ಭಗತ್ ಸಿಂಗ್ ಉಗ್ರವಾದಿ ಎಂದ ಪಠ್ಯ ಸರಿಪಡಿಸುವುದಕ್ಕೆ ಕೇಂದ್ರದ ಸಮ್ಮತಿ, ಸ್ವಾಮಿಗೆ ಮಾತಿಗೆ ಬಿಡಲಿಲ್ಲ..

 

ಡಿಜಿಟಲ್ ಕನ್ನಡ ಟೀಮ್

ದೆಹಲಿ ವಿಶ್ವವಿದ್ಯಾಲಯದ ಪಠ್ಯದಲ್ಲಿ ಭಗತ್ ಸಿಂಗ್ ಅವರನ್ನು ಉಗ್ರವಾದಿ ಕ್ರಾಂತಿಕಾರಿ ಎಂದು ಬರೆದಿರುವುದನ್ನು ತೆಗೆದುಹಾಕಬೇಕೆಂದು ರಾಜ್ಯಸಭೆಯಲ್ಲಿ ಜೆಡಿಯು ಸಂಸದ ಕೆ. ಸಿ. ತ್ಯಾಗಿ ಒತ್ತಾಯಿಸಿದರು. ಇದಕ್ಕೆ ಸರ್ಕಾರದ ಕಡೆಯಿಂದ ತಕ್ಷಣವೇ ಸ್ಪಂದಿಸಿದ ಮುಖ್ತಾರ್ ಅಬ್ಬಾಸ್ ನಖ್ವಿ, ‘ಭಗತ್ ಸಿಂಗ್ ನಮ್ಮೆಲ್ಲರಿಗೂ ಆದರ್ಶ ಪುರುಷ. ತಕ್ಷಣವೇ ಸಂಬಂಧಪಟ್ಟ ಸಚಿವರಿಗೆ ಈ ಬಗ್ಗೆ ಸೂಚಿಸಿ ಸರಿಪಡಿಸಲಾಗುವುದು’ ಎಂದು ಭರವಸೆ ಕೊಟ್ಟರು.

ನಂತರ ಸುಬ್ರಮಣಿಯನ್ ಸ್ವಾಮಿಯವರ ಮೇಲೆ ಕಾಂಗ್ರೆಸಿಗರು ಆರೋಪ ಹೊರೆಸಿದ್ದರಿಂದ, ಅಧ್ಯಕ್ಷ ಸ್ಥಾನದಲ್ಲಿರುವವರು ಅವರಿಗೆ ಉತ್ತರಿಸುವ ಅವಕಾಶ ನೀಡಬೇಕಾಯಿತು. ಉತ್ತರಿಸುವ ಹಂತದಲ್ಲಿ ಸುಬ್ರಮಣಿಯನ್ ಸ್ವಾಮಿ ಇಟಾಲಿಯನ್ ಸಂವಿಧಾನ ಪ್ರಸ್ತಾಪಿಸಿದ್ದು ಭಾರಿ ಗದ್ದಲಕ್ಕೆ ಕಾರಣವಾಯಿತು. ಇದೇ ನೆಪದಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಮುಂದಿನ ಆವರಣಕ್ಕೆ ಇಳಿದು ಪ್ರತಿಭಟಿಸತೊಡಗಿದರು. ಸ್ವಾಮಿ ಹೇಳಿಕೆಯನ್ನು ಕಡತದಿಂದ ತೆಗೆದುಹಾಕಲಾಯಿತಲ್ಲದೇ, ಸ್ವಾಮಿಯವರು ಅನವಶ್ಯಕವಾಗಿ ಪ್ರಚೋದಿಸುವ ಮಾತುಗಳನ್ನಾಡಬಾರದು ಎಂದೂ ಪೀಠವು ಹೇಳಿತು.

Leave a Reply