ಇಂದು ವಿಶ್ವ ಜಲದಿನ, ಅಶುದ್ಧ ನೀರು ಕುಡಿದು ಸಾಯ್ತಾರೆ ವರ್ಷಕ್ಕೆ 8.40 ಲಕ್ಷ ಜನ!

ಡಿಜಿಟಲ್ ಕನ್ನಡ ಟೀಮ್

ಇಂದು ವಿಶ್ವ ಜಲದಿನ. ಎಲ್ಲೆಲ್ಲೂ ನೀರಿನ ಮಹತ್ವ, ಅದರ ಉಳಿಕೆ ಬಗ್ಗೆ ಚರ್ಚೆ. ಆದರೆ, ಚರ್ಚೆಯ ಪರಿಣಾಮ ಮತ್ತು ಸಮಸ್ಯೆ ಬಗೆಹರಿಸಲು ಕೈಗೊಳ್ಳುವ ಕ್ರಮ ಮಾತ್ರ ಕಡಿಮೆ. ಪ್ರಪಂಚದಲ್ಲಿ ಹೆಚ್ಚುತ್ತಿರುವ ಶುದ್ಧ ನೀರಿನ ಕೊರತೆ ಬಗ್ಗೆ ಅರಿವು ಮೂಡಿಸಿ ಈ ನೀರಿನ ಸಂಪನ್ಮೂಲ ನಿರ್ವಹಣೆ ಬಗ್ಗೆ ತಿಳಿಯುವ ನಿಟ್ಟಿನಲ್ಲಿ ಮಾರ್ಚ್ 22ರ ದಿನವನ್ನು ವಿಶ್ವ ಜಲ ದಿನ ಅಂತ ಆಚರಿಸೋದು.

ಬೇಸಿಗೆಯ ಆರಂಭಿಕ ಹಂತದಲ್ಲಿ ರಾಜ್ಯದ ಬಹುತೇಕ ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಎದುರಾಗಿದೆ. ಜಲಾಶಯದಿಂದ ಹಿಡಿದು ಕೆರೆ ಕಟ್ಟೆಗಳು ಒಣಗಿ ನಿಂತಿವೆ. ವ್ಯವಸಾಯ ಹಾಗೂ ದಿನಬಳಕೆಗೆ ನೀರಿನ ಅಭಾವ ಹೆಚ್ಚುತ್ತಿದೆ. ಪರಿಸ್ಥಿತಿ ಹೀಗಿರುವಾಗ ಕುಡಿಯಲು ಯೋಗ್ಯವಾದ ಶುದ್ಧ ನೀರಿನ ಅಭಾವದ ಪರಿಣಾಮ ಬಗ್ಗೆ ಯೋಚಿಸಿದರೆ, ತಲೆ ಕೆಡುತ್ತದೆ. ಈ ಸಮಸ್ಯೆ ಕೇವಲ ರಾಜ್ಯದ ಕಥೆ ಅಂದ್ಕೊಬೇಡಿ. ದೇಶ ಹಾಗೂ ವಿಶ್ವದ ಬಹುತೇಕ ಕಡೆ ಈ ಸಮಸ್ಯೆ ಬೃಹದಾಕಾರವಾಗಿ ತಲೆ ಎತ್ತಿದೆ.

  • ವಿಶ್ವದಾದ್ಯಂತ 1.8 ಬಿಲಿಯನ್ ಜನರು ಶುದ್ಧ ನೀರಿನ ಅಭಾವ ಎದುರಿಸುತ್ತಿದ್ದಾರೆ.
  • ಪ್ರಪಂಚದ ಮೂರನೇ ಒಂದು ಭಾಗದಷ್ಟು ಶಾಲೆಗಳಲ್ಲಿ ಶುದ್ಧ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಇಲ್ಲ.
  • 2015ರ ಜನವರಿಯಲ್ಲಿ ದ ವರ್ಲ್ಡ್ ಎಕನಾಮಿಕ್ ಫೋರಂ ನೀಡಿದ ವರದಿ ಪ್ರಕಾರ, ಶುದ್ಧ ನೀರಿನ ಕೊರತೆ ವಿಶ್ವದ ಅಗ್ರಮಾನ್ಯ ಸಮಸ್ಯೆಯಾಗಿದೆ.
  • ನೀರಿನ ಸಂಬಂಧಿ ಕಾಯಿಲೆಯಿಂದ ಪ್ರತಿ ವರ್ಷಕ್ಕೆ ವಿಶ್ವದಲ್ಲಿ 8.40 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ.
  • ನೀರಿಗೆ ಸಂಬಂಧಿಸಿದ ಕಾಯಿಲೆಯಿಂದ ಪ್ರತಿ 90 ಸೆಕೆಂಡ್ ಗೆ ಮಗುವೊಂದು ಮೃತಪಡುತ್ತಿದೆ.
  • ಗ್ರಾಮೀಣ ಪ್ರದೇಶದ ಶೇ.82ರಷ್ಟು ಶುದ್ಧ ನೀರಿನ ವ್ಯವಸ್ಥೆಯನ್ನು ಹೊಂದಿಲ್ಲ.
  • ಪ್ರಸ್ತುತ ನೀರಿನ ಬಳಕೆ ಪದ್ಧತಿಯನ್ನು ಬದಲಿಸದಿದ್ದರೆ, ಮುಂದಿನ 15 ವರ್ಷಗಳಲ್ಲಿ ಶುದ್ಧ ನೀರಿನ ಪ್ರಮಾಣ ಶೇ.40ರಷ್ಟು ಕುಸಿತ ಕಾಣಲಿದೆ.

ಶುದ್ಧ ನೀರಿನ ಸಮಸ್ಯೆಯ ತೀವ್ರತೆಯನ್ನು ಮನದಟ್ಟಾಗಬೇಕೆಂದರೆ, ಈ ಚಿತ್ರಗಳನ್ನು ನೋಡಿ.

world-water-day

Leave a Reply