ಬೇಸಿಗೆ ಝಳ, ಬೆತ್ತಲೆ ನಿದ್ರೆಯಲ್ಲಿರುವ ನಿರಾಳ

ಡಿಜಿಟಲ್ ಕನ್ನಡ ಟೀಮ್

ಬೇಸಿಗೆ ಎಲ್ಲರನ್ನೂ ಹಿಂಡುತ್ತಿದೆ. ಸೂರ್ಯನ ಝಳದ ಈ ಅವಧಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ, ದೇಹವನ್ನು ಚೆಂದವಾಗಿ ಇಟ್ಟುಕೊಳ್ಳುವುದಕ್ಕೆ ಹಲವು ಬಗೆಯ ಸಲಹೆಗಳು ಸಿಗುತ್ತವೆ. ಎಳೆನೀರು ಕುಡಿಯೋದು, ತಂಪು ಕನ್ನಡಕ ಧರಿಸೋದು ಎಂಬೆಲ್ಲ ಸಲಹೆಗಳ ಸಾಲಿಗೆ ಇನ್ನೊಂದು ಮಾರ್ಗದರ್ಶನವಿದೆ. ಇದು ನಿಮಗೆ ಮುಜುಗರ ಎನ್ನಿಸಬಹುದು, ಆದರೂ ಹಲವು ಸಂಶೋಧನೆಗಳು ಹೇಳುತ್ತಿರೋದೇನೆಂದರೆ…. ರಾತ್ರಿ ಬೆತ್ತಲೆ ನಿದ್ರಿಸೋದರಿಂದ ದೇಹಕ್ಕೆ ಹಲವು ಲಾಭಗಳಿವೆ ಅಂತ.

ಅಮೆರಿಕದಲ್ಲಿ ಶೇ 8 ರಷ್ಟು ಜನ ಹೀಗೆ ನಿದ್ದೆ ಮಾಡೋದು. ಹೀಗೆ ಮಾಡೋದರಿಂದ  ಆರೋಗ್ಯಕ್ಕೆ ಸಿಗುವ ಲಾಭಗಳು ಹೀಗಿವೆ ನೋಡಿ.

  • ಬೆತ್ತಲಾಗಿ ನಿದ್ರಿಸುವುದರಿಂದ ದೇಹ ಆರಾಮಾದಾಯಕವಾಗಲಿದ್ದು ಶೀಘ್ರವೇ ನಿದ್ದೆ ಬರುತ್ತದೆ. ಇದರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ. ಬಟ್ಟೆ ಧರಿಸಿ ನಿದ್ದೆ ಮಾಡುವುದರಿಂದ ಈ ವೇಳೆ ದೇಹ ಬಿಡುಗಡೆಗೊಳಿಸುವ ಉಷ್ಣಾಂಶ ಹೊರ ಬರದೇ ಆನಾರೋಗ್ಯ ಉಂಟಾಗಲಿದೆ. ನಗ್ನರಾಗಿ ಮಲಗಿದರೆ ದೇಹದ ಉಷ್ಣಾಂಶ ಕಡಿಮೆಯಾಗಿ ಆರೋಗ್ಯ ಹೆಚ್ಚಲಿದೆ ಅಂತ ಆಸ್ಟ್ರೇಲಿಯದ ಸಂಶೋಧಕರು ಸಾರುತ್ತಿದ್ದಾರೆ.
  • ದೇಹದ ಉಷ್ಣಾಂಶ ಕಡಿಮೆಯಾದರೆ ಸಹಜವಾಗಿಯೇ ಹೆಚ್ಚು ಸಮಯದವರೆಗೂ ಗಾಢ ನಿದ್ದೆ ಮಾಡಬಹುದು ಎಂಬುದನ್ನು ಡಚ್ ವಿಜ್ಞಾನಿಗಳು ಸಂಶೋಧಿಸಿದ್ದಾರೆ.
  • ರಾತ್ರಿ ವೇಳೆ ದೇಹದ ಉಷ್ಣಾಂಶ ಕಡಿಮೆಯಾದರೆ ದೇಹದಲ್ಲಿರುವ ಕೊಬ್ಬಿನಂಶ ಕಡಿಮೆಯಾಗಲಿದೆ. ಪ್ರಮುಖವಾಗಿ ಹೊಟ್ಟೆಯ ಬೊಜ್ಜು ಕರಗಲಿದೆ. ಗಾಢ ನಿದ್ರೆಗೆ ರಾತ್ರಿ 10 ರಿಂದ 2 ರವರೆಗೆ ಬೆತ್ತಲೆ ನಿದ್ದೆ ಮಾಡಿದರೆ ಉತ್ತಮ.
  • ಸಾಮಾನ್ಯವಾಗಿ ಜನನಾಂಗದ ಜಾಗ ಬೆಚ್ಚಗೆ ಮತ್ತು ಒದ್ದೆಯಿಂದ ಕೂಡಿರುತ್ತದೆ. ಇಲ್ಲಿ ಸಹಜವಾಗಿಯೇ ಅಲರ್ಜಿ ಮತ್ತು ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಬೆಳೆಯಲು ಅವಕಾಶವಿದ್ದು, ಹುಟ್ಟುಡುಗೆಯ ನಿದ್ರೆಯಿಂದ ಗಾಳಿಯ ಸಂಚಾರಕ್ಕೆ ಸಹಾಯವಾಗಲಿದೆ. ಜನನಾಂಗಕ್ಕೂ ಉಸಿರಾಟದ ಅವಕಾಶ ಅರ್ಥಾತ್ ಗಾಳಿ ಸೇವನೆ ಸಾಧ್ಯವಾಗುತ್ತದೆ. ವಿಶೇಷವಾಗಿ ಪುರುಷರಲ್ಲಿನ ವೀರ್ಯ ಆರೋಗ್ಯವಾಗಿರುವುದಲ್ಲದೇ ಸಂತಾನೋತ್ಪತ್ತಿ ಕ್ರಿಯಾ ವ್ಯವಸ್ಥೆಯು ಸರಾಗವಾಗಲಿದೆ. ಬಿಗಿಯಾಗಿರುವ ಒಳ ಉಡುಪುಗಳನ್ನು ಧರಿಸಿದರೆ ವೃಷಣಗಳು ಬಿಸಿಯಾಗಿ ವೀರ್ಯಗಳ ಸಂಖ್ಯೆ ಕುಸಿಯುತ್ತದೆ ಅನ್ನೋದೊಂದು ಪ್ರತಿಪಾದನೆ.
  • ಬೆತ್ತಲೆ ನಿದ್ದೆಯ ಸಂತೃಪ್ತಿಯಿಂದ ಹಾರ್ಮೋನ್ ಗಳಿಗೆ ಚೈತನ್ಯ ಸಿಕ್ಕಿ ಪ್ರಚೋದನಾ ಶಕ್ತಿ ಲಭಿಸಲಿದೆ. ಇದು ದೇಹಕ್ಕೆ ವಯಸ್ಸಾಗುವುದನ್ನು ತಡೆಯುತ್ತದೆ.
  • ಹೆಚ್ಚು ಸಮಯ ಬೆತ್ತಲೆಯಾದರೆ ಚರ್ಮ ಸಾಕಷ್ಟು ಆರಾಮಾಗಿ, ಆರೋಗ್ಯಕರವಾಗಿ ಇರಲಿದೆ. ವಿಶ್ವಾಸದ ವರ್ತನೆ, ಹೆಚ್ಚು ಆಕರ್ಷಕ ಎಂಬ ಖುಷಿ ಸಿಗಲಿದೆ.
  • ಬೆತ್ತಲೆ ನಿದ್ದೆಯ ಸಮಯದಲ್ಲಿ ದೇಹದ ಉಷ್ಣಾಂಶ ಕಡಿಮೆಯಾಗುವುದರಿಂದ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಸಕ್ಕರೆ ಕಾಯಿಲೆಯ ಪ್ರಮಾಣ ಕಡಿಮೆಯಾಗುತ್ತದೆ. 2ನೇ ಹಂತದ ಮಧುಮೇಹದ ಕಾಯಿಲೆಯನ್ನು ತಡೆಯುವ ಶಕ್ತಿ ಇದಕ್ಕೆ ಇದೆ.
  • ರಕ್ತದ ಪರಿಚಲನೆ ಸರಾಗವಾಗಲಿಕ್ಕೆ  ಸೊಂಟದ ಭಾಗಕ್ಕೆ ಎಲೆಸ್ಟೀಕ್ ಬಾಂಡ್ ಬಳಸಬಾರದು, ಆರಾಯದಾಯಕವಲ್ಲದ ಟಿ ಶರ್ಟ್ ಗಳನ್ನು, ಬಿಗಿಯಾದ ಕಾಲು ಚೀಲಗಳು ಉಪಯೋಗಿಸಬಾರದು. ಇದರಿಂದ ಹೃದಯ, ಸ್ನಾಯುಗಳು, ಮುಖ್ಯ ರಕ್ತನಾಳಗಳಿಂದ ಕೈಕಾಲುಗಳಿಗೆ ರಕ್ತ ಸಂಚಾರಕ್ಕೆ ತೊಂದರೆಯಾಗುತ್ತದೆ.

Leave a Reply