ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಈ ದಿನದ ವಿದ್ಯಮಾನ, ಚಿತ್ರಗಳಲ್ಲಿ ಕಾಣಬೇಕಾದ ಮಹಾನಗರದ ಪ್ರತಿಭಟನಾ ದಿನ

ಆರೋಪಿಗಳಾದ  ಮಂಜುನಾಥ, ಓಬಳಪ್ಪ

ಪ್ರಗತಿಯಲ್ಲಿ ಪಿಯು ಮೌಲ್ಯಮಾಪನ, ಸೋರಿಕೆ ಕಾಲೇಜುಗಳ ಮಾನ್ಯತೆ ರದ್ದು, ಆರೋಪಿಗಳು ಪೊಲೀಸ್ ವಶಕ್ಕೆ

ಡಿಜಿಟಲ್ ಕನ್ನಡ ಟೀಮ್

ಪಿಯುಸಿ ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಿಗದಿಯಂತೆ ಏ. 3 ರಿಂದಲೇ ಶುರುವಾಗಿದೆ. ರಾಜ್ಯದ ಏಳು ನಗರಗಳ 44 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ.

ಪಿಯುಸಿ  ಮೌಲ್ಯಮಾಪಕರ ಭತ್ಯೆಯನ್ನು ಶೇ.30 ರಷ್ಟು ಭತ್ಯೆ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಮೌಲ್ಯಮಾಪನ ನಿರಾತಂಕವಾಗಿ ಸಾಗಿದೆ. ಫಲಿತಾಂಶ ಕೂಡ ವಿಳಂಬವಿಲ್ಲದೆ ಪ್ರಕಟವಾಗಲಿದೆ ಎಂದು ಪಿಯು ಮಂಡಳಿ ಕಾರ್ಯದರ್ಶಿ ರಾಮೇಗೌಡ ತಿಳಿಸಿದ್ದಾರೆ.

ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ; ಶರಣಪ್ರಕಾಶ್

ಈ ಮಧ್ಯೆ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ತಮ್ಮ ವಿಶೇಷ ಅಧಿಕಾರಿ ಕಾನೂನು ಪ್ರಕಾರ ಶಿಕ್ಷೆ ಅನುಭವಿಸಲಿದ್ದಾರೆ. ಆದರೆ ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ವಿಶೇಷಾಧಿಕಾರಿ ಓಬಳರಾಜು ಅವರನ್ನು ನನಗೆ ಪರಿಚಯಿಸಿದ್ದು ಹಾಗೂ ನನ್ನ ಬಳಿ ಸೇರಿಸಿದ್ದೇ ಬಿಜೆಪಿಯ ಮುಖಂಡ ಹಾಗೂ ಮಾಜಿ ಸಚಿವ ಸಿ.ಎಂ.ಉದಾಸಿ. ಯಾರೇ ತಪ್ಪು ಮಾಡಿದ್ದರೂ ತಪ್ಪೇ. ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟ ಸರಿಯಲ್ಲ. ನನ್ನ ಕಚೇರಿಯಲ್ಲಿದ್ದವರೂ ಇದರಲ್ಲಿ ಭಾಗಿ ಎಂಬುದೇ ಆಘಾತದ ವಿಚಾರ ಎಂದರು.

ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

 ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣದ ಕಿಂಗ್ ಪಿನ್ ತುಮಕೂರು ಗುಬ್ಬಿಯ ಶಿವಕುಮಾರ್ ಸ್ವಾಮಿಯನ್ನು ಪೊಲೀಸರು ವಿಚಾರಣೆಗೆ ತಮ್ಮ ವಶಕ್ಕೆ ಪಡೆದುಕೊಂಡ್ಡಾರೆ.

2008 ರಲ್ಲೇ ಎಸ್‍ಎಸ್ ಎಲ್‍ಸಿ ಮತ್ತು ಪಿಯುಸಿ ಪ್ರಶ್ನೆ ಪತ್ರಿಕೆಗಳ ಮಾರಾಟಕ್ಕಿಳಿದಿದ್ದ ಈತನನ್ನು 2008 ರಲ್ಲೇ ಬಂಧಿಸಲಾಗಿತ್ತು. ಸರಕಾರಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಈತನನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ನಂತರ ಈತ ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ  ಬೃಹತ್ ಕಟ್ಟಡ ಕಟ್ಟಿ ಟ್ಯುಟೋರಿಯಲ್ ನಡೆಸುತ್ತಿದ್ದ.

ಸೋರಿಕೆ ಜಾಲದ ಕಾಲೇಜುಗಳ ಮಾನ್ಯತೆ ರದ್ದು

ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದಲ್ಲಿ ಭಾಗಿಯಾಗಿರುವ ಕಾಲೇಜುಗಳ ಮಾನ್ಯತೆ ರದ್ದುಗೊಳಿಸಲು ಶಿಕ್ಷಣ ಇಲಾಖೆಗೆ ಸೂಚಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ಸಿಐಡಿ ತನಿಖೆ ಪ್ರಗತಿಯಲ್ಲಿದೆ. ಕೆಲವು ಕಾಲೇಜು ಉಪನ್ಯಾಸಕರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಇದೆ.

ಬೆಂಗಳೂರಿನಲ್ಲಿ ಮಂಗಳವಾರ ಪ್ರತಿಭಟನೆಗಳದ್ದೇ ಬಿಂಬ

1. ನಗರಕ್ಕೆ ತೈಲ ಪೂರೈಕೆ ಮಾಡುತ್ತಿದ್ದ ಲಾರಿಗಳ ಮಾಲೀಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನಾ ನಿರತರಾಗಿರುವುದರಿಂದ ಹಲವು ಕಡೆಗಳಲ್ಲಿ ಇಂಧನ ಕೊರತೆ ಎದುರಾಯಿತು. ಮೂರು ದಿನಗಳವರೆಗಿನ ಮುಷ್ಕರದ ಸುದ್ದಿಯಿಂದ ಎಚ್ಚೆತ್ತ ಜನರು, ಸಿಗುವಾಗಲೇ ಫುಲ್ ಟ್ಯಾಂಕ್ ಮಾಡಿಕೊಂಡಿರುವ ಧಾವಂತಕ್ಕೆ ಬಿದ್ದಿದ್ದರಿಂದ ಹಲವು ತೈಲದ ಬಂಕ್ ಗಳೆದುರು ಒತ್ತಡ ಸೃಷ್ಟಿಯಾಯಿತು.

Petrol Bunk

2. ತಮ್ಮ ಸಂಬಳ ತಾರತಮ್ಯ ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪಿಯು ಪರೀಕ್ಷೆಗಳ ಮೌಲ್ಯಮಾಪನಕ್ಕೆ ಬಹಿಷ್ಕರಿಸಿರುವ ಶಿಕ್ಷಕ ಸಮೂಹ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸಿತು.

teachers

3. ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿರೋದನ್ನು ಖಂಡಿಸಿ ಪ್ರತಿಭಟನೆ ನಡೆಸಿತು ಬಿಜೆಪಿ.

bjp protest

Leave a Reply