ನಾನ್ ಬೆಂಗ್ಳೂರಿನ ಎಂಜಿ ರಸ್ತೆ ಮಾತಾಡ್ತಿದೀನಿ… ಈ ಭಾನುವಾರ ನಂಗೆ ಭಾರಿ ಸ್ಪೆಷಲ್ ಆಗಿತ್ರೀ!

ಡಿಜಿಟಲ್ ಕನ್ನಡ ಟೀಮ್

ಬೆಂಗಳೂರಿನ ಬ್ಯೂಸಿ ರೋಡು ನಾನು. ಏನೆಲ್ಲ ವಹಿವಾಟು, ಎಂಥದೆಲ್ಲ ಪ್ರತಿಷ್ಠೆಗಳನ್ನು ಎದೆ ಮೇಲಿಟ್ಟುಕೊಂಡು ಪ್ರಕಾಶಿಸುತ್ತಿರುವವ ನಾನು. ದಿನಂಪ್ರತಿ ಲೆಕ್ಕವಿಡಲಾಗದಷ್ಟು ವಾಹನಗಳು ನನ್ನ ಮೇಲೆ ಸರಭರ ಸರಿದಾಡುತ್ತಿರುತ್ತವೆ. ನಾನಿರೋದೆ ಅದಕ್ಕಾದ್ದರಿಂದ ಆ ಬಗ್ಗೆ ಎಂಥದೂ ಆಕ್ಷೇಪವಿಲ್ಲ ಬಿಡಿ.

ಆದರೆ…

ನಂಗೂ ಅನ್ನಿಸ್ತಿತ್ತು… ಇವರೆಲ್ಲಯಾವತ್ತೂ ಅರ್ಜೆಂಟಿನಲ್ಲೇ ಓಡಾಡಿಕೊಂಡಿರ್ತಾಲ್ಲ. ಒಂಚೂರು ನಿಧಾನಿಸಿ, ನನ್ನನ್ನು ಇಡಿ ಇಡಿಯಾಗಿ ಆಸ್ವಾದಿಸಬಾರದೇ ಅಂತ. ದೈನಂದಿನದ ರೊಂಯ್ಯೆನ್ನುವ ಸಂಚಾರ ಸ್ಥಿತಿಯ ಹೊರತಾದ ಅನುಭವವೊಂದನ್ನು ನಾನು ಯಾವತ್ತಾದರೂ ನೋಡುವುದಕ್ಕೆ ಸಾಧ್ಯವೇ ಅಂತ ಪ್ರಶ್ನಿಸಿಕೊಂಡಿದ್ದೆ.

ಕೇಳಿಯೇ ಬಿಡ್ತಲ್ಲ ನನ್ನ ಆಸೆಯುಸಿರು ಸ್ಥಳೀಯಾಡಳಿತಕ್ಕೆ! ಇದೊಂದು ದಿನ ವಾಹನಮುಕ್ತವನ್ನಾಗಿಸಿ ಎಂಜಿ ರಸ್ತೆಯಲ್ಲಿಯಂತ್ರಗಳಲ್ಲದೇ ಜನರು ಸಂಭ್ರಮಿಸುವಂತಾಗಲಿ ಎಂಬ ನಿರ್ಣಯಕ್ಕೆ ಬೆಂಗಳೂರಿಗರೂ ಭೇಷ್ ಅಂದ್ರು. ವಾವ್.. ತೆರೆದುಕೊಂಡ್ತು ನನ್ನೆದೆ ಮೇಲೆ ಒಂದು ಅನನ್ಯ ಮಾನವಾಸಕ್ತಿಯ ಲೋಕ.

ಮಕ್ಕಳು ಕಾಲಿಗೆ ಚಕ್ರ ಕಟ್ಟಿ ಆಡಿ ಆನಂದಿಸಿದರು. ಹಿರಿಜೀವಗಳು ಆತಂಕರಹಿತರಾಗಿ ಓಡಾಡಿದರು. ಬಣ್ಣದ ಜಾತ್ರೆಯೊಂದು ಅರಳಿಕೊಂಡಿತು. ಒಂದಿಷ್ಟು ಮಂದಿ ವೇಷ ಹಚ್ಚಿ ಕುಣಿದರು. ಮತ್ಯಾರೋ ಹಾಡಿದರು. ಆಡುವವರು ಆಡಿದರು, ನೋಡುವವರು ನೋಡಿದರು.

ಇದರಿಂದ ಮಾಲಿನ್ಯ ಎಷ್ಟು ಕಡಿಮೆಯಾಯಿತು ಎಂಬ ಪ್ರಶ್ನೆಯೂ ನನಗೇನೂ ಸಂಗತವಲ್ಲ. ಆದರೆ, ರೂಟೀನಿಗೆ ಭಿನ್ನವಾದ ಅನುಭವಗಳಿಗೆ ಹೀಗೆ ಅಪರೂಪಕ್ಕಾದರೂ ತೆರೆದುಕೊಳ್ಳಬೇಕು. ರಸ್ತೆಗಳಷ್ಟೇ ಅಲ್ಲ, ಬದುಕು ಸಹ. ಈ ಭಾನುವಾರದ ಬಿಂಬಗಳು ಚಿರಾಯುವಾಗಲಿ.

M G1

M G2

M G3

M G4

M G5

M G6

M G7

Leave a Reply