ಮನೆ- ವಾಹನ ಸಾಲಗಳು ಅಗ್ಗವಾಗುವುದಕ್ಕೆ ಮುನ್ನುಡಿ ರೆಪೊ ದರ ಕಡಿತ

ಡಿಜಿಟಲ್ ಕನ್ನಡ ಟೀಮ್

ಭಾರತೀಯ ರಿರ್ಸವ್ ಬ್ಯಾಂಕ್ (ಆರ್ ಬಿ ಐ) ರೆಪೋ ದರವನ್ನು 0.25 ಬೇಸಿಸ್ ಪಾಯಿಂಟ್ ಗೆ ಕಡಿತಗೊಳಿಸಿದೆ. ಇದರಿಂದ ಅರ್ಥವ್ಯವಸ್ಥೆ ಮೇಲಾಗುವ ಪರಿಣಾಮಗಳ ಒಂದು ನೋಟ.

  • ಮಂಗಳವಾರ ಆರ್ ಬಿ ಐ ಗವರ್ನರ್ ರಘುರಾಮ್ ರಾಜನ್ ಅವರು ರೆಪೋ ದರವನ್ನು ಶೇ 0.25 ಕಡಿತಗೊಳಿಸಿದ ಪರಿಣಾಮ ಬ್ಯಾಂಕುಗಳಲ್ಲಿ ಪಡೆದಿರುವ ಮತ್ತು ಪಡೆಯಲಿರುವ ಮನೆ, ವಾಹನ ಮತ್ತು ಇತರ ಸಾಲಗಳ ಮಾಸಿಕ ಕಂತು ಪಾವತಿ (ಇಎಂಐ) ಹಣದ ಪ್ರಮಾಣ ತಗ್ಗಲಿದೆ. ಪ್ರಸ್ತುತ ರೆಪೋ ದರದ ಪ್ರಮಾಣ 6.75 ಅಂಕಗಳಿಂದ 6.50 ಗೆ ಇಳಿದಂತಾಗಿದೆ.
  • ಆರು ತಿಂಗಳ ಮೊದಲೂ ಇಂಥದೇ ಕಡಿತವಾಗಿತ್ತು. ಅರ್ಥವ್ಯವಸ್ಥೆಯಲ್ಲಿ ಹಣ ಹರಿದಾಡಲಿ ಎಂಬ ಉದ್ದೇಶದಿಂದ ಹೀಗೆ ರೆಪೋ ದರ ಕಡಿತಕ್ಕಾಗಿ ಆರ್ ಬಿ ಐ ಗವರ್ನರ್ ರಘುರಾಮ ರಾಜನ್ ಮೇಲೆ ಆಗಾಗ ಒತ್ತಡ ಬೀಳುತ್ತಲೇ ಇರುತ್ತದೆ.. ರೆಪೋ ದರ ಕಡಿತದಿಂದ ಆರ್ ಬಿ ಐ ಬ್ಯಾಂಕ್ ಗಳಿಗೆ ನೀಡುವ ಸಾಲಕ್ಕೆ ಬಡ್ಡಿದರ ತಗ್ಗುವುದರಿಂದ, ಈ ಬ್ಯಾಂಕುಗಳು ನೀಡುವ ಅಲ್ಪ ಅವಧಿಯ ಸಾಲಕ್ಕೆ ಮಾಸಿಕ ಕಂತು ಕಡಿಮೆಯಾಗುತ್ತದೆ. ಹೀಗಾಗಿ ಗ್ರಾಹಕನಿಗೆ ಲಾಭ. ಸರ್ಕಾರದ ಅರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಲು ಮತ್ತು ಬೇಡಿಕೆಯನ್ನು ವೃದ್ದಿಸಲು ಆರ್ ಬಿ ಐ ಈ ನಿರ್ಣಯ ಕೈಗೊಂಡಿದೆ.
  • ರೆಪೊ ದರವನ್ನು ಈ ಹಿಂದೆಯೂ ಕಡಿಮೆ ಮಾಡಲಾಗಿತ್ತು. ಈ ಬಾರಿಯ ಇಳಿಕೆ ಅದಕ್ಕಿಂತ ಮುಖ್ಯ ಹೇಗೆ ಎಂದರೆ- ಇಲ್ಲಿ ಬ್ಯಾಂಕುಗಳ ಸಂಗ್ರಹಮೊತ್ತ ಹೆಚ್ಚುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ರೆಪೊ ದರ ಇಳಿದರೂ ಬೇರೆ ಕಾರಣಗಳಿಂದಾಗಿ ಅದರ ಲಾಭವನ್ನು ಗ್ರಾಹಕನಿಗೆ ಮುಟ್ಟಿಸುವುದರಲ್ಲಿ ಬ್ಯಾಂಕುಗಳು ಯಶಸ್ವಿ ಆಗಿರಲಿಲ್ಲ. ಆದರೆ ಈ ಬಾರಿ ರಿಸರ್ವ್ ಬ್ಯಾಂಕ್ ಗವರ್ನರ್ ರಾಜನ್ ಅವರು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಸಂಪತ್ತನ್ನು ಮರು ಪಡೆಯುವ ವ್ಯವಸ್ಥೆ ರೂಪಿಸಿ ಸುಮಾರು 1.5 ಲಕ್ಷ ರುಪಾಯಿಗಳ ಮೂಲದ್ರವ್ಯ ಕೊರತೆ ಹೋಗಲಾಡಿಸಲು ಮುಂದಾಗಿದ್ದಾರೆ.
  • ವಾಣಿಜ್ಯ ಬ್ಯಾಂಕ್ ಗಳು ಹೊಂದಿರಬೇಕಾದ ಸಂಗ್ರಹ ಅನುಪಾತ ಇಲ್ಲವೇ ಭದ್ರತೆಗಳನ್ನು ಶೇ. 21.25 ರಷ್ಟು ನಿಗದಿ ಮಾಡಿದ್ದು, ಇದು ಎಪ್ರಿಲ್ 2 ರಿಂದಲೇ ಅನ್ವಯವಾಗುತ್ತದೆ.
  • ರಿಸರ್ವ್ ಬ್ಯಾಂಕ್ ಕಳೆದ ಸೆಪ್ಟಂಬರ್ ನಲ್ಲಿ ಅಲ್ಪ ಅವಧಿಯ ಸಾಲದ ದರವನ್ನು ಶೇ. 0.50 ರಷ್ಟು ಕಡಿಮೆ ಮಾಡಿ 6.75 ಕ್ಕೆ ನಿಗದಿ ಮಾಡಿತ್ತು. 2015 ರಲ್ಲಿ ಆರ್ಥಿಕ ಸ್ಥಿತಿಗತಿಯ ಅನ್ವಯದಂತೆ ರೆಪೋ ದರವನ್ನು ಶೇ, 1.25 ರಷ್ಟು ಇಳಿಕೆ ಮಾಡಿತ್ತು. 2016-17ರ ಆರ್ಥಿಕ ಬೆಳವಣಿಗೆಯನ್ನು ಶೇ. 7.6 ರಷ್ಟು ಉಳಿಸಿಕೊಂಡಿರುವುದಾಗಿ ರಾಜನ್ ತಿಳಿಸಿದ್ದಾರೆ.

Leave a Reply