ದಾವೂದ್ ಇಬ್ರಾಹಿಮ್ಗೆ ಕಾಲೇ ಕೊಳೆತಿದೆಯಂತೆ…

 

ಡಿಜಿಟಲ್ ಕನ್ನಡ ಟೀಮ್

ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ನನ್ನು ಭಾರತವಂತೂ ಹಿಡಿಯಲಾಗಲಿಲ್ಲ, ಆದರೆ ಆತನ ಕೆಟ್ಟ ಕರ್ಮಗಳೇ ಆತನನ್ನು ಹಿಡಿದು ತಿನ್ನುತ್ತಿವೆ…. ಹೀಗಂತಲಾದರೂ ಸಮಾಧಾನಪಟ್ಟುಕೊಳ್ಳಬಹುದಾದ ಸುದ್ದಿಯೊಂದನ್ನು ನ್ಯೂಸ್18 ಬಿತ್ತರಿಸಿದೆ.

ಇದರ ವರದಿಯ ಪ್ರಕಾರ ದಾವೂದ್ ಇಬ್ರಾಹಿಂ ಕಾಲಿನ ಗ್ಯಾಂಗ್ರೀನ್ ಗೆ ತುತ್ತಾಗಿ ಕರಾಚಿಯ ಲಿಖಾಯತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗ್ಯಾಂಗ್ರಿನ್ ಅದಾಗಲೇ ಅಪಾಯದ ಹಂತ ತಲುಪಿರುವುದರಿಂದ, ಕಾಲು ಕತ್ತರಿಸುವುದೇ ಪರಿಹಾರ ಎಂದು ಆಸ್ಪತ್ರೆ ವೈದ್ಯರು ಹೇಳಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್18 ವರದಿ ಮಾಡಿದೆ. ಸೇನಾ ಆಸ್ಪತ್ರೆಯ ವೈದ್ಯರು ಆತನ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದು, ಐ ಎಸ್ ಐ ರಕ್ಷಣೆಯಲ್ಲೇ ದಾವೂದ್ ಇದ್ದಾನೆ.

257 ಮಂದಿಯನ್ನು ಬಲಿ ತೆಗೆದುಕೊಂಡು, ಹಲವರನ್ನು ಗಾಯಗೊಳಿಸಿ ಮುಂಬೈ ಜನಜೀವನವನ್ನೇ ಕದಡಿದ 1993ರ ಮುಂಬೈ ಸರಣಿ ಸ್ಫೋಟಕ್ಕೆ ಹಣಕಾಸು ಒದಗಿಸಿದವನು ದಾವೂದ್ ಇಬ್ರಾಹಿಂ.

ಇನ್ನೊಂದೆಡೆ, ‘ಇವೆಲ್ಲ ನಿಮ್ಮ ತನಿಖಾ ಏಜೆನ್ಸಿಗಳಿಗೆ ಸಿಕ್ಕಿರುವ ತಪ್ಪು ಮಾಹಿತಿ. ದಾವೂದ್ ಆರಾಮಾಗಿ ಇದ್ದಾನೆ’ ಅಂತ ಆತನ ಸಹಚರ ಚೋಟಾ ಶಕೀಲ್ ಟೈಮ್ಸ್ ಆಫ್ ಇಂಡಿಯಾಕ್ಕೆ ಮಾಹಿತಿ ನೀಡಿದ್ದಾನೆ.

Leave a Reply