ಬರದ ಬಿಸಿಯುಸಿರು ಗೊತ್ತು, ಮಳೆಯಿಂದ ನಲುಗಿರುವ ಈಶಾನ್ಯ ರಾಜ್ಯಗಳ ಕುರಿತೂ ಇರಲಿ ಸಂವೇದನೆ

ಡಿಜಿಟಲ್ ಕನ್ನಡ ಟೀಮ್

ಅಸ್ಸಾಮಿನ ಬ್ರಹ್ಮಪುತ್ರ ಪ್ರವಾಹದಿಂದ ಸುಮಾರು 92 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅಸ್ಸಾಂನ ಶಿವಸಾಗರ್, ಚರೈಡಿಯೋ, ಜೊರ್ಹತ್, ತಿನ್ಸೂಕಿಯಾ, ದಿಬ್ರುಘರ್ ಮತ್ತು ಕಾಚರ್ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಿ ಅತಿವೃಷ್ಟಿ ಉಂಟಾಗಿದೆ. ಸಂಕಷ್ಟದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಮುಖ್ಯಮಂತ್ರಿ ತರುಣ್ ಗೋಗೊಯ್ ಸರ್ಕಾರ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ಸಹಾಯ ಪಡೆಗಳ ಸಹಾಯ ಪಡೆದುಕೊಂಡಿದೆ. ಬ್ರಹ್ಮಪುತ್ರ, ದಿಸಾಗ್ ಮತ್ತು ಬುರ್ಹಿದಿಂಗ್ ನದಿಗಳ ಪ್ರವಾಹದಿಂದ ಸುಮಾರು 200 ಹಳ್ಳಿಗಳು ಮುಳುಗಡೆಯಾಗಿವೆ. ಸದ್ಯ 3500 ಮಂದಿಯನ್ನು ಸ್ಥಳಾಂತರಿಸಿದ್ದು, 31 ಶಿಬಿರಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ ರಸ್ತೆ ಮತ್ತು ರೈಲ್ವೆ ಸಂಪರ್ಕ ಕಡಿತಗೊಂಡ ಪರಿಣಾಮ ಪ್ರವಾಹದಲ್ಲಿ ಸಿಲುಕಿರುವವರು ಸಾಕಷ್ಟು ಮಂದಿ ಭಯಭೀತರಾಗಿದ್ದಾರೆ.

ಇದರ ಜತೆಯಲ್ಲಿ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ, ಭೂಕುಸಿತದಿಂದ ಸಹ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ಅರುಣಾಚಲ ಪ್ರದೇಶದಲ್ಲಿ ಗುಡ್ಡ ಕುಸಿದು 19 ಮಂದಿ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಕಲಿಖೊ ಪೌಲ್ ಅವರು ಪುನರ್ವಸತಿಗಾಗಿ 2 ಕೋಟಿ ಪರಿಹಾರ ಬಿಡುಗಡೆ ಮಾಡಿದ್ದಾರೆ. ನಾಗಾಲ್ಯಾಂಡ್ ನಲ್ಲೂ ಸಾಕಷ್ಟು ಭಾಗಗಳಲ್ಲಿ ಭೂಕುಸಿತ ಉಂಟಾಗಿದೆ. ಸಂಪರ್ಕ ಕಳೆದುಕೊಂಡಿರುವ ರಸ್ತೆ ಮಾರ್ಗಗಳ ದುರಸ್ತಿಕಾರ್ಯ ಕೈಗೊಂಡಿದ್ದಾರೆ.

Leave a Reply