ವೆಸ್ಟ್ ಇಂಡೀಸ್ ಕ್ರಿಕೆಟಿಗರು ಡ್ಯಾನ್ಸ್ ಮಾಡುತ್ತಿರೋ ‘ಚಾಂಪಿಯನ್’ ಹಾಡಿನಲ್ಲಿ ಏನಿದೆ ಗೊತ್ತಾ..?!

 

ಡಿಜಿಟಲ್ ಕನ್ನಡ ಟೀಮ್

ಈ ಬಾರಿ ಟಿ20 ವಿಶ್ವಕಪ್ ಟೂರ್ನಿ ಸಂದರ್ಭ ವೆಸ್ಟ್ ಇಂಡೀಸ್ ಕ್ರಿಕೆಟಿಗರು ಹಾಡಿ ಕುಣಿಯುತ್ತಿರೋದು ‘ಚಾಂಪಿಯನ್’ ಎಂದು. ಏನಿದು ಇನ್ನು ಫೈನಲ್ ಮ್ಯಾಚ್ ಆಗಿಲ್ಲ, ವಿಶ್ವಕಪ್ ಗೆದ್ದೇ ಇಲ್ಲ, ಆಗಲೇ ಚಾಂಪಿಯನ್ ಅಂತ ಬೀಗುತಿದ್ದಾರಾ? ಅಂತಾ ಯೋಚಿಸಬೇಡಿ. ಇದು ವಿಂಡೀಸ್ ಕ್ರಿಕೆಟಿಗ ಡ್ವೈನ್ ಬ್ರಾವೊ ಅವರ ‘ಡಿಜೆ ಬ್ರಾವೊ ಚಾಂಪಿಯನ್’ ಎಂಬ ಆಲ್ಬಮ್ ಸಾಂಗ್. ಈ ಹಾಡಿನ ವಿಶೇಷ ಏನು ಗೊತ್ತಾ? ವಿಂಡೀಸ್ ಕ್ರಿಕೆಟಿಗರಿಂದ ಹಿಡಿದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ದಕ್ಷಿಣ ಆಫ್ರಿಕಾದ ವರ್ಣಬೇಧ ನೀತಿ ವಿರೋಧಿ ಹೋರಾಟಗಾರ ನೆಲ್ಸನ್ ಮಂಡೇಲಾ, ಅಮೆರಿಕ ಬ್ಯಾಸ್ಕೆಟ್ ಬಾಲ್ ಪಟು ಮೈಕಲ್ ಜೊರ್ಡನ್, ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್, ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಹೀಗೆ ವಿವಿಧ ಕ್ಷೇತ್ರಗಳ ವಿಶ್ವ ಮಟ್ಟದ ಕರಿಯ ಸಾಧಕರನ್ನು ‘ಚಾಂಪಿಯನ್’ ಎಂದು ಸಾರೋದೆ ಈ ಹಾಡಾಗಿದೆ.

ಕರಿಯರು ಯಾವುದರಲ್ಲೂ ಕಡಿಮೆ ಇಲ್ಲ. ಯಾರಿಗೂ ಕಡಿಮೆ ಇಲ್ಲ. ರಾಜಕೀಯ, ಹೋರಾಟ, ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿ ಉತ್ತುಂಗ ತಲುಪಿದ್ದಾರೆ. ಅವರಿಗೇ ಅವರೇ ಸಾಟಿ ಎಂಬುದು ಸಾರಾಂಶ.

ಡಿಜೆ ಬ್ರಾವೊ ‘ಚಾಂಪಿಯನ್’ ಹಾಡು ಇಲ್ಲಿದೆ. ನೀವೇ ನೋಡಿ, ಆನಂದಿಸಿ..

https://www.youtube.com/watch?v=Y963o_1q71M

ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರರೇ ಹಾಗೇ, ಫುಲ್ ಬಿಂದಾಸ್. ಅದು ಹಿಂದಿನ ವಿವಿಯನ್ ರಿಚರ್ಡ್ಸ್ ಅವರಿಂದ ಹಿಡಿದು ಈಗಿನ ಗೇಯ್ಲ್, ಬ್ರಾವೋವರೆಗೂ ಎಲ್ಲರೂ ಜೀವನೋತ್ಸಾಹದ ಚಿಲುಮೆಗಳೇ. ಅದು ಆಟದ ಮೈದಾನ ಇರಬಹುದು, ಜಾಹೀರಾತುಗಳ ಪ್ರಪಂಚ ಇರಬಹುದು. ಅವರ ಸ್ಟೈಲೇ ಸ್ಟೈಲು. ಮೋಜಿನ ಮಜವೇ ಬೇರೆ. ಮೈದಾನದಲ್ಲಿ  ಇವರ ಸಿಡಿಲಬ್ಬರ ಹೊಡೆತವಷ್ಟೇ ಅಲ್ಲ, ಗೆದ್ದಾಗ ಅವರ ವಿಭಿನ್ನ ಭಂಗಿಗಳ ಸೆಲೆಬ್ರೇಷನ್ ನೋಡೋದೇ ಒಂದು ಚೆಂದ. 2012 ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ‘ಗಂಗ್ನಂ ಸ್ಟೈಲ್’ ಹಾಡು ಮತ್ತು ನೃತ್ಯವನ್ನು ನಮಗೆ ಪರಿಚಯಿಸಿದ್ದು ಇದೇ ವೆಸ್ಟ್ ಇಂಡೀಸ್ ಕ್ರಿಕೆಟಿಗರು. ಈ ಬಾರಿ ‘ಚಾಂಪಿಯನ್’ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಅದರಲ್ಲೂ ಭಾರತ ವಿರುದ್ಧ ಸೆಮಿಫೈನಲ್ ನಲ್ಲಿ ಗೆದ್ದ ನಂತರ ವಿಂಡೀಸ್ ತಂಡ ಹೊಟೇಲ್ ಗೆ ತೆರಳುವಾಗ ಮಾಡಿದ ನೃತ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಅವರ ಸೆಲೆಬ್ರೆಷನ್ ಹೇಗಿತ್ತು, ಇಲ್ಲಿದೆ ನೋಡಿ..

https://www.youtube.com/watch?v=4dYxG2et–s

Leave a Reply