ಸುದ್ದಿ ಸಂತೆ: ಆದರ್ಶ- ಕಲ್ಲಿದ್ದಲು ಹಗರಣಗ್ರಸ್ತರಿಗೆ ಕೋರ್ಟ್ ಶಾಕ್, ಸುಬ್ರಮಣಿಯಮ್ ಸ್ವಾಮಿ ಏನಂದ್ರು?, ನೀವ್ ತಿಳಿಬೇಕಿರೋ ಎಲ್ಲವೂ ಇಲ್ಲಿ…

ದಕ್ಷಿಣಭಾರತದ ಮೊದಲ ಸುರಂಗಮಾರ್ಗ ನಿಲ್ದಾಣ ಎಂಬ ಖ್ಯಾತಿಯ ಕಬ್ಬನ್ ಪಾರ್ಕ್ ಮೆಟ್ರೋ ಸಂಚಾರ ಶುಕ್ರವಾರ ಸಂಜೆ ಉದ್ಘಾಟನೆಗೊಂಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ವೆಂಕಯ್ಯನಾಯ್ಡು ಹಸಿರು ನಿಶಾನೆ ತೋರಿದರು. ರಾಜಕಾರಣಿಗಳು- ಅಧಿಕಾರಿವರ್ಗದ ಸಮೂಹವೇ ನೆರೆದಿತ್ತು. ಆದ್ರೆ ನಮ್ಮ ಸೆಲ್ಯೂಟ್ ಇಂಥ ಕಾರ್ಮಿಕರಿಗೆ… ನೀವೇನಂತೀರಿ?

 

ಡಿಜಿಟಲ್ ಕನ್ನಡ ಟೀಮ್

 ಆದರ್ಶ ಹೌಸಿಂಗ್ ಸೊಸೈಟಿ ಕಟ್ಟಡ ನೆಲಸಮಕ್ಕೆ ಬಾಂಬೆ ಹೈಕೋರ್ಟ್ ನಿರ್ದೇಶನ

ಭ್ರಷ್ಟಾಚಾರದ ವಿರುದ್ಧ ಖಡಕ್ ಎಚ್ಚರಿಕೆ ರವಾನಿಸಿರುವ ಬಾಂಬೆ ಹೈಕೋರ್ಟ್, ಆದರ್ಶ ಕೋ ಆಪರೇಟಿವ್ ಸೊಸೈಟಿಯ 31 ಅಂತಸ್ಥಿನ ಕಟ್ಟಡವನ್ನು ನೆಲಸಮ ಮಾಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಿದೆ. ಈ ವೇಳೆ ಆದರ್ಶ ಹೌಸಿಂಗ್ ಸೊಸೈಟಿ, ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ನಿಟ್ಟಿನಲ್ಲಿ ಕಟ್ಟಡ ಕೆಡವಲು, 12 ವಾರಗಳ ತಡೆಯಾಜ್ಞೆ ಕೋರಿದ್ದು ಬಾಂಬೆ ಹೈಕೋರ್ಟ್ ಸಮ್ಮತಿ ನೀಡಿದೆ.

ಕಲ್ಲಿದ್ದಲು ಹಗರಣ: ನವೀನ್ ಜಿಂದಾಲ್, ಇತರೆ 14 ಮಂದಿ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಸೂಚನೆ

ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನವೀನ್ ಜಿಂದಾಲ್, ಮಾಜಿ ಕೇಂದ್ರ ಕಲ್ಲಿದ್ದಲು ರಾಜ್ಯ ಸಚಿವ ದಸಾರಿ ನಾರಾಯಣ ರಾವ್ ಮತ್ತು ಇತರೆ 13 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಲು ವಿಶೇಷ ನ್ಯಾಯಾಲಯ ಸೂಚನೆ. ‘ಎಲ್ಲ ಆರೋಪಿಗಳನ್ನು ಪಿತೂರಿ, ಮೋಸ ಹಾಗೂ ಇತರೆ ಅಪರಾಧ ಹಿನ್ನೆಲೆಯಲ್ಲಿ ಭಾರತೀಯ ನೀತಿ ಸಂಹಿತೆ 120ಬಿ ಜತೆಗೆ 409 ಮತ್ತು 420ರ ಅಡಿಯಲ್ಲಿ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 13(1)(ಸಿ), 13(1)(ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು’ ಎಂದು ಸಿಬಿಐ ವಿಶೇಷ ನ್ಯಾಯಾಧೀಶರಾದ ಭರತ್ ಪರಶಾರ್ ತಿಳಿಸಿದ್ದಾರೆ.

 

ರಾಜ್ಯಸಭೆಯಲ್ಲಿ ಮುಂದುವರಿದ ಸ್ವಾಮಿಕಾರ್ಯ

ಆಗಸ್ಟಾ ವೆಸ್ಟ್ಲ್ಯಾಂಡ್ ಪ್ರಕರಣದಲ್ಲಿ ಕಾಂಗ್ರೆಸ್ ವಿರುದ್ಧ ರಾಜ್ಯಸಭೆಯಲ್ಲಿ ಬಿಜೆಪಿ ಪರ ಮಹಾಸಮರಕ್ಕೆ ನಾಂದಿ ಹಾಡಿರುವ ಸಂಸದ ಸುಬ್ರಮಣಿಯನ್ ಸ್ವಾಮಿ, ಈ ಹಿಂದಿನ ಕಲಾಪದ ಅವಧಿಗಳಲ್ಲಿ ತಮ್ಮ ಮಾತುಗಳನ್ನು ಕಡತದಿಂದ ತೆಗೆದು ಹಾಕಿರುವುದರ ವಿರುದ್ಧ ರಾಜ್ಯಸಭೆ ಸ್ಪೀಕರ್ ಅವರಿಗೆ ಮರು ಪರಿಶೀಲನೆ ಅರ್ಜಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಚರ್ಚೆ ವೇಳೆ ಕಾಂಗ್ರೆಸ್ಸಿನ ಗುಲಾಂ ನಬಿ ಆಜಾದ್ ಅವರು ಫಿನ್ಮೆಕನಿಕಾವನ್ನು ಕಪ್ಪುಪಟ್ಟಿಗೆ ಸೇರಿಸಿದ್ದು ಹಿಂದಿನ ಯುಪಿಎ ಸರ್ಕಾರ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಹಕ್ಕುಚ್ಯುತಿಯನ್ನೂ ಮಂಡಿಸಿದ್ದಾರೆ.

ಆಗಸ್ಟಾ ಪ್ರಕರಣದಲ್ಲಿ ಮಾಧ್ಯಮಗಳ ನಿರ್ವಹಮೆಗೂ ಮಧ್ಯವರ್ತಿಗಳು 50 ಕೋಟಿ ರುಪಾಯಿ ವ್ಯಯಿಸಿರುವ ವರದಿಗಳಿರುವುದರಿಂದ, ರಾಜ್ಯಸಭೆಯಲ್ಲಿ ಆ ಬಗ್ಗೆಯೂ ಚರ್ಚೆ ಆಗಬೇಕು ಎಂದು ಸ್ವಾಮಿ ಬೇಡಿಕೆ ಸಲ್ಲಿಸಿದ್ದಾರೆ.

ಒಟ್ಟಾರೆಯಾಗಿ, ಈ ವಾರವಷ್ಟೇ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿರುವ ಸುಬ್ರಮಣಿಯನ್ ಸ್ವಾಮಿ ವಾರಪೂರ್ತಿ ಚರ್ಚೆಯ ಕೇಂದ್ರಬಿಂದು ಆದರು.

ಇನ್ನೊಂದೆಡೆ, ಸಂಸತ್ತು ಕಲಾಪದಲ್ಲಿರುವಾಗ ರಕ್ಷಣಾ ಸಚಿವರು ಆಗಸ್ಟಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದ ಹೊರಗಡೆ ಮಾಹಿತಿ ಹೊರಹಾಕಿದ್ದು ನಿಯಮಬಾಹಿರ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್, ಈ ಸಂಬಂಧ ಹಕ್ಕುಚ್ಯುತಿ ನೋಟೀಸ್ ನೀಡಿದೆ.

 

ಒಲಿಂಪಿಕ್ಸ್ ರಾಯಭಾರಿಯಾಗಲು ಬಿಂದ್ರಾ ಓಕೆ, ಸಚಿನ್, ರೆಹಮಾನ್ ಪ್ರತಿಕ್ರಿಯೆ ಬಾಕಿ

ಇತ್ತೀಚೆಗೆ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ರಾಯಭಾರಿಯಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ನೇಮಕ ಮಾಡಿದ ನಂತರ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದನ್ನು ಸರಿಪಡಿಸಿಕೊಳ್ಳುವ ಪ್ರಯತ್ನಕ್ಕೆ ಐಒಎ ಮುಂದಾಗಿದೆ. ಪರಿಣಾಮ ಭಾರತದ ಖ್ಯಾತ ಶೂಟರ್ ಅಭಿನವ್ ಬಿಂದ್ರಾ, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರಿಗೂ ಈ ಆಹ್ವಾನ ನೀಡಿದೆ.

ಸಲ್ಮಾನ್ ಖಾನ್ ಜತೆ ರಾಯಭಾರಿಯಾಗುವ ಅವಕಾಶಕ್ಕೆ ಅಭಿನವ್ ಬಿಂದ್ರಾ ಒಪ್ಪಿಗೆ ಸೂಚಿಸಿದ್ದು, ಸಚಿನ್ ಹಾಗೂ ರೆಹಮಾನ್ ಅವರಿಂದ ಅಧಿಕೃತ ಪ್ರತಿಕ್ರಿಯೆಗಾಗಿ ಐಒಎ ಕಾಯುತ್ತಿದೆ.

ಉಳಿದಂತೆ

-ಗುಜರಾತ್ ಸರ್ಕಾರ ಇದೀಗ ಮೀಸಲು ವರ್ಗದಲ್ಲಿಲ್ಲದವರಿಗೂ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10 ಮೀಸಲು ಕಲ್ಪಿಸಿದೆ. ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಮೀಸಲು ಆಗ್ರಹಿಸಿದ್ದ ಪಾಟಿದಾರ ಸಮುದಾಯವೇ ಇದರ ಪ್ರಮುಖ ಫಲಾನುಭವಿ ಆಗಲಿದೆ.

– ವಾರಾಂತ್ಯದ ಬಿಡುವಲ್ಲಿ ನೀವು ಭಾಗವಹಿಸಬೇಕಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದು..

– ಎಂಬಿಬಿಎಸ್, ಬಿಡಿಎಸ್ ಮತ್ತು ಪಿಜಿ ಪದವಿಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಒಂದೇ ಪ್ರವೇಶ ಪರೀಕ್ಷೆ ನಡೆಸಿ ಎಂದು ಸುಪ್ರೀಂ ಕೋರ್ಟ್ ಸಾರಿದೆ. ಈ ವರ್ಷದಿಂದಲೇ ಅನುಷ್ಠಾನ ಕಷ್ಟ ಎಂಬ ಕೇಂದ್ರದ ಮನವಿಗೂ ಪುರಸ್ಕಾರ ಸಿಕ್ಕಿಲ್ಲ. ಈ ವ್ಯವಸ್ಥೆಯಲ್ಲಿರುವ ಆತಂಕಗಳೇನು ಗೊತ್ತೇ?

– ಈ ರೋಚಕ ಸುದ್ದಿ ಒಪ್ಪಿಸಿಕೊಳ್ಳಿ- ಲಾಹೋರಿಗೂ ಕಾಣುವಂತೆ ವಾಘಾ ಗಡಿಯಲ್ಲಿ ಹಾರಲಿರುವ ತ್ರಿವರ್ಣ!

ಅಮೆರಿಕಕ್ಕೆ ನಮ್ಮ ಮೇಲೆ ಯಾವ ಪರಿ ಪ್ರೀತಿ ಚಿಗುರ್ತಿದೆ ಅಂತಂದ್ರೆ... ಅಬ್ಬಬ್ಬಾ!

– ಸದ್ಯಕ್ಕೆ ಭಾರತಕ್ಕೆ ಬರಲ್ಲ, ಈ ಪರಿ ಒತ್ತಡ ಸರಿ ಅಲ್ಲ ಎಂದಿರುವ ವಿಜಯ್ ಮಲ್ಯ ಸಂದರ್ಶನದ ಮಾತುಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು?

bbmp protestಇದೆಂಥದೋ ಮೋಜಿನಾಟ ಎಂದುಕೊಳ್ಳಬೇಡಿ. ಬಿಬಿಎಂಪಿ ಸಭೆಯಲ್ಲಿ ಆಸ್ತಿಕರದಲ್ಲಾದ ಹೆಚ್ಚಳಕ್ಕೆ ಸದಸ್ಯರ ಪ್ರತಿಭಟನೆ ಪರಿ ಇದು!

—–

ಕಲಾವಿದರ ಮಾದರಿ ನಡತೆ ಬಗ್ಗೆ ಎನ್. ಎಸ್. ಶ್ರೀಧರಮೂರ್ತಿ ಬರೆದಿದ್ದಾರೆ.

ಟಿ. ಆರ್. ಅನಂತರಾಮು ಬರಿತಾರೆ- ‘ಎ ಬ್ಯೂಟಿಫುಲ್ ಪ್ಲಾನೆಟ್’ 3ಆ ಚಿತ್ರ ಅಮೆರಿಕದಲ್ಲಿ ಆಯ್ದ ಕೆಲವು ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಿದೆ. ಡಿಸ್ನಿ ಲ್ಯಾಂಡ್ ಸ್ಟುಡಿಯೋ ಮತ್ತು ಅಮೆರಿಕದ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್‍ಮಿನಿಸ್ಟ್ರೇಷನ್ (ನಾಸಾ) ಸಂಸ್ಥೆ ಜಂಟಿಯಾಗಿ ತಯಾರಿಸಿದ ಚಿತ್ರ ಇದು. ಬರೋಬರಿ ಹನ್ನೊಂದು ತಿಂಗಳು ಭೂಮಿಯಿಂದ 400 ಕಿಲೋ ಮೀಟರ್ ಎತ್ತರದ ಕಕ್ಷೆಯಲ್ಲಿ ಇಡೀ ಫಿಲಂ ಶೂಟ್ ಮಾಡಿದ್ದಾರೆ. ಗಗನಯಾನ ಮಾಡದಿದ್ದರೇನಂತೆ ಈ ಫಿಲಂ ನೋಡಿದರೆ ನಿಮಗೆ ಆ ಅನುಭವ ಬರುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅಸಮಾಧಾನವೆಲ್ಲ ಒಂದೆಡೆ ಕೇಂದ್ರೀಕೃತವಾಗುತ್ತಿದೆ. ದೆಹಲಿಯಲ್ಲಿ ಇದಕ್ಕೆ ಕಾಂಗ್ರೆಸ್ಸಿನ ಘಟಾನುಘಟಿ ನಾಯಕರದ್ದೇ ನೇತೃತ್ವ. ಈ ಕುರಿತ ವಿಶ್ಲೇಷಣೆ ಓದಿ.

 

Leave a Reply