ಬಿಳಿ ಕಾಲರ್ ಉದ್ಯೋಗದ ಚರ್ಚೆ ಎಲ್ರೂ ಮಾಡ್ತಾರೆ, ಆದ್ರೆ ಸಣ್ಣಪಟ್ಟಣಗಳ ಕುಶಲ ಉದ್ಯೋಗ ಚಿತ್ರಣ ಹೇಗಿದೆ?

ಡಿಜಿಟಲ್ ಕನ್ನಡ ಟೀಮ್

ಯುವ ಜನತೆಗೆ ಉದ್ಯೋಗ ಎಂಬುದು ಹಾಲಿ ಭಾರತದ ಭಾರೀ ಸವಾಲು. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾಗಳೆಲ್ಲ ಇವಕ್ಕೇನೇ. ಭಾರತ ಜಗತ್ತಿನಲ್ಲೇ ಅತಿ ಬೃಹತ್ ಯುವ ಸಮುದಾಯ ಹೊಂದಿದೆ ಅನ್ನೋದು ಎಷ್ಟು ಸಂಭ್ರಮದ ವಿಷಯವೋ, ಅಷ್ಟೇ ವಾಸ್ತವ ಏನೆಂದರೆ ಈ ಕೈಗಳಿಗೆ ಉದ್ಯೋಗ ಸಿಗದಿದ್ದರೆ ಅದು ಹತಾಶ ಭಾರತವನ್ನು ಸೃಷ್ಟಿಸಲಿದೆ ಅನ್ನೋದು.

ಉದ್ಯೋಗ ಎದಕೂಡಲೇ ಐಟಿ, ಬ್ಯಾಂಕಿಂಗ್ ಅಂತೆಲ್ಲ ಗಮನ ಹರಿಯುತ್ತದೆ. ಆದರೆ ಕಡಿಮೆ ಶಿಕ್ಷಣದ ದೊಡ್ಡ ಜನವರ್ಗಕ್ಕೆ ಉದ್ಯೋಗದ ಆಸರೆ ಯಾವುದು? ಹಳೆಯ ಮಾರುಕಟ್ಟೆ ವ್ಯವಸ್ಥೆಯಾದ ಜವಳಿ ಉದ್ಯಮ ಅಂತ ಹೇಳುತ್ತಿದೆ 2011ರ ಜನಗಣತಿ ವಿಶ್ಲೇಷಣೆ. 2011ರ ಜನಸಂಖ್ಯೆ ಸಮೀಕ್ಷೆಯ ದತ್ತಾಂಶಗಳನ್ನು ಇರಿಸಿಕೊಂಡು ಭಾರತದ 506 ಸಣ್ಣ ಪಟ್ಟಣಗಳಲ್ಲಿ ಯಾವೆಲ್ಲ ಉದ್ಯೋಗ ನೀಡಿಕೆ ವಿಷಯದಲ್ಲಿ ಮುಂದಿವೆ ಅಂತ ಸಮೀಕ್ಷೆಯೊಂದನ್ನು ಮಾಡಲಾಗಿದೆ.

ಇಲ್ಲಿ ನಂಬರ್ 1 ಸ್ಥಾನದಲ್ಲಿರೋದು ತಮಿಳುನಾಡಿನ ತಿರುಪುರ. ಮಂಗಳವಾರ ದಲಿತ ಯುವಕನ ಹತ್ಯೆ ಮೂಲಕ ಕೆಟ್ಟದಾಗಿ ಸುದ್ದಿ ಮಾಡಿದ್ದ ತಿರುಪುರ, ಉದ್ಯೋಗ ನೀಡಿಕೆಯಲ್ಲಿ ಮಾತ್ರ, ತನ್ನ ಜನಸಂಖ್ಯೆ ಶೇ. 44ರಷ್ಟು ಜನಕ್ಕೆ ಉದ್ಯೋಗ ನೀಡಿ ಸಮೀಕ್ಷೆಯ ಮೊದಲ ಸ್ಥಾನದಲ್ಲಿದೆ. ಉದ್ಯೋಗ ನೀಡಿರುವ ವಲಯ ಜವಳಿ ಮತ್ತು ಸಿದ್ಧ ಉಡುಪು ತಯಾರಿಕೆ. ಇದರ ನಂತರದ ಸ್ಥಾನದಲ್ಲಿ ಪಶ್ಚಿಮ ಬಂಗಾಳದ ಶಾಂತಿಪುರ, ತಮಿಳುನಾಡಿನ ಈರೋಡ್ ಮತ್ತು ರಾಜಪಾಳ್ಯಂ ಮತ್ತು ಆಂಧ್ರಪ್ರದೇಶದ ಮಂಗಳಗಿರಿ ನಗರಗಳು ಅತಿ ಉದ್ಯೋಗಸ್ಥರನ್ನು ಹೊಂದಿರುವ ಟಾಪ್ 5 ರಲ್ಲಿ ಕ್ರಮವಾಗಿ ಸ್ಥಾನ ಪಡೆದಿವೆ. ಸರ್ಕಾರಿ ಉದ್ಯೋಗಿಗಳನ್ನು ಹೊಂದಿರುವ ನಗರಗಳ ಪೈಕಿ ದೆಹಲಿಯದ್ದು ಸಿಂಹಪಾಲು ಇದ್ದರೆ, ಬೆಂಗಳೂರು ಹಳೆ ಮತ್ತು ಹೊಸ (ಐಟಿ ವಲಯ) ಮಿಶ್ರ ಉದ್ಯೋಗ ಆರ್ಥಿಕತೆಯನ್ನು ಹೊಂದಿದೆ.

ಈ ಪಟ್ಟಿಯಲ್ಲಿ ಬಿಹಾರದ 6 ಪಟ್ಟಣಗಳು, ಉತ್ತರ ಪ್ರದೇಶದ 3 ನಗರಗಳು, ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಪ್ರದೇಶಗಳು ಶೇಕಡಾ 20 ಕ್ಕಿಂತ ಕಡಿಮೆ ಪ್ರಮಾಣದ ಉದ್ಯೋಗಸ್ಥರನ್ನು ಹೊಂದಿರುವ ಪಟ್ಟಣಗಳಾಗಿವೆ.

ಪಟ್ಟಿಯಲ್ಲಿ ತಿರುಪುರದ ನಂತರ ಸ್ಥಾನದಲ್ಲಿ ಶಾಂತಿಪುರ 42%, ಈರೋಡ್ 41% ರಷ್ಟು ಉದೋಗ್ಯಸ್ಥರನ್ನು ಹೊಂದಿವೆ. ಇನ್ನೂ ಕಳಪೆ ಸ್ಥಾನ ಪಡೆದಿರುವ ಪೈಕಿ ಉತ್ತರ ಪ್ರದೇಶದ ಮುಗಾಲ್ ಸಾರೈ 17% ಮತ್ತು ಅಕ್ಬರ್ ಪುರ್ 19%, ಬಿಹಾರದ ಔರಾಂಗಬಾದ್ 19% ರಷ್ಟು ಇದೆ.

Leave a Reply