ಚಕ್ರವ್ಯೂಹದ ಶುಕ್ರವಾರ, ನೀವು ಕಣ್ತುಂಬಿಸಿಕೊಳ್ಳಬಹುದಾದ ಚಿತ್ರಪಟ

ಸನ್‍ಶೈನ್ ಕ್ರಿಯೇಷನ್ಸ್ ಲಾಂಛನದಲ್ಲಿ ಎನ್.ಕೆ.ಲೋಹಿತ್ ಅವರು ನಿರ್ಮಿಸಿರುವ `ಚಕ್ರವ್ಯೂಹ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಎಮ್.ಸರವಣನ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಷಣ್ಮುಗ ಸುಂದರಂ ಅವರ ಛಾಯಾಗ್ರಹಣವಿದೆ. ಎಸ್.ಎಸ್.ತಮನ್ ಸಂಗೀತ ನಿರ್ದೇಶನ, ಸುಬಾರಕ್ ಸಂಕಲನ, ಶೋಭಿ, ಶೇಖರ್ ನೃತ್ಯ ನಿರ್ದೇಶನ, ಸ್ಟಂಟ್ ಶಿವ ಸಾಹಸ ನಿರ್ದೇಶನ, ಸೀನು ಕಲಾ ನಿರ್ದೇಶನ ಹಾಗೂ ಚಂಪಕಧಾಮ ಬಾಬು, ಅನಿಲ್‍ಕುಮಾರ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಕವಿರಾಜ್, ಚಂದನ್ ಶೆಟ್ಟಿ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಪ್ರದೀಪ್ ಸುಬ್ರಮಣ್ಯಂ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

film- ruchira

ಪುನೀತ್‍ರಾಜಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ರಚಿತಾರಾಂ. ರಂಗಾಯಣ ರಘು, ಸಾಧುಕೋಕಿಲ, ಅರುಣ್ ವಿಜಯ್, ಅಭಿಮನ್ಯು ಸಿಂಗ್, ಸಿತಾರಾ, ಭವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಊಟಿ

 ಪರಿವರ್ತನ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹೆಚ್.ಮೋಹನ್ ಕುಮಾರ್ ಅವರು ನಿರ್ಮಿಸಿರುವ `ಊಟಿ’ ಚಿತ್ರವೂ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಮಹೇಶ್ ಕುಮಾರ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರಾಜ್‍ಭಾಸ್ಕರ್ ಅವರ ಸಂಗೀತವಿದೆ. ಡಾ||ಕೃಷ್ಣಮೂರ್ತಿ ಈ ಚಿತ್ರಕ್ಕೆ ಚಮರಂ ಕಥೆ, ಸಂಭಾಷಣೆ ಬರೆದಿದ್ದಾರೆ.  ಎಂ.ಸೆಲ್ವಂ ಛಾಯಾಗ್ರಹಣ, ಎನ್.ಎಂ.ವಿಶ್ವ ಸಂಕಲನ, ಮೈಸೂರು ರಾಜು, ಜಗ್ಗು ನೃತ್ಯ ನಿರ್ದೇಶನ ಹಾಗೂ ವಿಕ್ರಂ ಸಿಂಗ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅವಿನಾಶ್ ನರಸಿಂಹರಾಜು, ನೈನಾ ಸರ್ವರ್, ಮಠ ಗುರುಪ್ರಸಾದ್, ಗಿರಿರಾಜ್, ಕೈಲಾಶ್ ಮುಂತಾದವರಿದ್ದಾರೆ.

film-avinash

Leave a Reply