ಕೊಲ್ಲಂ ದೇವಾಲಯದಲ್ಲಿ ದುರ್ಘಟನೆ ನಂತರ ಸೋಮವಾರ ನಡೆದಿದ್ದೇನು? ಇಲ್ಲಿದೆ ಪ್ರಮುಖ ಬೆಳವಣಿಗೆಗಳ ಕ್ವಿಕ್ ಪಾಯಿಂಟ್ಸ್

ಡಿಜಿಟಲ್ ಕನ್ನಡ ಟೀಮ್

  • ಕೊಲ್ಲಂನಲ್ಲಿನ ದೇವಾಲಯದಲ್ಲಿ ಪಟಾಕಿ ಸ್ಫೋಟದಿಂದ ಈ ದುರ್ಘಟನೆ ನಡೆದಿದ್ದರೂ, ಕೇರಳದ 1,255 ದೇವಾಲಯಗಳ ಮೇಲಿ ನಿಯಂತ್ರಣ ಹೊಂದಿರುವ ಟ್ರಾವಂಕೊರ್ ದೇವಾಸ್ವಮ್ ಬೋರ್ಡ್ (ಟಿಡಿಬಿ) ಹಬ್ಬದ ಸಂದರ್ಭದಲ್ಲಿ ಪಟಾಕಿ ನಿಷೇಧಕ್ಕೆ ಮುಂದಾಗಿಲ್ಲ. ಈ ರೀತಿಯ ಪ್ರಕ್ರಿಯೆ ಇಲ್ಲಿನ ಹಬ್ಬದ ಆಚರಣೆಯಾಗಿದ್ದು, ಅದನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
  • ಈ ಘಟನೆಗೆ ಸಂಬಂಧಿಸಿದಂತೆ ದೇವಸ್ಥಾನ ಸಮಿತಿಯ 15 ಸದಸ್ಯರು ಸೇರಿದಂತೆ ಒಟ್ಟು ಇಬ್ಬರು ಪಟಾಕಿ ಗುತ್ತಿಗೆದಾರರು ಹಾಗೂ ಇತರೆ 8 ಮಂದಿಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
  • ಈ ಪ್ರಕರಣದ ತನಿಖೆಯನ್ನು ಅಪರಾಧ ದಳ ವಹಿಸಿಕೊಂಡಿದ್ದು, ಐವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇವರ ಬಗೆಗಿನ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.
  • ಪರವುರ್ ದೇವಾಸ್ಥಾನದ ಬಳಿ ಸ್ಫೋಟಕಗಳಿಂದ ತುಂಬಿದ್ದ 3 ಕಾರುಗಳು ಮತ್ತು 2 ಮೂಟೆ ಪಟಾಕಿಗಳು ಪತ್ತೆಯಾಗಿವೆ.
  • ಈ ಅವಘಡದಲ್ಲಿ ಕನಿಷ್ಟ 383 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಸಂಬಂಧಿಕರು ಮತ್ತು ಕುಟುಂಬವರ್ಗದವರು ಗಾಯಾಳುಗಳನ್ನು ಹಾಗೂ ಮೃತಶರೀರದ ಗುರುತುಪತ್ತೆಯಲ್ಲಿ ಭಾಗಿಯಾಗಿದ್ದ ದೃಶ್ಯ ಮನಕಲಕುವಂತಿತ್ತು.
  • ದೇವಸ್ಥಾನದ 10 ಮಂದಿ ಟ್ರಸ್ಟಿಗಳು ನಾಪತ್ತೆಯಾಗಿದ್ದು, ಪೊಲೀಸರ ಸಂಪರ್ಕಕ್ಕೆ ಸಿಗುತ್ತಿಲ್ಲ.
  • ಆರೆಸ್ಸೆಸ್ ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಚುರಗೊಂಡಿವೆ.

ಇದನ್ನೂ ಓದಿ- ಕೊಲ್ಲಂ ದೇವಾಲಯದ ಪಟಾಕಿ ಪರಾಕ್ರಮಕ್ಕೆ 100ಕ್ಕೂ ಹೆಚ್ಚು ಸಾವು, ಧಾರ್ಮಿಕ ಆಚರಣೆಗಳು ಬಲಾಬಲ ಪ್ರದರ್ಶನವಾದಾಗ ಇದೇ ಆಗೋದು…

Leave a Reply