ಕನ್ನಡ ಸಿನಿರಸಿಕರನ್ನು ರಂಜಿಸಲು ಗೇಮ್ ಚಿತ್ರ ಈ ವಾರ ತೆರೆಗೆ ಬರಲಿದ್ದು, ಸಿನಿಮಾ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ಚಿತ್ರದ ಮೂಲಕ ಬಾಲಿವುಡ್ ಖ್ಯಾತ ನಟಿ ಮನಿಷಾ ಕೊಯ್ರಾಲಾ ಸ್ಯಾಂಡಲ್ ವುಡ್ ಗೆ ಮೊದಲ ಬಾರಿಗೆ ಕಾಲಿಟ್ಟಿದ್ದಾರೆ. 1942- ಲವ್ ಸ್ಟೋರಿ, ಬಾಂಬೆ ಇತ್ಯಾದಿ ಚಿತ್ರಗಳ ಮೂಲಕ ನಟನೆ ಮತ್ತು ಚೆಲುವು ಎರಡರಲ್ಲೂ ಒಂದು ತಲೆಮಾರಿಗೆ ನಶೆ ಹಬ್ಬಿಸಿದ ನೇಪಾಳಿ ಚೆಲುವೆ ಮನಿಷಾ.
ಇದೀಗ ಮರ್ಡರ್ ಮಿಸ್ಟ್ರಿ ಕಥಾನಕ, ಅರ್ಜುನ್ ಸರ್ಜಾ ಅಭಿನಯ, ಎ. ಎಂ. ಆರ್ ರಮೇಶ್ ನಿರ್ದೇಶನ ಎಲ್ಲ ಅಂಶಗಳನ್ನು ಜತೆಗೂಡಿಸಿಕೊಂಡು ಬರುವ ಶುಕ್ರವಾರ ಬಿಡುಗಡೆ ಆಗಲಿರುವ ಗೇಮ್ ಚಿತ್ರದಲ್ಲಿ ಮನಿಷಾ ಇದ್ದಾರೆ ಅನ್ನೋದು ತುಸು ಚೆಂದ ಹೆಚ್ಚಿಸೋ ಅಂಶವೇ ಬಿಡಿ.
ಗೇಮ್ ಬಗ್ಗೆ ಕುತೂಹಲವಿರಿಸಿಕೊಂಡು ಚಿತ್ರದ ಕೆಲವು ಫೋಟೊಗಳು ನೋಡಲಡ್ಡಿಯಿಲ್ಲ.