ನಾಲ್ಕನೇ ತ್ರೈಮಾಸಿಕದಲ್ಲೂ ವಿಶಾಲ್ ಸಿಕ್ಕ ಕಮಾಲ್, ಇನ್ಫೋಸಿಸ್ ಆದಾಯದಲ್ಲಿ ಏರಿಕೆ

ಡಿಜಿಟಲ್ ಕನ್ನಡ ಟೀಮ್

ಭಾರತದ ಪ್ರತಿಷ್ಠಿತ ಐಟಿ ಕಂಪನಿಯಾದ ಇನ್ಫೋಸಿಸ್ ತನ್ನ ಆದಾಯ ಗಳಿಕೆಯ ಹಾದಿಯಲ್ಲಿ ಯಶಸ್ವಿಯಾಗಿ ತನ್ನ ಪಯಣ ಮುಂದುವರಿಸಿದೆ. ಇನ್ಫಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿಶಾಲ್ ಸಿಕ್ಕ ತಮ್ಮ ಸ್ಟ್ರೈಕ್ ರೇಟ್ ಅನ್ನು ಹೆಚ್ಚಿಸಿಕೊಂಡಿದ್ದಾರೆ. ಮಾ.31ರ ಅಂತ್ಯದ ವೇಳೆಗೆ ನಾಲ್ಕನೇ ತ್ರೈಮಾಸಿಕ ಆದಾಯದಲ್ಲಿ ನಿರೀಕ್ಷೆಗೂ ಮೀರಿ ₹ 3597 ಕೋಟಿ ಲಾಭ ಪಡೆದಿದೆ.

ಆಪಲ್ ಇಂಕ್, ವೊಕ್ಸ್ ವಾಗನ್ ಎಜಿ ಮತ್ತು ವಾಲ್ ಮಾರ್ಟ್ ಸ್ಟೋರ್ಸ್ ಇಂಕ್ ನಂತಹ  ಗ್ರಾಹಕರನ್ನುಹೊಂದಿರುವ ಬೆಂಗಳೂರು ಮೂಲದ ಇನ್ಫೋಸಿಸ್ 2015-16ನೇ ಸಾಲಿನಲ್ಲಿ ₹16,550 ಕೋಟಿ ಗಳಿಕೆ ಅಂದರೆ ಶೇ.23.4ರಷ್ಟು  ಹೆಚ್ಚಳ ಕಂಡಿದೆ.

‘ನಮ್ಮ ಗ್ರಾಹಕರಿಗೆ ನಾವೀನ್ಯತೆಯ ಸೇವೆ ಕೊಟ್ಟೆವು. ಹೊಸ ಕಲಿಕೆ, ಅನ್ವೇಷಣೆ, ತಂತ್ರಜ್ಞಾನಾಭಿವೃದ್ಧಿಗಳಲ್ಲಿ ತೊಡಗಿಸಿಕೊಂಡು, ಈ ಹಿಂದೆ ಭಾಗವಹಿಸದಿದ್ದ ವಿಭಾಗಗಳಲ್ಲೂ ಪ್ರಯತ್ನಿಸಿ ಫಲ ಪಡೆದುಕೊಂಡೆವು’ ಎಂಬುದು ವಿಶಾಲ್ ಅವರ ಅಭಿಪ್ರಾಯ.

2016-17ನೇ ಸಾಲಿನಲ್ಲಿ ಶೇ.11.5 ರಿಂದ 13.5 ರಷ್ಟು ಆದಾಯ ಹೆಚ್ಚುವ ನಿರೀಕ್ಷೆಯನ್ನು ಇನ್ಫೋಸಿಸ್ ಹೊಂದಿದೆ.

ವಿಶಾಲ್ ಸಿಕ್ಕಾ ಇನ್ಫೋಸಿಸ್ ಅನ್ನು ಲಾಭದ ಹಳಿಗೆ ತಂದಿದ್ದು ಹೇಗೆ ಎಂಬ ಹಳೆಯ ಲೇಖನವನ್ನು ಇಲ್ಲಿ ಓದಬಹುದು.

1 COMMENT

Leave a Reply