ಸುದ್ದಿಸಂತೆ 28: 14 ಬಂಧುಗಳ ಕೊಂದು ವ್ಯಕ್ತಿ ಆತ್ಮಹತ್ಯೆ, ರೈತರ ಆದಾಯ ದ್ವಿಗುಣಕ್ಕೆ ಮೋದಿ ಸಂಕಲ್ಪ

People carry the body of Indian man Hasnain Warekar, after autopsy from a hospital in Thane, outskirts of Mumbai, India, Sunday, Feb. 28, 2016. Warekar, 35 fatally stabbed 14 members of his family, including seven children, early Sunday before hanging himself, police said. (AP Photo/Rajanish Kakade)

ಡಿಜಿಟಲ್ ಕನ್ನಡ ಟೀಮ್

ಇದೊಂದು ಘನಘೋರ ಹತ್ಯಾಕಾಂಡ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಥಾನೆ ಜಿಲ್ಲೆಯ ಮೂಲದ ಹನ್ಸಿಲ್ ವಾರೇಕರ್ ಎಂಬಾತ ತನ್ನ ಕುಟುಂಬದ 14 ಸದಸ್ಯರನ್ನು ಚಾಕುವಿನಿಂದ ಇರಿದು ಕೊಂದು, ನಂತರ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಪ್ರಕರಣದ ವರದಿಗೆ ತೆರಳಿದ್ದ ಖಾಸಗಿ ಟಿವಿ ಚಾನೆಲ್ ವೊಂದರ ಕ್ಯಾಮರಾಮೆನ್, ಕತ್ತು ಸೀಳಿದ ದೇಹಗಳ ಭೀಭತ್ಸ ದೃಶ್ಯದಿಂದ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ.

ಕುಟುಂಬದ ಸದಸ್ಯರಿಗೆಂದು ನಿನ್ನೆ ರಾತ್ರಿ ಪಾರ್ಟಿ ಇಟ್ಟುಕೊಂಡಿದ್ದ ಆರೋಪಿಯು ಭಾನುವಾರ ಮುಂಜಾನೆ 14 ಮಂದಿಯನ್ನು ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಮೊದಲಿಗೆ ಎಲ್ಲ ಕೊಠಡಿಗಳ ಬಾಗಿಲು ಚಿಲಕ ಬಂದ್ ಮಾಡಿದ್ದ ಈ ವಿಕೃತ, ಒಂದೊಂದೇ ರೂಮಿನ ಬಾಗಿಲು ತೆಗೆದು ಅದರಲ್ಲಿದ್ದ ಸದಸ್ಯರನ್ನು ಕೊಂದು ಹಾಕಿದ್ದಾರೆ. ತಂದೆ-ತಾಯಿ, ಸಹೋದರ, ಸಹೋದರಿಯರು, ಅವರ ಎಳೆ ಮಕ್ಕಳು ಕೂಡ ಈತನ ಪಾತಕಕ್ಕೆ ಬಲಿಯಾಗಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ 35 ವರ್ಷದ ಹನ್ಸಿಲ್ ಕೈಯಲ್ಲಿ ರಕ್ತಸಿಕ್ತ ಚಾಕು ಹಿಡಿದೇ ನೇಣು ಹಗ್ಗದಲ್ಲಿ ನೇತಾಡುತ್ತಿದ್ದ. ಈತನ ಸಹೋದರಿ ಒಬ್ಬರು ಮಾತ್ರ ಗಾಯಗಳೊಂದಿಗೆ ಬದುಕಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಿಕ್ಕವರ ದೇಹಗಳ ಮರಣೋತ್ತರ ಪರೀಕ್ಷೆ ಆಗಿದೆ.

ಈ ಘಟನೆಯನ್ನು ವರದಿ ಮಾಡಲು ತೆರಳಿದ್ದ ಖಾಸಗಿ ವಾಹಿನಿಯೊಂದರ ಕ್ಯಾಮೆರಾಮೆನ್ ರತನ್ ರಾಧೆಶ್ಯಾಮ್ ಭೌಮಿಕ್ ಹೃದಯಘಾತದಿಂಗ ಸಾವನ್ನಪ್ಪಿದ್ದಾನೆ.

2022ರ ವೇಳೆಗೆ ರೈತರ ಆದಾಯ ದ್ವಿಗುಣ; ಮೋದಿ

2022ರ ವೇಳೆಗೆ ದೇಶದ ರೈತರ ಪ್ರಸ್ತುತ ಆದಾಯ ದ್ವಿಗುಣಗೊಳ್ಳುವಂತೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಭಾನುವಾರ ಬರೇಲಿಯಲ್ಲಿ ನಡೆದ ಕಿಸಾನ್ ಸ್ವಾಭಿಮಾನ್ ರಾಲಿಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗೆ ಮೊದಲ ಆದ್ಯತೆ. ಇದು ಕೇವಲ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ. ಇತರೆ ರಾಜ್ಯಗಳಿಗೂ ಅನ್ವಯ. ರೈತರು ದೇಶದ ಹೆಮ್ಮೆ. ಅವರ ಮುಂದೆ ಈಗ ಸಾಕಷ್ಟು ಸವಾಲುಗಳಿವೆ. ಇದನ್ನು ಅವಕಾಶಗಳನ್ನಾಗಿ ಪರಿವರ್ತಿಸಬೇಕು. ಹೀಗಾಗಿ ರೈತರು ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆಯ ಫಲಾನುಭವಿಗಳಾಗಬೇಕು. ರೈತರು ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಬಳಸಿಕೊಳ್ಳಬೇಕು. ಆ ಮೂಲಕ ಮಣ್ಣಿನ ಗುಣಮಟ್ಟ ಸುಧಾರಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

Leave a Reply