ಹೆಡ್ಲಿ ತಪ್ಪೊಪ್ಪಿಗೆ ಮುಂದುವರಿದ ಭಾಗದಲ್ಲಿ ಭಾರತ ದ್ವೇಷ, ಶಿವಸೇನೆ-ಪಾಕ್ ಪ್ರಸ್ತಾಪ

ಡಿಜಿಟಲ್ ಕನ್ನಡ ಟೀಮ್

ಪಾಕಿಸ್ತಾನ ಮತ್ತು ಅಮೆರಿಕ ಮೂಲದ ಉಗ್ರ ಡೇವಿಡ್ ಹೆಡ್ಲಿಯ ನ್ಯಾಯಾಲಯದ ವಿಚಾರಣೆ ಮುಂದುವರಿದಿದ್ದು, ಈ ಬಾರಿ ಮತ್ತಷ್ಟು ಮಾಹಿತಿಗಳನ್ನು ಹೊರ ಹಾಕಿದ್ದಾನೆ. ಶುಕ್ರವಾರ ಅಮೆರಿಕದ ಅಜ್ಞಾತ ಸ್ಥಳದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ನ್ಯಾಯವಾದಿ ಅಬ್ದುಲ್ ವಹಾಬ್ ಖಾನ್ ಅವರ ಪ್ರಶ್ನೆಗೆ ಉತ್ತರಿಸಿದ ಹೆಡ್ಲಿ ಬಾಯ್ಬಿಟ್ಟ ಪ್ರಮುಖ ಅಂಶಗಳು ಹೀಗಿವೆ.

  • ತನ್ನ ತಂದೆ ತೀರಿಕೊಂಡ ವಾರಗಳ ನಂತರ ಪಾಕಿಸ್ತಾನದ ಅಂದಿನ ಪ್ರಧಾನಿ ಯೂಸುಫ್ ರಜಾ ಗಿಲಾನಿ ನಮ್ಮ ಮನೆಗೆ ಭೇಟಿ ಕೊಟ್ಟಿದ್ದರು. ಇದನ್ನು ಮುಂಬಯಿ ದಾಳಿ ನಂತರ ಕೊಟ್ಟ ಭೇಟಿ ಎಂದು ವ್ಯಾಖ್ಯಾನಿಸಬೇಕಿಲ್ಲ. ನನ್ನ ತಂದೆಗೆ ನಾನು ಲಷ್ಕರೆ ಉಗ್ರ ಸಂಘಟನೆ ಸಾಂಗತ್ಯದಲ್ಲಿರೋದು ಗೊತ್ತಿತ್ತು. ಈ ಬಗ್ಗೆ ಅವರಿಗೆ ಅಸಮಾಧಾನವಿತ್ತು.
  • 1971ರ ಡಿ.7ರಂದು ಭಾರತ ಮತ್ತು ಪಾಕಿಸ್ತಾನ ಯುದ್ಧದ ವೇಳೆ ಭಾರತೀಯ ಯುದ್ಧ ವಿಮಾನ ನಮ್ಮ ಶಾಲೆಯ ಮೇಲೆ ಬಾಂಬ್ ಹಾಕಿತು. ಶಾಲೆಯಲ್ಲಿ ಕೆಲಸ ಮಾಡುತ್ತಿದ್ದವರು ಸತ್ತರು. 10 ವರ್ಷ ವಯಸ್ಸಿನವನಿದ್ದಾಗಲೇ ನಾನು ಭಾರತ ಮತ್ತು ಭಾರತೀಯರನ್ನು ದ್ವೇಷಿಸಲು ಆರಂಭಿಸಿದೆ. ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಲು ಇದೇ ಪ್ರಮುಖ ಕಾರಣ.
  • ಅಮೆರಿಕದಲ್ಲಿ ಶಿವಸೇನೆ ಪಕ್ಷಕ್ಕೆ ದೇಣಿಗೆ ಸಂಗ್ರಹಿಸುವ ಕಾರ್ಯಕ್ರಮ ಸ್ವತಃ ನಾನೇ ಆಯೋಜಿಸಿದ್ದೆ. ಆದರೆ ಅಲ್ಲಿ ಠಾಕ್ರೆ ಅವರನ್ನು ಕೊಲ್ಲುವ ಯಾವುದೇ ಉದ್ದೇಶ ಹೊಂದಿರಲ್ಲಿಲ್ಲ. ಆದರೆ ನಂತರದಲ್ಲಿ ಶಿವಸೇನೆ ಸಂಸ್ಥಾಪಕ ಬಾಲ್ ಠಾಕ್ರೆ ಅವರನ್ನು ಕೊಲ್ಲುವ ಪ್ರಯತ್ನ ನಡೆಸಿದ್ದೆವು. ಈ ವೇಳೆ, ದಾಳಿ ಮಾಡಬೇಕಿದ್ದವರು ಪೊಲೀಸರ ವಶಕ್ಕೆ ಸಿಕ್ಕಿ ಬಿದ್ದರು. ಆನಂತರ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.

Leave a Reply