ಬ್ರಸೆಲ್ಸ್ ನ ಜವೆಂಟಮ್ ವಿಮಾನ ನಿಲ್ದಾಣದಲ್ಲಿ ಸ್ಫೋಟ, 26 ಸಾವು

ಡಿಜಿಟಲ್ ಕನ್ನಡ ಟೀಮ್

ಬೆಲ್ಜಿಯಂನ ಬ್ರಸೆಲ್ಸ್ ನಗರದ ಜವೆಂಟಮ್ ವಿಮಾನ ನಿಲ್ದಾಣದಲ್ಲಿ ಎರಡು ಸ್ಫೋಟಗಳಾಗಿದ್ದು, ಸದ್ಯದ ವರದಿ ಪ್ರಕಾರ 26 ಮಂದಿ ಸಾವು ಸಂಭವಿಸಿದೆ.

ಒಬ್ಬ ಭಾರತೀಯ ಸೇರಿದಂತೆ 58 ಮಂದಿ ಗಾಯಗೊಂಡಿದ್ದಾರೆ. ಕಳೆದ ವರ್ಷ ನವೆಂಬರ್ 13ರಂದು ಪ್ಯಾರಿಸ್ ಮೇಲಿನ ಜಿಹಾದಿ ದಾಳಿಯ ಆರೋಪಿ ಸಲಾಹ್ ಅಬ್ದೆಸ್ಲಾಮ್ ನನ್ನು ಬ್ರಸೆಲ್ಸ್ ನಲ್ಲಿ ಬಂಧಿಸಿದ ನಾಲ್ಕು ದಿನಗಳ ನಂತರ ಈ ಘಟನೆ ನಡೆದಿರುವುದು ಉಗ್ರರ ದಾಳಿಯ ಸೂಚನೆ ನೀಡಿದೆ. ಆದರೆ, ಬೆಲ್ಜಿಯಂ ಸರ್ಕಾರ ಈ ಸ್ಫೋಟಕ್ಕೆ ಅಧಿಕೃತ ಕಾರಣ ಏನೆಂಬುದನ್ನು ಈವರೆಗೂ ತಿಳಿಸಿಲ್ಲ. ಅಲ್ಲಿನ ಮಾಧ್ಯಮಗಳ ವರದಿ ಪ್ರಕಾರ ಇಲ್ಲಿ ಬಾಂಬ್ ಸ್ಫೋಟ ನಡೆಸಲಾಗಿದೆ. ತುರ್ತು ಸೇವೆ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿನ ಜನರನ್ನು ಖಾಲಿ ಮಾಡಿಸಿದ್ದಾರೆ. ಈ ಎರಡು ಸ್ಫೋಟಕ್ಕೂ ಮುನ್ನ ಅರೆಬಿಕ್ ನಲ್ಲಿ ಘೋಷಣೆ ಕೂಗಿ ಗುಂಡು ಹಾರಿಸಲಾಯಿತು ಎಂದು ಅಲ್ಲಿನ ಬೆಲ್ಗಾ ನ್ಯೂಸ್ ಏಜೆನ್ಸಿ ತಿಳಿಸಿದೆ. ಇಲ್ಲಿನ ಎಲ್ಲ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ವಿಮಾನ ನಿಲ್ದಾಣಕ್ಕೆ ಯಾರೂ ಆಗಮಿಸದಂತೆ ಸಂದೇಶ ರವಾನಿಸಲಾಗಿದೆ.

Leave a Reply