ಸುದ್ದಿಸಂತೆ: ಯುನೈಟೆಡ್ ಸ್ಪಿರಿಟ್ ಮುಖ್ಯಸ್ಥ ಸ್ಥಾನಕ್ಕೆ ಮಲ್ಯ ರಾಜಿನಾಮೆ, ವಿಜೇಂದರ್ ಮುಂದಿನ ಎದುರಾಳಿ ಹೊವರ್ತ್

ಡಿಜಿಟಲ್ ಕನ್ನಡ ಟೀಮ್

ಮಲ್ಯ ಎಂದೊಡನೆ ನೆನಪಿಗೆ ಬರೋದು ಆತನ ಲಕ್ಸುರಿ ಲೈಪು. ತನ್ನ ಕಿಂಗ್ ಫಿಷರ್ ಕ್ಯಾಲೆಂಡರ್ ಗಾಗಿ ಕೋಟಿ ಕೋಟಿ ಖರ್ಚು ಮಾಡಿದ ಕುಳ. 25 ಕೋಟಿ ಕೊಟ್ಟು ಟಿಪ್ಪು ಖಡ್ಗ ಖರೀದಿಸಿದ್ದ ಧನಿಕ. ಐಪಿಎಲ್ ತಂಡವೊಂದರ ಮಾಲಿಕ, ಮದ್ಯದ ದೊರೆ. ಅಂತಹ ವಿಜಯ್ ಮಲ್ಯರ ಕುದುರೆ ಗುರುವಾರ ಮುಗ್ಗರಿಸಿ ಬಿದ್ದಿದೆ ಅರ್ಥಾತ್ ಯುನೈಟೆಡ್ ಸ್ಪಿರಿಟ್ ಸಂಸ್ಥೆ ಮುಖ್ಯಸ್ಥ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಈಗಾಗಲೇ ಸುಮಾರು 7 ಸಾವಿರ ಕೋಟಿಯ ಸಾಲದ ಸುಳಿಯಲ್ಲಿ ಸಿಲುಕಿರುವ ಈ ಶೋಕಿಲಾಲ ತನ್ನ ಐಶಾರಾಮಿ ಜೀವನಕ್ಕೇನು ಕೊರತೆ ಮಾಡಿಕೊಂಡಿಲ್ಲ. ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುತ್ತಾ ಐಷರಾಮಿ ಬದುಕನ್ನು ಎಗ್ಗಿಲ್ಲದೇ ಮಂದುವರಿಸಿದವರು. ಒಂದು ಜಮಾನದಲ್ಲಿ ಸಹಸ್ರ ಸಹಸ್ರ ಕೋಟಿ ರುಪಾಯಿ ಒಡೆಯ ಈಗ ಪಡೆದಿರುವ ಸಾಲ ತೀರಿಸಲಾಗದೇ ಬ್ಯಾಂಕ್ ಗಳಿಂದ ನೋಟಿಸ್ ಮೇಲೆ ನೋಟಿಸ್ ಪಡೆಯುತ್ತಿದ್ದಾರೆ. ಬ್ಯಾಂಕ್ ಗಳಿಂದ ಇವರ ಆಸ್ತಿಗಳ ಜಪ್ತಿಗೆ ಸಿದ್ದತೆ ನಡೆದಿದೆ. ಇತ್ತಿಚೆಗಷ್ಟೇ ಕಪ್ಪು ಪಟ್ಟಿಗೆ ಸೇರಿರುವ ಈ ಬಿಜಿನೆಸ್ ಮ್ಯಾನ್ ಇದೀಗ ತನ್ನೆಲ್ಲ ಟೈಟಲ್ ಗಳನ್ನು ಕಳಕೊಂಡಿರುವ ಅಫ್ ಕಮಿಂಗ್ ಕಾಲಿಮ್ಯಾನ್.

ಇಷ್ಟೆಲ್ಲ ಆದ ಮೇಲೆ ಮಲ್ಯ ರಾಜೀನಾಮೆಗೆ ನೀಡಿರುವ ಕಾರಣ – ‘ನನಗೆ ಈಗ 60 ವರ್ಷ. ಮುಂದಿನ ಜೀವನವನ್ನು ಇಂಗ್ಲೆಂಡ್ ನಲ್ಲಿ ಮಗನೊಂದಿಗೆ ಕಳೆಯಲು ತೀರ್ಮಾನಿಸಿದ್ದೇನೆ. ಇನ್ನು ಮುಂದೆ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ನ ಎಲ್ಲಾ ವ್ಯವಹಾರಗಳನ್ನು ಡಿಯಾಜಿಯೊ ಫ್ಲಿಕ್ ಸಂಸ್ಥೆ ನೋಡಿಕೊಳ್ಳುತ್ತದೆ.

ವಿಜೇಂದರ್ ಮುಂದಿನ ಎದುರಾಳಿ ಅಲೆಕ್ಸಾಂಡರ್ ಹೊರ್ವತ್

ವೃತ್ತಿಪರ ಬಾಕ್ಸಿಂಗ್ ನಲ್ಲಿ ಮುಂದಿನ ತಿಂಗಳು ಲಿವರ್ ಪೂಲ್ ನಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಭಾರತದ ವಿಜೇಂದರ್ ಸಿಂಗ್ ಹಂಗೇರಿಯಾದ ಅಲೆಕ್ಸಾಂಡರ್ ಹೊವರ್ತ್ ಅವರನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ವೃತ್ತಿಪರ ಬಾಕ್ಸಿಂಗ್ ಪದಾರ್ಪಣೆ ಮಾಡಿದ ವಿಜೇಂದರ್ ಈ ಮೊದಲು ಆಡಿದ ಮೂರೂ ಪಂದ್ಯಗಳಲ್ಲಿ ಗೆದ್ದು ಅಜೇಯರಾಗಿದ್ದಾರೆ. ತಮ್ಮ ಮುಂದಿ ಪಂದ್ಯ ಮಾ.12ರಂದು ನಡೆಯಲಿದೆ. ಮತ್ತೊಂದೆಡೆ ಹೊರ್ವತ್ ಈವರೆಗೂ ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ಜಯ ದಾಖಲಿಸಿದ್ದು, ಟ್ರ್ಯಾಕ್ ರೆಕಾರ್ಡ್ ಚೆನ್ನಾಗಿದೆ.

Leave a Reply