ಜೋಗಮ್ಮ, ಜೋಗಪ್ಪರ ಅರಮನಿ ನಡುವೆ ನಳನಳಸೈತಿ ಸವದತ್ತಿ ಯಲ್ಲಮ್ಮನ ಜಾತ್ರಿ..!

 

ಡಿಜಿಟಲ್ ಕನ್ನಡ ಟೀಮ್

ಪ್ರತಿ ವರ್ಷ ಮಾಘ ಮಾಸದ ಮಾರ್ಘಶಿರಾ ಹುಣ್ಣಿಮೆ ದಿನ ಸವದತ್ತಿಯಲ್ಲಿ ಲಕ್ಷಾಂತರ ಭಕ್ತರ ಸಮಾಗಮ. ಕಾರಣ ಪ್ರಸಿದ್ಧ ಯಲ್ಲಮ್ಮನ ಜಾತ್ರೆಯ ಸಡಗರ. ಪ್ರತಿ ಹುಣ್ಣಿಮೆ ದಿನ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆದರೆ, ಮಾಘ ಮಾಸದ ಹುಣ್ಣಿಮೆಯ ದಿನ ಬಹಳ ಮಹತ್ವ ಪಡೆದುಕೊಂಡ ಹಿನ್ನೆಲೆ ಈ ಜಾತ್ರೆ ಹೆಚ್ಚು ಜನಪ್ರಿಯ. ಈ ಹಿಂದೆ ಬಾಲಕಿಯರನ್ನು ದೇವದಾಸಿ ಪದ್ಧತಿಗೆ ಅರ್ಪಿಸುವ ಆಚರಣೆಯೂ ಆಗಿತ್ತು. ಈಗ ಈ ಪದ್ಧತಿ ಇಲ್ಲ. ಕಳಂಕ ತೊಳೆದು ಹಬ್ಬ ರಂಗಾಗಿದೆ.

ಕಳೆದ ಒಂದು ವಾರದಿಂದ ರಾಜ್ಯ ಹಾಗೂ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶದಂತಹ ಹೊರ ರಾಜ್ಯಗಳಿಂದ ಭಕ್ತಾದಿಗಳು ಇಲ್ಲಿಗೆ ಆಗಮಿಸಿದ್ದು, ಸೋಮವಾರ ಮುಖ್ಯ ಜಾತ್ರೆಗೆ ಭಕ್ತಸಾಗರವೇ ಹರಿದು ಬಂದಿದೆ. ಪ್ರತಿ ಕುಟುಂಬವೂ ಎತ್ತಿನ ಗಾಡಿ ಹಾಗೂ ಹಲವು ಹಳ್ಳಿಗಳಿಂದ ಟ್ರಾಕ್ಟರ್ ಮಾಡಿಕೊಂಡು ಜಾತ್ರೆಗೆ ಆಗಮಿಸುವುದು ವಾಡಿಕೆ. ಭಕ್ತಿಗೀತೆಗಳು, ಜೋಗಮ್ಮ, ಜೋಗಪ್ಪಗಳ ಚೌಡಕಿ ಪದಗಳು, ಭಂಡಾರ ಎರೆಚಾಟ, ಜಯಘೋಷ ಈ ಜಾತ್ರೆಯ ಕಳೆ ಕಟ್ಟುತ್ತವೆ.

ಯಲ್ಲಮ್ಮನ ಗುಡ್ಡದ ತುಂಬಾ ಟೆಂಟ್ ಗಳು. ಭಕ್ತರು ಅಲ್ಲೆ ಬಿಡಾರ ಹಾಕಿ ಕಡಲೆಬೇಳೆ ಹೂರಣದಿಂದ ಕರಿಗಡಬು, ಹೋಳಿಗೆ ಮಾಡುವುದು ದೇವಿಗೆ ಮಡಿಲು ತುಂಬುವುದು ಇಲ್ಲಿನ ಪದ್ಧತಿ. ಕಳೆದ ಒಂದು ತಿಂಗಳಿನಿಂದ ವಿವಿಧ ಕಾರ್ಯಕ್ರಮಗಳು ಇಲ್ಲಿ ಚಾಲ್ತಿಯಲ್ಲಿವೆ. ರೇಣುಕಾದೇವಿ ದರ್ಶನಕ್ಕೆ ಯಲ್ಲಮ್ಮನ ಗುಡ್ಡಕ್ಕೆ ತೆರಳುವ ಮುನ್ನ ಜೋಗುಳ ಬಾವಿಯಲ್ಲಿ ಸ್ನಾನ ಮಾಡಿ, ಸತ್ಯಮ್ಮನ ದರ್ಶನ ಪಡೆದು ಹರಕೆ ತೀರಿಸುವುದು ವಿಶೇಷ ಪದ್ಧತಿ. ಇಲ್ಲಿ ಸಾಕಷ್ಟು ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯುವ ಕಾರಣ ಇದು ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಶಕ್ತಿಪೀಠವಾಗಿ ಪರಿಣಮಿಸಿದೆ. ಸೋಮವಾರ ನಡೆದ ಈ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಈ ಚಿತ್ರಗಳನ್ನು ನೋಡಿ.

h22-Ulavi jatra 1 H22-sdt2 h22-ulavi jatra

Leave a Reply