ಸನ್ನಿ ಹೇಳ್ತಿದ್ದಾಳೆ ಸಿಗರೇಟ್ ಬಿಟ್ಬಿಡಿ.., ಈ ವಿಡಿಯೋ ನೋಡಿ!

ಡಿಜಿಟಲ್ ಕನ್ನಡ ಟೀಮ್

ಇಷ್ಟು ದಿನ ಸಿಗರೇಟ್ ಸೇದ್ ಬೇಡಿ ಎಂದು ನಿಮ್ಮ ಮನೆಯವರು, ಸ್ನೇಹಿತರು ಎಷ್ಟು ಬುದ್ದಿ ಹೇಳಿದ್ದರೂ ನೀವು ಕೇಳಿಲ್ಲ ಅಲ್ವೇ? ನಾನಾ ಕಾರಣಗಳಿಂದ ಸಿಗರೇಟ್ ಚಟಕ್ಕೆ ಬಿದ್ದ ನೀವು ಅದರಿಂದ ಆಚೆ ಬರೋಕೆ ಬಹಳ ಪ್ರಯತ್ನ ಮಾಡಿರಬಹುದು. ಅದು ಆಗದೇ ಹೋಗಿರಬಹುದು. ಈಗ ಚಟ ಬಿಡೋದಿಕ್ಕೆ ಒಂದು ಕಾರಣ ಸಿಕ್ಕಿದೆ ನೋಡಿ. ಸಿಗರೇಟ್ ಸೇದ್ ಬೇಡಿ ಎಂದು ಹೇಳ್ತಿರೋದು ನಿಮ್ಮ ಫೇವರೆಟ್ ಸನ್ನಿ.. ಹೌದು ಸನ್ನಿ ಲಿಯೋನಿ.

ಧೂಮಪಾನ ಆರೋಗ್ಯಾನ ಹೆಂಗೆಲ್ಲ ಎಕ್ಕುಡಿಸ್ತದೆ ಅನ್ನೋದನ್ನ ನಿಮ್ಮ ನೆಚ್ಚಿನ ಲಿಯೋನಿ ಈ ವಿಡಿಯೋದಲ್ಲಿ ಯಾವ ರೀತಿ ವಿವರಿಸಿದ್ದಾರೆ ನೋಡಿ.

ಪ್ರತಿ ಸಿಗರೇಟ್ ಸೇದಿದಾಗಲೂ ನಿಮ್ಮ ಆಯಸ್ಸು 11 ನಿಮಿಷ ಕಡಿಮೆಯಾಗ್ತಾ ಹೋಗುತ್ತದೆ. ಈ ಅಂಶವನ್ನಿಟ್ಟುಕೊಂಡು ವಿಭು ಪುರಿ ನಿರ್ದೇಶನದಲ್ಲಿ ಕಿರುಚಿತ್ರ ನಿರ್ಮಿಸಲಾಗಿದೆ. ಸನ್ನಿ ಜತೆ ಅಲೋಕ್ ನಾಥ್ ಮತ್ತು ದೀಪಕ್ ದೆಬ್ರಿಯಾಲ್ ಸಹ ಧೂಮಪಾನದ ಯಡವಟ್ಟುಗಳನ್ನು ಮನದಟ್ಟು ಮಾಡಿದ್ದಾರೆ.

ಈ ಚಿತ್ರದಲ್ಲಿ ಸಿಗರೇಟ್ ಸೇದಿ ಸಾವಿನ ದವಡೆಗೆ ತಲುಪಿದ್ದ ವ್ಯಕ್ತಿ ಕೊನೆ ಆಸೆ ಈಡೇರಿಸಿಕೊಳ್ಳುವ ಅಂತಿಮ ಗಳಿಗೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಾನೆ. ಹನ್ನೊಂದು ನಿಮಿಷಗಳ ಪ್ರಾಮುಖ್ಯಕ್ಕೆ ಪೋಲಿ ಅರ್ಥವೂ ಇರಬಹುದಾದರೂ, ಆ ರಂಜನೆಯಲ್ಲೇ ಸಿಗರೇಟು ಹಾನಿಕರ ಅಂತ ಹೇಳಲಾಗಿದೆ.

Leave a Reply