ಪನ್ಮಂಡ್ರಿ ಕ್ರಾಸ್: ವಾರಾಂತ್ಯಕ್ಕೆ ‘ನೋಡೆಬಲ್’ ಕಿರುಚಿತ್ರ

 

ಡಿಜಿಟಲ್ ಕನ್ನಡ ಟೀಮ್

ಹೆದ್ದಾರಿಯಲ್ಲಿ ಕಾಡುವ ಭೂತ, ಒಂಟಿಮನೆಯ ಪ್ರೇತ ಹಿಂಗೆಲ್ಲ ಭೂತ- ಪ್ರೇತಗಳ ಸುತ್ತ ಕತೆ ಹೆಣೆದ ಸಾಕಷ್ಟು ಚಿತ್ರಗಳಿವೆ. ಇಂಥದೇ ವಸ್ತುವಿಟ್ಟುಕೊಂಡು ಯೂಟ್ಯೂಬಿನಲ್ಲಿ ಲಭ್ಯವಿದೆ ಪನ್ಮಂಡ್ರಿ ಕ್ರಾಸ್. ಒಳ್ಳೇದು- ಕೆಟ್ಟದ್ದು ಎಂಬ ವ್ಯಾಖ್ಯಾನವೊಂದನ್ನು ಕೊನೆಯಲ್ಲಿ ಉಳಿಸಿಕೊಂಡಿರೋದ್ರಿಂದ ಸಸ್ಪೆನ್ಸ್ ಕೆಟಗರಿಗೆ ಅರ್ಹವಾಗುತ್ತದೆ.

ಉಳಿದಂತೆ 13.59 ನಿಮಿಷಗಳ ಈ ಕಿರುಚಿತ್ರ ನೋಡಿ ಅಂತ ರೆಕಮಂಡ್ ಮಾಡಬಹುದಾಗಿದ್ದಕ್ಕೆ ನೀಟಾದ ಚಿತ್ರೀಕರಣ, ಸಂಕಲನಗಳನ್ನು ಕಾರಣಗಳನ್ನಾಗಿಸಬಹುದು. ಇಂಗ್ಲಿಷ್ ಸಬ್ ಟೈಟಲ್ ಗಳೊಂದಿಗೆ ಮೂಡಿರುವ ಕಿರುಚಿತ್ರದ ನಿರ್ದೇಶಕರು ಅರ್ಜುನ್ ಕುಮಾರ್ ಎಸ್.

ಪನ್ಮಂಡ್ರಿ ಕ್ರಾಸ್ ಗೆ ಇಲ್ಲಿ ತಿರುಗಿಕೊಳ್ಳಬಹುದು..

 

Leave a Reply