ಗುಜರಾತಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೂ ಮೀಸಲು

 

ಡಿಜಿಟಲ್ ಕನ್ನಡ ಟೀಮ್

ಗುಜರಾತಿನ ಪ್ರಬಲ ಪಟೇಲ್ ಸಮುದಾಯ ಮೀಸಲಾತಿಗಾಗಿ ಸಿಡಿದೆದ್ದು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದು, ಇದರ ನೇತೃತ್ವ ವಹಿಸಿದ್ದ ಹಾರ್ದಿಕ್ ಪಟೇಲ್ ಜೈಲುವಾಸಿಯಾಗಿದ್ದೆಲ್ಲ ಹಳೆ ಸುದ್ದಿ. ಆದರೆ ಇಂಥ ಪ್ರತಿಭಟನೆಗಳು ಮರುಕಳಿಸದಂತೆ ತಡೆಯಬೇಕಾದ ಒತ್ತಡಕ್ಕೆ ಸಿಲುಕಿದಂತಿರುವ ಗುಜರಾತ್ ಸರ್ಕಾರ ಇದೀಗ ಮೀಸಲು ವರ್ಗದಲ್ಲಿಲ್ಲದವರಿಗೂ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. 10 ಮೀಸಲು ಕಲ್ಪಿಸಿದೆ. ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಮೀಸಲು ಆಗ್ರಹಿಸಿದ್ದ ಪಾಟಿದಾರ ಸಮುದಾಯವೇ ಇದರ ಪ್ರಮುಖ ಫಲಾನುಭವಿ ಆಗಲಿದೆ.

ಆರ್ಥಿಕವಾಗಿ ಹಿಂದುಳಿದಿರುವ ಮೀಸಲು ರಹಿತ ಸಾಮಾನ್ಯ ವರ್ಗಕ್ಕೆ ಸರ್ಕಾರಿ ಉದ್ಯೋಗ ಮತ್ತು ರಾಜ್ಯದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ 10 ರಷ್ಟು ಮೀಸಲಾತಿ ಒದಗಿಸಲಾಗಿದೆ. ಇದರ ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಅಸ್ಥಿತ್ವದಲ್ಲಿದ್ದ ಶೇ 49 ರಷ್ಟು ಮೀಸಲು ಪದ್ದತಿ ಮುಂದುವರೆಯಲಿದೆ. ವರ್ಷಕ್ಕೆ 6 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರನ್ನು ಆರ್ಥಿಕವಾಗಿ ಹಿಂದುಳಿದವರೆಂದು ಪರಿಗಣಿಸಿ ನೀಡಲಾಗುವ ಮೀಸಲು ಮೇ 1ರಿಂದ ಜಾರಿಗೆ ಬರಲಿದೆ.

Leave a Reply