ದೆಹಲಿ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಅಗ್ನಿಗೆ ಆಹುತಿ

ಡಿಜಿಟಲ್ ಕನ್ನಡ ಟೀಮ್

ದೆಹಲಿಯ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಅಗ್ನಿ ಅನಾಹುತಕ್ಕೆ ಒಳಗಾಗಿದ್ದು, ಸಂಪೂರ್ಣ ಸಂಗ್ರಹಾಲಯವೇ ಉರಿದುಹೋಗಿದೆ. ಅಗ್ನಿ ಆಕಸ್ಮಿಕಕ್ಕೆ ಕಾರಣಗಳು ತಿಳಿದಿಲ್ಲವಾದರೂ, ಈ ಪ್ರಮಾಣದಲ್ಲಿ ಬೆಂಕಿ ಹತೋಟಿಗೆ ಬಾರದೇ ವಿನಾಶ ಸಂಭವಿಸುವುದಕ್ಕೆ, ಕಟ್ಟಡದಲ್ಲಿ ಅಗ್ನಿ ನಿರೋಧಕ ಎಚ್ಚರಿಕೆ ವ್ಯವಸ್ಥೆಗಳು ಸುಸ್ಥಿತಿಯಲ್ಲಿ ಇಲ್ಲದಿದ್ದುದ್ದೇ ಕಾರಣ ಎಂಬುದಂತೂ ದೃಢಪಟ್ಟಿದೆ.

ಆರು ಮಂದಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದಂತೆ ಯಾವುದೇ ಜೀವಹಾನಿ ಆಗಿಲ್ಲ. ಆದರೆ ನೈಸರ್ಗಿಕ ಇತಿಹಾಸವನ್ನು ಸಾರುವ ಡೈನೊಸಾರ್ ಪಳೆಯುಳಿಕೆ, ಹಲವು ಪಕ್ಷಿಗಳ ಕಾಪಿಟ್ಟ ಮೊಟ್ಟೆಗಳು, ವಿಶೇಷ ಕ್ರಮದಿಂದ ರೂಪುಗೊಳಿಸಿ ಇಟ್ಟಿದ್ದ ಪ್ರಾಣಿಗಳ ನಿರ್ಮಿತಿಗಳು ಎಲ್ಲವೂ ನಾಶವಾಗಿವೆ. ರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ.

1978ರಲ್ಲಿ ಸ್ಥಾಪಿತವಾಗಿದ್ದ ಈ ಸಂಗ್ರಹಾಲಯಕ್ಕೆ ದಿನಕ್ಕೆ ಸರಾಸರಿ ಸಾವಿರ ಮಂದಿ ಭೇಟಿ ಕೊಡುತ್ತಿದ್ದರು.

Leave a Reply