ಕಾರ್ಡು ಉಜ್ಜು, ಪರ್ಸಿಗೇಕೆ ಬೊಜ್ಜು? ಕಾರ್ಡ್ ಪಾವತಿಯಲ್ಲಿ ಸೇವಾ ತೆರಿಗೆ ಇರಲ್ಲ ಅಂತಿದೆ ಡಿಜಿಟಲ್ ಇಂಡಿಯಾ

ಡಿಜಿಟಲ್ ಕನ್ನಡ ಟೀಮ್

ಡಿಜಿಟಲೀಕರಣದತ್ತ ಭಾರತದ ಪಯಣವನ್ನು ಮುಂದುವರಿಸಲು ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಕಾರ್ಡ್ ಮೂಲಕ ಪಾವತಿಯಾದರೆ ಸೇವಾತೆರಿಗೆ ಮನ್ನಾ ಎಂಬ ಯೋಜನೆ ಮೂಲಕ ನೋಟುಗಳ ಅವಲಂಬನೆಯನ್ನು ತಗ್ಗಿಸುವುದಕ್ಕೆ ಹೊರಟಿದೆ ಕೇಂದ್ರ ಸರ್ಕಾರ.

ಸಂಪುಟದಲ್ಲಿ ಅನುಮೋದನೆಗೊಂಡಿರುವ ಈ ಯೋಜನೆ ಅನ್ವಯ ಕಾರ್ಡ್ ಇಲ್ಲವೇ ಇತರ ಡಿಜಿಟಲ್ ಮಾರ್ಗದ ಮೂಲಕ ವಹಿವಾಟು ನಡೆಸಿದರೆ ಅಲ್ಲಿ ಸೇವಾ ತೆರಿಗೆ, ಸರ್ಚಾರ್ಜ್ ಹಾಗೂ ಸೌಲಭ್ಯ ಶುಲ್ಕಗಳಲ್ಲಿ ವಿನಾಯತಿ ಸಿಗಲಿದೆ.

ತೆರಿಗೆ ವಂಚನೆ ತಪ್ಪಿಸುವುದು, ಕರೆನ್ಸಿ ಮುದ್ರಿಸುವ ಭಾರ ತಗ್ಗಿಸಿಕೊಳ್ಳುವುದು ಎಲ್ಲವೂ ಈ ನಡೆಯಿಂದ ಸಾಧ್ಯ. ನಗದು ಮೂಲಕ ವ್ಯವಹಾರದ ಪ್ರಕ್ರಿಯೆಯಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆಗಾಗಿ ದೇಶದ ಆಂತರಿಕ ನಿವ್ಹಳ ಉತ್ಪಾದನೆಯಲ್ಲಿ ಶೇ.5-7ರಷ್ಟು ವೆಚ್ಚವಾಗುತ್ತಿತ್ತು. ಈ ಡಿಜಿಟಲ್ ಪಾವತಿ ಮೂಲಕ ಈ ವೆಚ್ಚವನ್ನು ಕಡಿಮೆ ಮಾಡುವುದರ ಜತೆ ವ್ಯವಹಾರ ಮತ್ತಷ್ಟು ಸುಲಭವಾಗಿಸೋದು ಇದರ ಮುಖ್ಯ ಉದ್ದೇಶ.

ನಗದು ರಹಿತ ವ್ಯವಹಾರಕ್ಕೆ ಒತ್ತು ನೀಡಲು ಸರ್ಕಾರ ಕೈಗೊಂಡಿರುವ ಇತರೆ ಪ್ರಮುಖ ನಿರ್ಧಾರಗಳು ಹೀಗಿವೆ.

  • ಕಾರ್ಡ್ ಮೂಲಕ ನಡೆಸುವ ವಹಿವಾಟಿನಲ್ಲಿ ನೀಡಲಾಗುವ ವಿನಾಯಿತಿಯ ದರವನ್ನು ಏಕರೂಪಕ್ಕೆ ತರುವ ಪ್ರಸ್ತಾವನೆ.
  • ಗ್ರಾಮೀಣ ಗ್ರಾಹಕರಲ್ಲೂ ಮೊಬೈಲ್ ಬ್ಯಾಂಕಿಂಗ್ ಪರಿಚಯ.
  • ಈ ವ್ಯವಸ್ಥೆಯಲ್ಲಿ ಕೂನೂನು ಬಾಹೀರ ಚಟುವಟಿಕೆ ತಡೆಯಲು ಹಾಗೂ ಅಂತಹ ಪ್ರಕರಣದಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ವಿಶೇಷ ವಿಭಾಗದ ರಚನೆ.
  • ದೇಶದಲ್ಲಿ ಪಾವತಿಯ ಆರ್ಥಿಕ ಪರಿಸರ ವ್ಯವಸ್ಥೆಯ ಪರಾಮರ್ಶೆ.
  • ಮುಂಬರುವ ಏಪ್ರಿಲ್ ನಿಂದ ಏಕರೂಪ ಪಾವತಿ ಅಂತರ ಸಂಪರ್ಕ ಸಾಧನ ಪರಿಚಯ. ಆಮೂಲಕ ಬೇಕಾಬಿಟ್ಟಿ ವಿನಾಯ್ತಿಗಳಿಗೆ ಚೌಕಟ್ಟೊಂದನ್ನು ಹಾಕುವುದು.

Leave a Reply