ನೇತ್ರದಾನದ ಮೂಲಕವೇ ಹರೀಶ್ ಸಾವಿಗೆ ಸಾರ್ಥಕ ಸಂತಾಪ ಹೇಳಿದ್ರು ಹುಟ್ಟೂರಿನ ಜನ!

 

ಡಿಜಿಟಲ್ ಕನ್ನಡ ಟೀಮ್

ಸಾವಲ್ಲೂ ಪ್ರೇರೇಪಣೆ ನೀಡಿ ಹೋಗೋದು ಅಂದ್ರೆ ಹಿಂಗೆ ನೋಡಿ! ಕೆಲದಿನಗಳ ಹಿಂದೆ ನೆಲಮಂಗಲದ ಬಳಿ ಆದ ಅಪಘಾತದಲ್ಲಿ ತುಮಕೂರಿನ ಹರೀಶ್ ದೇಹವೇ ತುಂಡಾಗಿ ರಸ್ತೆಯಲ್ಲಿ ಬಿದ್ದ ದೃಶ್ಯ ಸುಲಭಕ್ಕೆ ಮಾಸುವಂಥದ್ದಲ್ಲ. ಅಂಥ ಸಂದರ್ಭದಲ್ಲೂ, ಸಾವಿನ ನಿಶ್ಚಿತತೆ ಅರಿತ ಹರೀಶ್ ತಮ್ಮ ಕೊನೆ ಆಸೆಯಾಗಿ ನೇತ್ರದಾನಕ್ಕೆ ಕೇಳಿಕೊಂಡಿದ್ದು ನಮ್ಮನ್ನೆಲ್ಲ ಕಲಕಿತ್ತು.

ಭಾನುವಾರ ಊರಿನಲ್ಲಿ ಅವರ 11ನೇ ದಿನದ ಕಾರ್ಯಗಳಾದವು. ಈ ಸಂದರ್ಭದಲ್ಲಿ ನಾರಾಯಣ ನೇತ್ರಾಲಯದ ವೈದ್ಯರನ್ನು ಆಹ್ವಾನಿಸಿದ ಊರಿನವರು ನೇತ್ರದಾನಕ್ಕೆ ಮುಂದಾಗಿ ಹರೀಶ್ ರಿಗೆ ಸಾರ್ಥಕ ಗೌರವ ಸಮರ್ಪಿಸಿದ್ದಾರೆ. ಹರೀಶ್ ಅವರ ಅಂತಿಮ ಉದಾತ್ತ ಕಾರ್ಯದಿಂದ ಪ್ರೇರೇಪಣೆ ಪಡೆದಿರುವ, ಅವರ ಹುಟ್ಟೂರು ಕಾರೇಗೌಡನಹಳ್ಳಿಯ 170 ಗ್ರಾಮಸ್ಥರು ಭಾನುವಾರ ನೇತ್ರದಾನದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿರುವುದಾಗಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

300 ಮಂದಿ ಜನಸಂಖ್ಯೆಯ ಗ್ರಾಮದಲ್ಲಿ 11- 82ರ ವಯೋಮಾನದ 170 ಮಂದಿ ನೇತ್ರದಾನ ಮಾಡಿದ್ದಾರೆ.

ಚಿತ್ರಕರ್ಮಿ ಮಾಯಾಚಂದ್ರ ಅವರು ಹರೀಶ್ ಸಾವಿನ ನಂತರ ಒದಗಿಸಿದ ಸ್ಫೂರ್ತಿಯನ್ನಿಟ್ಟುಕೊಂಡು ಕಿರುಚಿತ್ರ ಮಾಡುವುದಾಗಿ ಹೇಳಿದ್ದಾರೆ. ಇವೆಲ್ಲ ಧೈರ್ಯ- ಮಾನವೀಯ ಕಾಳಜಿ ಮೂಲಕ ಹರೀಶ್ ಸಾವಿನ ನಂತರವೂ ಜೀವಂತಿಕೆ ಮೆರೆಯುತ್ತಿರುವ ಮಾದರಿಗಳು.

Leave a Reply