ಒಗ್ಗೂಡಿಸುವ ಇಂಥ ಚಿತ್ರಗಳತ್ತ ಅರಳಿದರೆ ಸಂವೇದನೆ, ಮಾನವತೆಯನ್ನು ಕಾಡದು ಯಾವುದೇ ವಿಭಜನೆ

ಚಿತ್ರ ಕೃಪೆ:  ಒಲಿವಿಯಾ ಎಲ್ಲಿಸ್

ಡಿಜಿಟಲ್ ಕನ್ನಡ ಟೀಮ್

ನಮ್ಮನ್ನು ಯಾವುದು ಒಗ್ಗೂಡಿಸುತ್ತೋ ಆ ಬಗ್ಗೆಯೇ ನಮ್ಮ ಗಮನವಿದ್ದರೆ ,ನಮ್ಮ ವಿಭಜಿಸುವ ಶಕ್ತಿ ಸೊರಗುತ್ತದೆ. (When we begin focusing on what unites us, we will stop focusing on what divides us.)

ಸ್ಥಳ : Presbyterian Day School in Clarksdale, Mississippi,

ಪ್ರೆಸ್ಬಿಟೇರಿಯನ್ ಡೇ ಸ್ಕೂಲ್ ನಲ್ಲಿ ಎಂದಿನಂತೆ ಮಕ್ಕಳು ಮಲಗಿಸುವ ಸಮಯದಲ್ಲಿ ಅವರನ್ನು ನೋಡಲು ರೌಂಡ್ ಹೊರಟ ಅಧ್ಯಾಪಕಿ ಒಲಿವಿಯಾ ಎಲ್ಲಿಸ್ ಇಬ್ಬರು ಮಕ್ಕಳು ಕೈ ಹಿಡಿದು ಮಲಗಿರುವುದು ನೋಡುತ್ತಾರೆ. ಅದು ಒಂದು ವಿಶಿಷ್ಟ ನೋಟ. ಅದನ್ನು ಜಗತ್ತಿಗೆ ಪ್ರಚುರ ಪಡಿಸುವುದರಿಂದ ಒಂದು ಧನಾತ್ಮಕ ವಿಷಯ ಹಂಚಿದಂತೆ ಆಗುತ್ತದೆ ಎನ್ನುವುದು ಆ ಕ್ಷಣದಲ್ಲಿ ಆಕೆಗೆ ಅನ್ನಿಸುತ್ತೆ. ತಕ್ಷಣ ಓಡಿ ಹೋಗಿ ತಮ್ಮ ಕ್ಯಾಮರದಲ್ಲಿ ಆ ನೋಟವನ್ನು ಸೆರೆ ಹಿಡಿಯುತ್ತಾರೆ. ತಮ್ಮ ಶಾಲೆಯ ಫೇಸ್ಬುಕ್ ಪೇಜ್ ನಲ್ಲಿ  ‘ಆತ್ಮಿಯರೇ ನಾವು ಒಬ್ಬರನ್ನು ಒಬ್ಬರು ಪ್ರೀತಿಸೋಣ. ಪ್ರೀತಿಯೇ ದೇವರು, ಪ್ರೀತಿಯಿಂದ ಹುಟ್ಟಿದ ಪ್ರೀತಿಯಂದ ದೇವರನ್ನು ಕಾಣಲು ಸಾಧ್ಯ ‘ ಎಂದು ಬರೆದು ಕೆಳಗಿನ ಫೋಟೋ ಹಾಕುತ್ತಾರೆ.

ಅದು ವೈರಲ್ ಆಗಿ ಹಬ್ಬುತ್ತದೆ.
ಟುಡೇ.ಕಾಂ ಗೆ ಸಂದರ್ಶನ ನೀಡಿದ ಅಧ್ಯಾಪಕಿ ಒಲಿವಿಯಾ ಹೇಳುತ್ತಾರೆ-  ‘ನಾವು ಶಾಲೆಗೇ ಸೇರಿದ ಮಕ್ಕಳಿಗೆ ಹೇಳುವುದು  ‘ಲವ್ ಈಚ್ ಅದರ್ ‘ ಅನ್ನುವ ಮಂತ್ರ. ನಾವೆಲ್ಲಾ ಒಂದೇ. ನಮ್ಮ ಧರ್ಮ, ನಮ್ಮ ಬಣ್ಣ ನಮ್ಮನ್ನು ವಿಭಜಿಸುವುದಿಲ್ಲ. ಆದರೆ ನಮ್ಮ ಯೋಚನೆ ನಮ್ಮ ವಿಭಜಿಸುತ್ತೆ.’

ಮಕ್ಕಳ ಮುಗ್ದತೆ ಎಷ್ಟು ಚನ್ನ! ಚಿತ್ರದ ಎಡಕ್ಕೆ ಇರುವ ಮಗುವಿನ ಹೆಸರು ಲೂಸಿ ಹಾರಿಸ್ ಹಾಗೂ ಬಲದಲ್ಲಿ  ಸಮಿಯಹ್ ಮೂರ್. ಈ ಇಬ್ಬರು ಮಕ್ಕಳು ಪ್ರಥಮ ಭೇಟಿಯಲ್ಲಿ, ಕೆಲವೇ ಕ್ಷಣಗಳಲ್ಲಿ ಆತ್ಮೀಯ ಸ್ನೇಹಿತರಾದರು ಎಂದು ಹೇಳಲು ಒಲಿವಿಯಾ ಮರೆಯಲಿಲ್ಲ.

ಹುಟ್ಟಿದಾಗ ಇರದ ಅಂತರ ಬೆಳೆದಂತೆ ಹೆಚ್ಚುವುದೇಕೆ? ಉತ್ತರ ಖಂಡಿತಾ ನಿಮ್ಮ ಬಳಿಯೇ ಇದೆ.

Leave a Reply