ಏಸೂಸ್ ನಿಂದ ಆರ್ ಒಜಿ ಸರಣಿಯ ಹಲವು ಉತ್ಪನ್ನಗಳು ಮಾರುಕಟ್ಟೆಗೆ

ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಏಸೂಸ್ ಇದೀಗ ತನ್ನ ಗ್ರಾಹಕರಿಗಾಗಿ ವಿಭಿನ್ನ ಮಾದರಿಯ ಗೇಮ್ ಆಫ್ ರಿಪಬ್ಲಿಕ್ಸ್ (ಆರ್‍ಒಜಿ) ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. 6ನೇ ಜನರೇಶನ್ ಮಾದರಿಯ ಈ ಹೊಸ ಹೈ ಎಂಡ್ ಡೆಸ್ಕ್ ಟಾಪ್ ಮತ್ತು ROG G20, ROG GT51  ಹಾಗೂ ROG G501VW, ROG G551VW, ROG G752VY and ROG GL552VW ಗಳನ್ನು ಸಹ ಪರಿಚಯಿಸಿದೆ.

ಈ ಬಗ್ಗೆ ಮಾತನಾಡಿದ ಏಸೂಸ್ ಸಂಸ್ಥೆಯ ದಕ್ಷಿಣ ಏಶಿಯಾ ಮತ್ತು ದೇಶೀಯ ಮ್ಯಾನೇಜರ್ ಪೀಟರ್ ಚಾಂಗ್ ಅವರು ಗೇಮಿಂಗ್ ಇಂಡಸ್ಟ್ರಿ ಮತ್ತು ಸಂಸ್ಥೆಯ ಮಹತ್ತರ ಸಾಧನೆಯ ಬಗ್ಗೆ ಮಾತನಾಡುತ್ತಾ, ‘ನಮ್ಮ ಗ್ರಾಹಕರ ಅಭಿಲಾಶೆಗೆ ತಕ್ಕಂತೆ ಬದಲಾದ ಜಾಗತಿಕ ವಿದ್ಯಮಾನಕ್ಕೆ ಅನುಗುಣವಾಗಿ ನಾವು ಉತ್ತಮ ತಂತ್ರಜ್ಞಾನದ ನೆರವಿನಿಂದ ಅತ್ಯಂತ ವಿಭಿನ್ನ ಮಾದರಿಯ ಆರ್‍ಒಜಿ ಸರಣಿ ಗೇಮಿಂಗ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ” ಎಂದರು.

asusu

ಎಲ್ಲಾ ತೆರನಾದ ROG GT51 ಮಾದರಿಯಲ್ಲಿ 6ನೇ ಜನರೇಶನ್ 2016 ರ ಸಿಇಎಸ್ ಇನ್ನೋವೇಶನ್ ಪ್ರಶಸ್ತಿ ಪಡೆದಿದ್ದು, ಇದರಲ್ಲಿ ಉತ್ತಮ ಗುಣಮಟ್ಟದ ತಂತ್ರಜ್ಞಾನದ ಆಧಾರದಲ್ಲಿ 10 ಜಿಬಿಪಿಎಸ್ ವೇಗದ ಡಾಟಾ ಟ್ರಾನ್ಸ್ ಫಾರ್ಮಶೆನ್ ಸಹ ಮಾಡಬಹುದಾಗಿದೆ. ಇದೇ ರೀತಿಯಲ್ಲಿ ಉಳಿದ ಆರ್‍ಒಜಿ ಸರಣಿಯ ಎಲ್ಲಾ ಮಾದರಿಗಳು ಸಹ ವಿಶೇಷವಾದ ಹೈಪರ್ ಕೂಲ್ ಟೆಕ್ನಾಲಜಿ, ಆಂಟಿ ಗೋಸ್ಟಿಂಗ್ ಗೇಮಿಂಗ್ ಕೀ-ಬೋರ್ಡ್ ಇನ್ನು ಮುಂತಾದ ಗುಣಲಕ್ಷಣ ಹೊಂದಿವೆ ಎಂದು ಕಂಪನಿ ವಿವರಿಸಿದೆ.

GL552VW ಮಾದರಿಯಲ್ಲಿ ಪವರ್‍ಫುಲ್ ನೋಟ್‍ಬುಕ್ ಇಷ್ಟಪಡುವ ಗ್ರಾಹಕರಿಗಾಗಿ ಮೆಟಾಲಿಕ್ ಡಿಸೈನ್ ಮತ್ತು ಬ್ಯಾಕ್ ಲಿಟ್ ರೋಗ್ ಲೋಗೊ ಸಹ ಒಳಗೊಂಡಿದೆ. ಅಲ್ಲದೆ, 4ಜಿಬಿ ಗ್ರಾಫಿಕ್ ಮೆಮೊರಿ ಮತ್ತು 16ಜಿಬಿ ಅಲ್ಟ್ರಾ ಫಾಸ್ಟ್ ಸಿಸ್ಟಂ ಮೆಮೊರಿ ಹೊಂದಿದೆ.

ಇವುಗಳ ಬೆಲೆ ಈ ಕೆಳಗಿನಂತಿವೆ: ರೋಗ್ ಜಿಟಿ51- 3,25,900 ರಂತೆ, ರೋಗ್ ಜಿ20ಸಿಬಿ – 1,22, 990 ರಂತೆ, ರೋಗ್ ಜಿ501ವಿಡ್ಬಲ್ಯೂ – 95,490 ರಂತೆ ಜಿ551 ವಿಡ್ಬಲ್ಯೂ- 1,00,490, ಜಿ752ವಿವೈ – 1,79, 990 ಮತ್ತು ಜಿಎಲ್ 552ವಿಡ್ಬಲ್ಯೂ – 82,490 ರೂ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

Leave a Reply