ಆಗಸ್ಟಾವನ್ನು ಕಪ್ಪುಪಟ್ಟಿಗೆ ಸೇರಿಸಿದ್ದಕ್ಕೆ ದಾಖಲೆ ಕೊಡಿ: ಕಾಂಗ್ರೆಸ್ಗೆ ಪಾರಿಕರ್ ಪ್ರಶ್ನೆ

ಡಿಜಿಟಲ್ ಕನ್ನಡ ಟೀಮ್

‘ಆಗಸ್ಟಾ ವೆಸ್ಟ್ಲ್ಯಾಂಡ್ ಕಂಪನಿಯನ್ನು ಯುಪಿಎ-2 ಸರ್ಕಾರವೇ ಕಪ್ಪುಪಟ್ಟಿಗೆ ಸೇರಿಸಿತ್ತು. ಆದರೆ ಎನ್ ಡಿ ಎ ಸರ್ಕಾರ ಆ ಕಂಪನಿಯನ್ನು ಮೇಕ್ ಇನ್ ಇಂಡಿಯಾದಲ್ಲಿ ಸೇರಿಸಿಕೊಂಡಿದೆ’ ಇದು ಆಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದಲ್ಲಿ ಲಂಚ ಸ್ವೀಕರಿಸಿರುವ ಆರೋಪಕ್ಕೆ ಒಳಗಾಗಿರುವ ಕಾಂಗ್ರೆಸ್ ನೀಡಿರುವ ಮುಖ್ಯ ಸಮರ್ಥನೆ. ಅಂದರೆ ಲಂಚದ ಮೂಲಕ ಒಪ್ಪಂದ ಸಾಕಾರಗೊಳಿಸಿಕೊಳ್ಳಲು ಯತ್ನಿಸಿದ್ದ ಕಂಪನಿಯನ್ನೇ ತಿರಸ್ಕರಿಸಿ ಪ್ರಾಮಾಣಿಕತೆ ಮೆರೆದಿದ್ದೇವೆ ಎಂಬ ವ್ಯಾಖ್ಯಾನ ಅದರದ್ದು.

ಆದರೆ, ರಕ್ಷಣಾ ಸಚಿವ ಮನೋಹರ್ ಪಾರಿಕರ್ ಮಾತ್ರ ಕಾಂಗ್ರೆಸ್ಸಿನ ಈ ಹೇಳಿಕೆಯೇ ಸತ್ಯವಲ್ಲ ಎಂದಿದ್ದಾರೆ. ‘ಆಗಸ್ಟಾ ವೆಸ್ಟ್ಲ್ಯಾಂಡ್ ಅನ್ನು ಕಪ್ಪುಪಟ್ಟಿಗೆ ಸೇರಿಸಿರುವ ಆದೇಶ ಪ್ರತಿ ತೋರಿಸಲಿ’ ಎಂದವರು ಸವಾಲು ಹಾಕಿದ್ದಾರೆ.

ಇದಕ್ಕೂ ಮುಂಚೆ, ಕೆಲವು ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ, ‘ಅಮೆರಿಕ ಪ್ರವಾಸದಲ್ಲಿ ಇಟಲಿ ಪ್ರಧಾನಿಯನ್ನು ಭೇಟಿಯಾಗಿದ್ದ ಮೋದಿಯವರು, ಹಗರಣದಲ್ಲಿ ಸೋನಿಯಾಗಾಂಧಿಯವರಿಗೆ ಕೊಂಡಿ ಬೆಸೆಯುವ ದಾಖಲೆಗಳನ್ನು ನೀಡುವುದಾದರೆ ಪ್ರತಿಯಾಗಿ ಇಟಲಿ ನಾವಿಕರನ್ನು ಬಿಡುಗಡೆಗೊಳಿಸುವ ಪ್ರಸ್ತಾವ ನೀಡಿದ್ದರು’ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, ‘ಭಾರತ ಮತ್ತು ಇಟಲಿ ಪ್ರಧಾನಿಗಳ ನಡುವೆ ಅಂಥ ಭೇಟಿಯೇ ನಡೆದಿಲ್ಲ. ವದಂತಿಗಳನ್ನೇ ನಂಬಿ ಮಾಡುತ್ತಿರುವ ಆರೋಪವಿದು’ ಎಂದು ಅಲ್ಲಗೆಳೆದರು.

Leave a Reply