ದೇವಾಲಯವಾಗಿದ್ದ ಮಸೀದಿ, ಶಾಲೆಯಾದ ಮದ್ರಸಾ… ಜಿಜ್ಞಾಸೆಗೆ ಹಚ್ಚುವ 2 ಸುದ್ದಿಗಳು

ಡಿಜಿಟಲ್ ಕನ್ನಡ ಟೀಮ್

ರಾಯಚೂರಿನಲ್ಲಿ ರಸ್ತೆ ವಿಸ್ತರಣೆ ವೇಳೆ ಮಸೀದಿಯನ್ನು ತೆರವುಗೊಳಿಸಿದಾಗ, ಅದರ ನಿರ್ಮಿತಿಯೇ ಹಿಂದು ದೇವಸ್ಥಾನದ ಮಾದರಿಗಳನ್ನು ಹೊಂದಿತ್ತು ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷವಾಗಿ ಸುದ್ದಿಯಾಗುತ್ತಿದೆ.

ಹಾಗಾದರೆ, ದೇವಾಲಯವನ್ನೇ ಒಡೆದು ಮಸೀದಿ ಕಟ್ಟಲಾಗಿತ್ತೇ ಎಂಬ ಪ್ರಶ್ನೆಯ ಸುತ್ತ ಫೇಸ್ಬುಕ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಕಾವು ಪಡೆದುಕೊಂಡಿದೆ. ಮುಸ್ಲಿಂ ಆಕ್ರಮಣಗಳಲ್ಲಿ ಬಲವಂತದ ಮತಾಂತರ ದೇವಾಲಯ ಭಗ್ನಗೊಳಿಸುವಿಕೆ ಇವೆಲ್ಲವೂ ಸಾಮಾನ್ಯವಾಗಿದ್ದಿದ್ದರಿಂದ ಇಂಥ ಸಾಧ್ಯತೆ ತೀರ ಅಚ್ಚರಿಯಾಗೇನೂ ಕಾಡಬೇಕಿಲ್ಲ.

ಇನ್ನೊಂದೆಡೆ, ಜೈಪುರದಿಂದ ವರದಿಯಾಗಿರುವ ಸುದ್ದಿಯೂ ಗಮನಾರ್ಹ.

ದಶಕಗಳಷ್ಟು ಹಳೆಯದಾದ ಮದರಾಸವು ಶಾಲೆಯಾಗಿ ಮಾರ್ಪಾಡಗಿದೆ. ಇದರ ಪ್ರಿನ್ಸಿಪಾಲರಾಗಿರುವವರು ಆರ್ ಎಸ್ ಎಸ್ ಸಂಬಂಧ ಹೊಂದಿರುವ ಹಿಂದು ವ್ಯಕ್ತಿ. ಮುಸ್ಲಿಮರ ಪ್ರಾಬಲ್ಯ ಹೆಚ್ಚಿರುವ ವಲ್ಲದ್ ನಗರದ ರೆಹ್ಮಾನಿ ಮಾಡಲ್ ಶಾಲೆಯ ಪ್ರಿನ್ಸಿಪಾಲರಾಗಿ ಈ ಹಿಂದೆ ಸಂಘ ಪರಿವಾರದ ಆದರ್ಶ ವಿದ್ಯಾ ಮಂದಿರದಲ್ಲಿ ಸೇವೆ ಸಲ್ಲಿಸಿದ್ದ ಕೈಲಾಶ್ ಚಂದ್ರ ಯಾದವ್ ಕಾರ್ಯನಿರ್ವಹಿಸುತ್ತಿದ್ದಾರೆ.

ಮದರಸಾ ಅನ್ನೋದು ಶಾಲೆಯಾಗೋದು ಅಂದ್ರೆ ಏನು? ಅರ್ಥವಿಷ್ಟೆ- ಮದ್ರಸಾ ಆಗಿದ್ದಾಗ ಕೇವಲ ಮುಸ್ಲಿಂ ಧಾರ್ಮಿಕ ಪಠ್ಯಗಳನ್ನು ಮಾತ್ರ ಅಭ್ಯಸಿಸಲಾಗುತ್ತದೆ. ಶಾಲೆ ಎಂದಾಗ ಸಾರ್ವತ್ರಿಕ ಶಿಕ್ಷಣ ಭಾಗ್ಯ ಸಿಗುತ್ತದೆ. ಶಾಲೆಯಲ್ಲಿ ಓದುತ್ತಿರುವ ಎಲ್ಲ 1300 ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯದವರೇ. ಇದು ಕೇವಲ ಶಾಲೆಗೆ ಸೀಮಿತವಾಗದೇ ಆ ಭಾಗದಲ್ಲಿ ಹಿಂದು- ಮುಸ್ಲಿಂ ಹಬ್ಬಗಳನ್ನು ಪರಸ್ಪರರು ಸೇರಿಕೊಂಡು ಆಚರಿಸುವ ಪರಿಪಾಠವಿದೆ.

rehmani

1980 ರಲ್ಲಿ ಮದರಾಸವನ್ನುಶಾಲೆಯನ್ನಾಗಿ ಪರಿವರ್ತಿಸಿದ, ರೆಹ್ಮನಿ ಕ್ಷೇಮಾಭಿವೃದ್ಧಿ ಸಮಾಜದ ಮುಖ್ಯಸ್ಥ 72 ವರ್ಷದ ಅಬ್ದುಲ್ ಖ್ವಾಯುಮ್ ಅಖ್ತರ್ ಆಧುನಿಕ ದೃಷ್ಟಿಕೋನವನ್ನು ಹೊಂದಿದವರು. ‘ನನಗೆ ಶಿಕ್ಷಕರ ಶೈಕ್ಷಣಿಕ ಅರ್ಹತೆ ಮುಖ್ಯವೇ ಹೊರತು ಅವರ ಸಂಬಂಧ ಅಥವಾ ಧರ್ಮವಲ್ಲ. ನಮ್ಮ ಶಾಲೆಯಲ್ಲಿ ಈದ್ ಹಬ್ಬವನ್ನು ಆಚರಿಸುವಂತೆಯೇ ಹೋಳಿ ಮತ್ತು ದೀಪಾವಳಿ ಆಚರಣೆಯೂ ಇದೆ’ ಎನ್ನುತ್ತಾರವರು.

Leave a Reply