ರೈತರ ಮೇಲೆ ಲಾಠಿ ಚಾರ್ಜ್ ಆಗೇ ಇಲ್ಲ ಅಂತಿದ್ದಾರೆ ಪರಮೇಶ್ವರ್, ಅಂಗಾರೆ ಈ ಪೋಟೋಗಳು ಹೇಳೋದು ಏನಾ..?!

Police lottycharge and 2 Buses damaged during the Chikkaballapur Farmers arrives with their Tractor to protest and demanding to Permanent Water Irrigation for the Chikkaballapur District held at Makri Circle in Bengaluru on Thursday.

ಡಿಜಿಟಲ್ ಕನ್ನಡ ಟೀಮ್

ಪರಮೇಶ್ವರಂಗೆ ಮೂರು ಕಣ್ಣು ಅಂತಾರೆ. ಆದರೆ ನಮ್ಮ ಹೋಮ್ ಮಿನಿಸ್ಟರ್ ಪರಮೇಶ್ವರ್ ಗೆ ಸಿಂಗಲ್ ಕಣ್ಣೂ ಇದ್ದಂಗಿಲ್ಲ, ಫುಲ್ ಕುರುಡಾಪತಿ ಆಗೋಗವ್ರೆ!

ಯಾಕೆ ಅಂತೀರಾ..?

ನೀರು ಕೇಳ್ಕೊಂಡು ಬೆಂಗಳೂರಿಗೆ ಬಂದ ರೈತರಿಗೆ ಪೊಲೀಸರು ಆ ಪಾಟಿ ತಾರಾಮಾರಿ ಬಡಿದು, ಆಸ್ಪತ್ರೆಗೆ ಕಳಸವ್ರೆ. ಬಾಡೀಲಿರೋ ಯಾವ ಪಾರ್ಟ್ ಬಗ್ಗೆನೂ ಬೇಧ-ಗೀದ ತೋರ್ಸಿಲ್ಲ. ಕೋಲು ತಗೊಂಡಿ ಮೈ ತುಂಬಾ ನಗಾರಿ ಬಾರಿಸವ್ರೆ. ಆದರೂ ನಮ್ ಪರಮೇಶ್ವರ್ ವಿಧಾನಸಭೇಲಿ ಪ್ರತಿಪಕ್ಷಗಳು ಶುಕ್ರವಾರ ಕೇಳಿದ ಪ್ರಶ್ನೆಗೆ ಉತ್ತರ ಕೊಡ್ತಾ, ಯಾವೊಬ್ಬ ರೈತನ ಮೇಲೂ ಲಾಠಿ ಚಾರ್ಜ್ ಆಗಿಲ್ಲ. ಎಲ್ಲ ಸುಳ್ಳೇ ಸುಳ್ಳು ಅಂದವ್ರೆ!

ಅಷ್ಟೇ ಅಲ್ಲ, ಒಂದ್ವೇಳೆ ಪೊಲೀಸರು ಲಾಠಿ ಚಾರ್ಜ್ ಏನಾದ್ರೂ ಮಾಡಿದ್ರೆ ಅದರ ಕತೇನೇ ಬೇರೆ ಆಗ್ತಿತ್ತು. ಜನ ಸಾಕಷ್ಟು ತೊಂದರೆ ಅನುಭವಿಸಬೇಕಾಗ್ತಿತ್ತು. ಆದರೆ ನಮ್ಮ ‘ವಿಶಾಲ ಹೃದಯಿ’ ಪೊಲೀಸರು ಅಂಗೇನೂ ಮಾಡಿಲ್ಲ, ಬಹಳ ತಾಳ್ಮೆಯಿಂದ ನಡಕೊಂಡವ್ರೆ ಅಂತ ಹೇಳವ್ರೆ.

ಇರಲಿ, ಅವರ ಮಾತಿನ ಬಗ್ಗೆ ಯಾವ ಕ್ಲಾರಿಫಿಕೇಷನ್ನೂ ಬೇಡ. ಇಲ್ಲಿರೋ ಫೋಟೋಗಳನ್ನು ನೋಡಿ. ಇದು ಲಾಠಿ ಚಾರ್ಜ್ ಅಲ್ಲ ಅನ್ನುವುದಾದರೆ, ಅದು ರೈತರು ಬೆಳೆದ, ಪರಮೇಶ್ವರ್ ಹೊಟ್ಟೆಗಿಳಿಯುವ ಅನ್ನದ ಮೇಲಾಣೆ!

1

Police lottycharge and 2 Buses damaged during the Chikkaballapur Farmers arrives with their Tractor to protest and demanding to Permanent Water Irrigation for the Chikkaballapur District held at Makri Circle in Bengaluru on Thursday.

2

Farmers lati charge-1

1 COMMENT

Leave a Reply