನು ಹಿಂದಿಕ್ಕಿ ಪ್ರಪಂಚದ ಎರಡನೇ ಅತಿ ದೊಡ್ಡ ಮಾರುಕಟ್ಟೆಯಾಗಿ ಭಾರತ ರೂಪಗೊಳ್ಳಲಿದೆ. ದೇಶದಲ್ಲಿ ಮೋಟೊರೊಲ, ಕ್ಸಿಯೋಮಿ ಮತ್ತು ಜಿಯೋನೀ ಕಂಪನಿಗಳು ಹ್ಯಾಂಡ್ ಸೆಟ್ ಗಳ ಉತ್ಪಾದನೆಯನ್ನು ಪ್ರಾರಂಭಿಸಿವೆ. ಆದರೆ ಸರ್ಕಾರ ಸ್ಥಳೀಯ ಉತ್ಪಾದಕರನ್ನು ಪ್ರೋತ್ಸಾಹಿಸುತ್ತಿರುವುದು ಆಶಾದಾಯಕ ಬೆಳವಣಿಗೆ. ಜೊತೆಗೆ ಮಹಿಳಾ ರಕ್ಷಣೆ, ಸ್ವಚ್ಛಭಾರತ ಮೀನುಗಾರ, ರೈತರಿಗೆ ಸಂಬಂಧಿಸಿದ, ವೈದ್ಯಕೀಯಕ್ಕೆ ಸಂಬಂಧಿಸಿದ ಅಪ್ಲಿಕೇಷನ್ ಗಳು ಸೇರಿದಂತೆ ಹಲವು ಉಪಯೋಗದ ಅಪ್ಲಿಕೇಷನ್ ಗಳು ಇನ್ ಸ್ಟಾಲ್ ಆಗಿವೆ. ದೇಶಾದ್ಯಂತ 650 ಸೇವಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸಂಸ್ಥೆ ತಿಳಿಸಿದೆ.

251 ರು ದರದ “ಫ್ರೀಡಂ 251” ಮೊಬೈಲ್ 4 ಇಂಚಿನ ಐಪಿಎಸ್ ಪರದೆ, ಕ್ವಾಡ್ ಕೋರ್ ಎಸ್ ಒಸಿ, 1.3GHz, ಆ್ಯನ್ ರಾಯ್ಡ್ ಒಎಸ್ 5.1, 1GB RAM, 8GB ಇನ್ ಬಿಲ್ಟ್ ಮೊಮೋರಿ ಮತ್ತು 32GB ವಿಸ್ತರಣ ಸಾಮರ್ಥ್ಯದವರೆಗೂ ಎಸ್ ಡಿ ಕಾರ್ಡ್ ಬಳಸುವ ಸೌಲಭ್ಯಹೊಂದಿದೆ.

ಹಿಂದಿನ ಕ್ಯಾಮರಾ 3.2 ಹಾಗೂ ಮುಂದಿನ ಕ್ಯಾಮರಾ 0.3 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿವೆ. 3G ಸಪೋರ್ಟ್, ವೈಫೈ ಕನೆಕ್ಟಿವಿಟಿ, 1450mAh ಬ್ಯಾಟರಿ ಹೊಂದಿದೆ. ಮೊಬೈಲ್ ಗೆ 1 ವರ್ಷದ ತನಕ ವಾರಂಟಿ ನೀಡಿದೆ.

9 COMMENTS

 1. Not sure about the sanity…..

  Read this in FB

  Freedom 251 is a BIG SCAM and is next Akash Tab in the making
  ‪#‎Freedom251‬ was never heard of before Feb 16th.Since Feb 17th every social media site is is abuzz with Freedom 251 and its throw away price. ‪#‎RingingBells‬, a ‪#‎Noida‬ based company is offering a fully functional ‪#‎Android‬ ‪#‎smarthone‬ at a dirt cheap price of Rs 251(1/100th the price of original ‪#‎iPhone‬). This ‪#‎price‬ is way below the cost of manufacturing of a 4 inch smartphone and hence their business model is not at all sustainable. According to Indian Cellular Association, the min price for the production of a 3G phone is Rs. 2,700
  This entire sale looks like a scam. RingingBells is registered as ‪#‎NGO‬ in September’15 and its 3 promoters- Mohit Kumar(owns all the shares),Sushma Devi,Rajesh Kumar do not have any history of floating tech products before.They don’t have prior experience in the field of ‪#‎smartphones‬.Their ‪#‎customercare‬ numbers-08822232323, 0120 4313097, 0120-4001000, 4200470, 6619580 are non functional.Company doesn’t repond to mail also (info@ringingbells.co.in).
  #Freedom251 is not ‪#‎BIS‬ (Bureau of Indian Standards) certified which means its safety is not guaranteed and the company cannot be penalized for non-compliance to performance standards.BIS certification is made mandatory by DIETY for all gadgets since 2012.
  Secondly, its ‪#‎UI‬, ‪#‎softwareinterface‬, ‪#‎icons‬ are a carbon copy of Apple’s iphone.So, a lawsuit from apple is not ruled out.
  The question that remains unanswered is – Why did ‪#‎ManoharParrikar‬ inaugurate this product?
  India Today reported that makers of Freedom 251 deserted their office on launch day-http://indiatoday.intoday.in/…/rang-a-bell-of…/1/598460.html

Leave a Reply