ಜಾನಪದ ಗೀತಗಾಯನ ಸ್ಪರ್ಧೆ ಬಹುಮಾನ ಮೊತ್ತ ₹10 ಲಕ್ಷ, ಇದು ನಾರಾಯಣಗೌಡರ ಚಿತ್ತ!

ಡಿಜಿಟಲ್ ಕನ್ನಡ ಟೀಮ್

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಜಾನಪದ ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕೊಡುವ ಬಹುಮಾನದ ಮೊತ್ತ ಬರೋಬ್ಬರಿ ಹತ್ತು ಲಕ್ಷ ರುಪಾಯಿ!

ಒಂದೈದು ಸಾವಿರ ರುಪಾಯಿಯ ಬೆಳ್ಳಿ ಕಪ್ಪೋ, ಇಲ್ಲ ಹತ್ತು ಸಾವಿರ ರುಪಾಯಿಯ ಚಿನ್ನದ ಪದಕ ಕೊಡೊದೇ ದುಬಾರಿ ಆಗಿರೋ ಈ ಕಾಲದಲ್ಲಿ ಅದೂ ಹೋಗಿ, ಹೋಗಿ ಜಾನಪದ ಗೀತೆ ಗಾಯನ ಸ್ಪರ್ಧೆಗೆ ಯಾರು ತಾನೇ ಹತ್ತು ಲಕ್ಷ ರುಪಾಯಿ ಬಹುಮಾನ ಕೊಡ್ತಾರೆ, ಸರಕಾರವೇ ಇಂಥ ಸಾಹಸಕ್ಕೆ ಮುಂದಾಗದೇ ಇರೋವಾಗ ಅನ್ನೋ ಪ್ರಶ್ನೆ ಕಾಡುತ್ತೆ ಅಲ್ಲವೇ..?

ಆದರೆ ನೀವು ನಂಬಲೇಬೇಕು. ಇಂಥದೊಂದು ಶ್ಲಾಘನೀಯ ಕೆಲಸಕ್ಕೆ ಕೈ ಹಾಕಿರುವುದು ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡರ ಬಣ). ಬರುವ ಜೂನ್ ತಿಂಗಳಲ್ಲಿ ರಾಜ್ಯ ಮಟ್ಟದ ಅಂತರಕಾಲೇಜು ಜಾನಪದ ಗೀತಗಾಯನ ಸ್ಪರ್ಧೆಯನ್ನು ಅದು ಹಮ್ಮಿಕೊಂಡಿದೆ. ಕನ್ನಡ ನಾಡು, ನುಡಿ ರಕ್ಷಣೆಗೆ ನಾನಾ ಹೋರಾಟಗಳನ್ನು ದಾಖಲಿಸಿರುವ ವೇದಿಕೆ ಇದೀಗ ಭಾಷಾ ಸಾಹಿತ್ಯದ ತಾಯಿ ಬೇರು ಜಾನಪದ ಕಲೆ ಉಳಿವು, ಬೆಳವಣಿಗೆಗೆ ಇಂಥದೊಂದು ಮಾದರಿ ಯೋಜನೆ ಹಾಕಿಕೊಂಡಿದೆ. ಸಿನಿಮಾ ಗೀತೆ ಗಾಯನವೊಂದೇ ಸ್ಪರ್ಧಾ ಪ್ರಪಂಚದ ಸೊತ್ತು ಎಂಬ ಭ್ರಮೆ ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ನಶಿಸುತ್ತಿರುವ ಜಾನಪದ ಹಾಡುಗಾರಿಕೆ ಕಾಪಿಟ್ಟುಕೊಳ್ಳಲು ರಕ್ಷಣಾ ವೇದಿಕೆ ತೋರಿರುವ ಕಾಳಜಿ ಮಾದರಿಯದ್ದಾಗಿದೆ.

ವೇದಿಕೆ ಕಾರ್ಯದರ್ಶಿ ಸತೀಶ್ ಗೌಡ ವಿರಚಿತ ‘ರಂಗಕುಣಿತ’ ಮತ್ತು ‘ಬೀರುಗಾನ’ ಎಂಬ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ನಾರಾಯಣಗೌಡರು ಇದನ್ನು ಪ್ರಕಟಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್, ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ, ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ, ಜಾನಪದ ವಿದ್ವಾಂಸ ಪ್ರೊ. ಮಳಲಿಗೌಡ ಸಮ್ಮುಖದಲ್ಲಿ.

karave (2)

1 COMMENT

  1. Society name is ‘Kannada Rakshanaa Vedike’ president’s name; T. A. Naraayana Gowda ! what is T. A. he should have put in sweet Kannada words !

Leave a Reply