ಬೆಲ್ಜಿಯಂ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಬ್ರುಸೆಲ್ಸ್ ಉಗ್ರ ದಾಳಿಯಲ್ಲಿ ಮಡಿದವರಿಗೆ ಸಂತಾಪ ಸಲ್ಲಿಸಿದರು. ‘ಉಗ್ರವಾದದ ವಿರುದ್ಧ ಹೋರಾಡುವಲ್ಲಿ ಮೋದಿಯೇ ಮುಖ್ಯ ನಾಯಕ’ ಅಂತು ಬೆಲ್ಜಿಯಂ ಸಂಸತ್ತು
ರಾಜ್ಯದ ಜನರಿಗೆ ತಟ್ಟಿದೆ ವಿದ್ಯುತ್ ದರ ಏರಿಕೆ ಬಿಸಿ
ಕುಡಿಯುವ ನೀರು, ವಿದ್ಯುತ್ ಕೊರತೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಬಿಸಿ ಮುಟ್ಟಿಸಿದೆ. ವಿದ್ಯುತ್ ದರದಲ್ಲಿ ಪ್ರತಿ ಯುನಿಟ್ಗೆ 48 ಪೈಸೆಯಷ್ಟು ಹೆಚ್ಚಳ ಮಾಡಿದೆ.
ಪರಿಷ್ಕೃತ ದರ ಏಪ್ರಿಲ್ 1 ರಿಂದಲೇ ಜಾರಿಗೊಳ್ಳಲಿದ್ದು, ಮೊದಲನೇ ಮೀಟರ್ ಓದುವ ದಿನಾಂಕದಿಂದ ಬಳಕೆಯಾಗುವ ವಿದ್ಯುತ್ ಗೆ ಅನ್ವಯವಾಗಲಿದೆ. ಬುಧವಾರ ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಕರ್ನಾಟಕ ವಿದ್ಯುತ್ಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಐದು ವಿದ್ಯುತ್ ಪ್ರಸರಣ ನಿಗಮಗಳು ಪ್ರತಿ ಯುನಿಟ್ಗೆ 102 ಪೈಸೆ ಹೆಚ್ಚಳ ಮಾಡಲು ಮನವಿ ಮಾಡಿದ್ದವು.
ಪ್ರಸರಣ ನಿಗಮಗಳ ಬೇಡಿಕೆಯನ್ನು ಮುಂದಿಟ್ಟುಕೊಂಡು ಸಾರ್ವಜನಿಕರ ಅಹವಾಲು ಹಾಗೂ ಕಂಪನಿಗಳ ಆರ್ಥಿಕ ಸ್ಥಿತಿಗತಿಗಳನ್ನು ಗಮನಿಸಿ, ಪ್ರತಿ ಯುನಿಟ್ಗೆ 15 ಪೈಸೆಯಿಂದ 50 ಪೈಸೆಯವರೆಗೂ ಅಂದರೆ ಸರಾಸರಿ 48 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ನವೀಕೃತ ಇಂಧನ ಮೂಲಗಳಿಗೆ 50ಪೈಸೆ ದರವನ್ನು ಮುಂದುವರಿಸಲು ಸೂಚಿಸಲಾಗಿದೆ. ಅಲ್ಪಾವಧಿಯಲ್ಲಿ ಪ್ರತಿ ಯೂನಿಟ್ಗೆ 4.50ಪೈಸೆಯಂತೆ ವಿದ್ಯುತ್ ಖರೀದಿ ಮಾಡಲು ಆಯೋಗ ಸೂಚನೆ ನೀಡಲಾಗಿದೆ ಎಂದರು.
ನಗರ ಪ್ರದೇಶದ ಗೃಹ ಬಳಕೆದಾರರಿಗೆ
– ಮೊದಲ 30 ಯುನಿಟ್ ವಿದ್ಯುತ್ಚ್ಛಕ್ತಿಗೆ 2.70 ನಿಂದ 3.00 ರು.ಗೆ
– 30 ರಿಂದ 100 ಯುನಿಟ್ ಗೆ 4.00 ರಿಂದ 4.40 ರು.ಗೆ
– 101 ರಿಂದ 200 ಯುನಿಟ್ಗೆ 5.40 ರಿಂದ 5.90 ರೂ.ಗೆ
– 200 ಯೂನಿಟ್ಗಳಿಗೂ ಮೀರಿದರೆ, ಪ್ರತಿ ಯುನಿಟ್ನ ದರ 6.40 ರಿಂದ 6.90 ರು.ಗೆ ಏರಿಕೆ.
ಗ್ರಾಮೀಣ ಪ್ರದೇಶ ಗೃಹಬಳಕೆದಾರರಿಗೆ
– ಮೊದಲ 30 ಯೂನಿಟ್ಗೆ 2.60 ರಿಂದ 2.90 ರು.ಗೆ
– 31 ರಿಂದ 100 ಯೂನಿಟ್ ಗೆ 3.70 ರಿಂದ 4.10 ರು.ಗೆ
– 101 ರಿಂದ 200 ಯೂನಿಟ್ ಗೆ 5.10 ರಿಂದ 5.60 ರು.ಗೆ
– 200 ಕ್ಕೂ ಮೇಲ್ಪಟ್ಟ ಯುನಿಟ್ ಗೆ 5.90 ರಿಂದ 6.40 ರು.ಗೆ ಹೆಚ್ಚಳ.
ಕೈಗಾರಿಕೆ ಬೆಸ್ಕಾಂ ವ್ಯಾಪ್ತಿಯ ಎಲ್ಟಿ ಕೈಗಾರಿಕೆಗೆ ಸರಾಸರಿ 15ರಿಂದ 30 ಪೈಸೆ ಹೆಚ್ಚಳ ಮಾಡಲಾಗಿದೆ.
– ಮೊದಲ 500 ಯೂನಿಟ್ ಗೆ 4.90 ರಿಂದ 5.10 ರು.ಗೆ
– 500 ಯೂನಿಟ್ಗಿಂತ ಹೆಚ್ಚಿನ ಬಳಕೆಗೆ 6 ರಿಂದ 6.30 ರು.ಗೆ
ಬೆಸ್ಕಾಂ ಹೊರತು ಪಡಿಸಿ ಉಳಿದ ಎಸ್ಕಾಂಗಳಿಗೆ
– ಮೊದಲ 500 ಯೂನಿಟ್ ಗೆ 4.75 ರಿಂದ 4.95 ರು.ಗೆ
– 501 ರಿಂದ 1000 ಯೂನಿಟ್ಗೆ 5.55 ರಿಂದ 5.85 ರು.ಗೆ
– 1000 ಕ್ಕೂ ಮೇಲ್ಪಟ್ಟ ಯೂನಿಟ್ ಗೆ 5.85 ರಿಂದ 6.15 ರು.ಗೆ ದುಬಾರಿಯಾಗಿದೆ.
ಎಲ್ಟಿ ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್ಗೆ 20 ಪೈಸೆ ಹೆಚ್ಚಳ
– ಮೊದಲ 50 ಯೂನಿಟ್ಗೆ 6.95 ರಿಂದ 7.15 ರು.ಗೆ
– 50 ಯೂನಿಟ್ ನಂತರದ ಬಳಕೆಗೆ 7.95 ರಿಂದ 8.15 ರು.ಗೆ
ಗ್ರಾಮಾಂತರ ಪ್ರದೇಶದ ವಾಣಿಜ್ಯ ಬಳಕೆಗೆ
– ಮೊದಲ 50 ಯೂನಿಟ್ಗೆ 6.45 ರಿಂದ 6.65 ರು.ಗೆ
– 50 ಯೂನಿಟ್ ನಂತರದ ಬಳಕೆಗೆ 7.45 ರಿಂದ 7.65 ರು.ಗೆ ಹೆಚ್ಚಳ
ಕುಡಿಯುವ ನೀರು ಸರಬರಾಜು, ಬೀದಿ ದೀಪ ಬಳಕೆಯ ವಿದ್ಯುತ್ಗೂ ಪ್ರತಿ ಯೂನಿಟ್ಗೆ 50 ಪೈಸೆ ಹೆಚ್ಚಳ ಬಿಸಿ ತಟ್ಟಿದೆ.
ಬಹುಮತ ಸಾಬೀತಿಗೆ ತಡೆ ನೀಡಿದ ಉತ್ತರಾಖಂಡ ಹೈಕೋರ್ಟ್
ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಅಂಕಿತ ಬಿದ್ದ ನಂತರ ಮಾ.31ರಂದು ನಡೆಸಲು ನಿರ್ಧರಿಸಲಾಗಿದ್ದ ಬಹುಮತ ಸಾಬೀತು ಪ್ರಕ್ರಿಯೆಗೆ ಉತ್ತರಖಾಂಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ಈ ಕುರಿತು ತಮ್ಮ ವಾದವನ್ನು ಸೋಮವಾರ ಅಥವಾ ಮಂಗಳವಾರದ ಒಳಗಾಗಿ ನ್ಯಾಯಾಲಯಕ್ಕೆ ತಿಳಿಸಲು ಒಪ್ಪಿಕೊಂಡಿವೆ. ಹಾಗಾಗಿ ಈ ಕುರಿತು ಮುಂದಿನ ವಿಚಾರಣೆಯನ್ನು ಏಪ್ರಿಲ್ 6ರಂದು ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ.
ಇದೇ ವೇಳೆ ನ್ಯಾಯಾಲಯ ಈ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿದ ಕಾರಣವನ್ನು ತಿಳಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ನೆಲಬಾಂಬ್ ಸ್ಪೋಟ : ಏಳು ಸಿಆರ್ ಪಿಎಫ್ ಯೋಧರ ಸಾವು
ಮಾವೋವಾದಿ ನಕ್ಸಲರು ಮಾಲೇವಾಡ ಅರಣ್ಯ ಪ್ರದೇಶದ ರಸ್ತೆಯೊಂದರ ನೆಲದಡಿಯಲ್ಲಿ ಪ್ರಬಲ ಬಾಂಬ್ ಸ್ಪೋಟಿಸಿ 7 ಮಂದಿ ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾರೆ. ಛತ್ತಿಸ್ ಗಡದ ರಾಜ್ಯಧಾನಿ ರಾಯಪುರದಿಂದ ಸುಮಾರು 350 ಕೀ.ಮೀ ದೂರದ ದಂತೇವಾಡದಿಂದ ಮಾಲೇವಾಡ ಕ್ಯಾಂಪ್ ಗೆ ಕೇಂದ್ರ ಮೀಸಲು ಪೊಲೀಸ್ ಪಡೆಯ 20 ಭದ್ರತಾ ಸಿಬ್ಬಂದಿ ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ದಿನದ ಕೋಟ್
ಈ ಪಾಕಿಸ್ತಾನ ನಮಗೆ ಬಹಳ ಮುಖ್ಯ ಗಮನದ ರಾಷ್ಟ್ರವಾಗಿದೆ. ಏಕೆಂದರೆ ಅವರ ಬಳಿ ಅಣ್ವಸ್ತ್ರ ಇದೆ. ಆ ದೇಶ ತನ್ನ ಪರಿಸ್ಥಿತಿ ಹತೋಟಿಗೆ ತೆಗೆದುಕೊಳ್ಳಬೇಕು. ಬೇರೆಲ್ಲರಿಗಿಂತ ಪಾಕಿಸ್ತಾನವನ್ನು ಸೂಕ್ತವಾಗಿ ನಿಭಾಯಿಸುವ ಸಾಮರ್ಥ್ಯ ನನಗಿದೆ.
– ಡೋನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷೀಯ ಉಮೇದುವಾರ
ಅಂದಹಾಗೆ ಇದು ಈ ದಿನದ ಫೋಟೋ…
ಮಂಗಳವಾರ ಮುಂಬೈನ ಧೋನಿ ನಿವಾಸದಲ್ಲಿ ಮಗಳು ಜಿವಾ ಧೋನಿ ಜತೆ ವಿರಾಟ್ ಕೋಹ್ಲಿ ಮುದ್ದು ಕಾಲಕ್ಷೇಪ.