ವಾರಾಂತ್ಯ ಹೇಗಿರಬೇಕು? ಯಶಸ್ವಿ ವ್ಯಕ್ತಿಗಳ ಸಲಹೆಗಳು ಇಲ್ಲಿವೆ!

ಡಿಜಿಟಲ್ ಕನ್ನಡ ಟೀಮ್

ಯಶಸ್ಸು ಅನ್ನೋದು ಸುಲಭವಾಗಿ ಯಾರಿಗೂ ಸಿಗುವಂತದಲ್ಲ. ಸಿಕ್ಕರೂ, ಇದರ ಹಿಂದೆ ಸಾಕಷ್ಟು ಏಳುಬೀಳುಗಳ ಅನುಭವಗಳ ಇತಿಹಾಸ ಇದ್ದೇ ಇರುತ್ತದೆ. ಪ್ರತಿ ದಿನ ಇಂತಹ ಯಶಸ್ವಿ ಜನರ ಸಾಕಷ್ಟು ಕಥೆಗಳನ್ನು ಕೂಡ ಓದಿರುತ್ತೇವೆ. ಆದರೆ ಅತ್ಯಂತ ಯಶಸ್ವಿ ಜನರ ವಾರಾಂತ್ಯದ ಅಭ್ಯಾಸಗಳ ಬಗ್ಗೆ ಗೊತ್ತಾ? ಇತರ ದಿನಗಳಿಗಿಂತ ವಾರಾಂತ್ಯದಲ್ಲಿ ಇವರೆಲ್ಲ ಹೇಗೆ ಭಿನ್ನ ಅಭ್ಯಾಸಗಳನ್ನು ಹೊಂದಿರುತ್ತಾರೆ ಎಂಬುದು ನಮ್ಮೆಲ್ಲರ ಕುತೂಹಲ. ಈ ಮಾಹಿತಿಗಳ ಒಂದು ನೋಟ ಇಲ್ಲಿದೆ. ಇದರ ನಡುವೆಯೇ ಅರಿಸ್ಟಾಟಲ್ ಒಂದು ಕಡೆ ಹೇಳಿದ್ದಾರೆ “ವಿ ಆರ್ ವಾಟ್ ವಿ ರಿಪೀಟೇಡ್ಲೀ ಡು. ಎಕ್ಸಲೆನ್ಸ್, ದೆನ್, ಈಸ್ ನಾಟ್ ಆನ್ ಆಕ್ಟ್, ಬಟ್ ಎ ಹ್ಯಾಬಿಟ್” ಎಂದು.

  • ರಾಬರ್ಟ್ ಲೇಗರ್ ಪ್ರಕಾರ ಮುಂಜಾನೆ ಬೇಗ ಏಳಬೇಕು

ಇವರು ಡಿಸ್ನಿ ಸಿಇಓ, ಪ್ರತಿದಿನ ಮುಂಜಾನೆ 4.30ಕ್ಕೆ ಏಳುತ್ತಾರೆ. ಅತ್ಯಂತ ಯಶಸ್ವಿ ವ್ಯಕ್ತಿಗಳಾದವರು ಭಾನುವಾರವೂ ಸೇರಿದಂತೆ ಯಾವತ್ತೂ ಮಧ್ಯಾಹ್ನ 2 ರ ವರೆಗೆ ಹಾಸಿಗೆಯಲ್ಲಿ ಉಳಿಯಲ್ಲ. ಅಷ್ಟೇ ಅಲ್ಲ ಬೆಳಿಗ್ಗೆ 11 ರವರೆಗೂ ಕೂಡ ಮಲಗಿರಲು ಇಷ್ಟ ಪಡುವುದಿಲ್ಲ. ಸಂಶೋಧನೆಯ ಪ್ರಕಾರ ಬೆಳಿಗ್ಗೆ ಬೇಗ ಎದ್ದರೆ 2.5 ತಾಸಿನಿಂದ 4 ತಾಸಿನವರೆಗೂ ಮೆದುಳು ಸಾಕಷ್ಟು ಚುರುಕಾಗಿರುತ್ತದೆ.

  • ಅನ್ನ ವಿನಿಟೂರ್ ಪ್ರಕಾರ ಕ್ರಿಯಶೀಲರಾಗಿರುವುದು…

ಈಕೆ ವೋಗ್ಸ್ ಪತ್ರಿಕೆಯ ಮುಖ್ಯ ಸಂಪಾದಕಿ, ದಿನಕ್ಕೆ ಕನಿಷ್ಠ 1 ತಾಸಾದರು ಟೆನ್ನಿಸ್ ಆಡಬೇಕು. ಜೊತೆಗೆ ಹೆಚ್ಚಿನ ಸಮಯವನ್ನು ವ್ಯಾಯಾಮಕ್ಕಾಗಿ ಮೀಸಲಿಡಬೇಕು ಎನ್ನುತ್ತಾರೆ. ಹಾಗೇ ರಿಚರ್ಡ್ ಬ್ರಾನ್ ಸನ್ ಕೂಡ ಸಮುದ್ರದಲ್ಲಿ ಹಾರಾಟದ (ಕೈಟ್ ಸರ್ಫಿಂಗ್) ಆಟದಲ್ಲಿ ತೊಡಗುತ್ತಾರೆ. ದೇಹವನ್ನು ಕ್ರಿಯಾಶೀಲವಾಗಿಟ್ಟುಕೊಂಡರೆ ಮೆದುಳು ವಾರಾಂತ್ಯದಲ್ಲೂ ಸಹ ಕ್ರಿಯಾಶೀಲವಾಗಿರುತ್ತದೆ.

  • ಸ್ಟೀವ್ ಜಾಬ್ಸ್ ಪ್ರಕಾರ – ಮಹತ್ವದ ಆದ್ಯತೆಗಳೇನು ಎಂಬುದು ತಿಳಿದಿರಬೇಕು.

ಪ್ರಪಂಚದ ಬದಲಾವಣೆಗೆ ಯಾವ ವಿಷಯವೂ ಮುಖ್ಯವೆನಿಸುವುದಿಲ್ಲ. ವಾರದ ಪ್ರಾರಂಭಿಕ ದಿನಗಳಲ್ಲಿ ಮೆರೆತಿರುವ ಸಣ್ಣ ಸಣ್ಣ ವಿಷಯಗಳು ನೆನಪಿಸಿಕೊಳ್ಳಲು ವಾರಾಂತ್ಯದ ದಿನಗಳು ಸಹಕಾರಿಯಾಗಲಿವೆ. ಕೆಲಸ ಮತ್ತು ಜೀವನದ ನಡುವಿನ ಸಾಮರಸ್ಯಕ್ಕೆ ಬೇಕಿರುವ ಅಗತ್ಯಗಳನ್ನು ಮರಳಿ ಪಡೆಯುವುದಕ್ಕೆ ಸಹಕಾರಿಯಾಗಲಿದೆ. ಸ್ನೇಹಿತರೊಂದಿಗೆ ಬೆರೆಯಲೂ ಕೂಡ. ಹಾಗೇ ಪೋಷಕರು ತಮ್ಮ ಮಕ್ಕಳೊಂದಿಗೆ ಕಾಲ ಕಳೆಯಬಹುದು. ಪ್ರಸ್ತುತ ಅಮೆರಿಕ ಅಧ್ಯಕ್ಷರು ಕೂಡ ವಾರಾಂತ್ಯದಲ್ಲಿ ತಮ್ಮ ಕುಂಟುಂಬದೊಂದಿಗೆ ಊಟ ಮಾಡುತ್ತಾರೆ.

  • ವಾರನ್ ಬಫ್ಫೆಟ್ ಪ್ರಕಾರ- ಆಸಕ್ತಿಗಳಿಗಾಗಿ ಸಮಯ ಸೃಷ್ಟಿಸಿಕೊಳ್ಳಬೇಕು

ಇವರು 20 ನೇ ಶತಮಾನದ ಯಶಸ್ವಿ ಹೂಡಿಕೆದಾರರು. ಅತ್ಯಂತ ಯಶಸ್ವಿ ಜನರು ತುಂಬಾ ಆಸಕ್ತಿದಾಯಕರಾಗಿರುತ್ತಾರೆ ಎಂಬುದಕ್ಕೆ ಬಫ್ಫೆಟ್ ಉದಾಹರಣೆ. ಇವರ ವಾರಾಂತ್ಯದ ಬಿಡುವಿನ ಸಮಯದಲ್ಲಿ ಗಿಟಾರ್ ಬಾರಿಸುತ್ತಾರೆ. ಶನಿವಾರಗಳಂದು ಗಾಲ್ಫ್ ಆಟ ಆಡಲಿಕ್ಕೆ ಮೀಸಲು.

  • ಓಪ್ರಾರ ಏಕಾಗ್ರತೆ ಪಾಠ

ಇವರು 2013ರ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದವರು. 20 ನಿಮಿಷಗಳ ಕಾಲ ಧ್ಯಾನಸ್ಥರಾಗಿ ಕುಳಿತಿರುವ ಅಭ್ಯಾಸ ಮಾಡುತ್ತಾರೆ. ಕಾರ್ಪೋರೆಟ್ ಜಗತ್ತಿನಲ್ಲಿನವವರು ಧ್ಯಾನ ಮತ್ತು ಸಾವಧಾನದ ಅಭ್ಯಾಸ ಬೆಳಸಿಕೊಂಡರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಉತ್ಪಾದಕ ಶಕ್ತಿಯನ್ನು ವೃದ್ಧಿಸುತ್ತದೆ. ಸೃಜನಶೀಲತೆ, ಯೋಗಕ್ಷೇಮದ ನಿರ್ವಹಣೆ ಸಾಧ್ಯವಾಗಲಿದೆ. ವಾರಾಂತ್ಯದಲ್ಲಿ ಧ್ಯಾನ ಮತ್ತು ಸಾವಧಾನ ಅಭ್ಯಸಿಸಿದರೆ ವಾರದ ಇತರ ದಿನಗಳು ಉತ್ಸಾಹದಾಯಕವಾಗಿರಲಿದೆ. ಅತ್ಯಂತ ಯಶಸ್ವಿ ಜನರು ಧ್ಯಾನಕ್ಕೆ ವಾರಾಂತ್ಯವೂ ಸೇರಿದಂತೆ ಪ್ರತಿದಿನ ಸಮಯ ಮೀಸಲಿಡುತ್ತಾರೆ.

  • ರಾಂಡಿ ಜಕರ್ ಬರ್ಗ್, ಪೋಮೋ (FOMO) ವನ್ನು ಮರೆಯಿರಿ, ಜೋಮೋ(JOMO) ವನ್ನು ಅಪ್ಪಿಕೊಳ್ಳಿ ಎಂಬ ವಿಭಿನ್ನ ವ್ಯಾಖ್ಯಾನವನ್ನೇ ಪರಿಚಯಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸ್ನೇಹಿತರು ಮತ್ತು ಹಿಂಬಾಲಕರು ಹಾಕಿರುವ ಆಯ್ದ ಆಸಕ್ತಿದಾಯಕ ಪೋಟೋಗಳಿಗೆ ವಾರಾಂತ್ಯದಲ್ಲಿ ಲೈಕ್ ಒತ್ತುವುದು ಅಥವಾ ಆಸೂಯೆ ಪಟ್ಟುಕೊಳ್ಳುವುದು ಸಾಮಾನ್ಯ. ಆದರೆ ಈ ಹೊಸ ಯುಗದಲ್ಲಿ FOMO (fear of missing out) ವಾರಾಂತ್ಯದಲ್ಲಿ ಮಾನಸಿಕವಾಗಿ ಪೀಡಿತನಾಗುವುದು ಮತ್ತು JOMO (the joy of missing out) ಇಲ್ಲದ ಪ್ರಪಂಚವನ್ನು ಸೃಷ್ಟಿಸುವುದು. ಅತ್ಯಂತ ಯಶಸ್ವಿ ಜನರು ಅನೇಕ ವೇಳೆ ಸ್ಪರ್ಧಾತ್ಮಕವಾಗಿ ಬೆಳೆಯಲು ಬೇಕಿರುವ ವಿಚಾರಗಳ ಬಗ್ಗೆ ವಾರಾಂತ್ಯಗಳಲ್ಲಿ ಹುಡುಕುತ್ತಿರುತ್ತಾರೆ. ಹೆಚ್ಚುವರಿ ಸಾಧಕರಿಗೆ ಈ ಕಲೆ ಪ್ರಕೃತಿದತ್ತವಾಗಿ ಬಂದದ್ದಾಗಿರುತ್ತದೆ.

  • ಬಿಲ್ ಗೇಟ್ಸ್ ಹೇಳುವ ಅವಲೋಕನ-ಪ್ರತಿಫಲನ

ಇವರು ಮೈಕ್ರೋಸಾಫ್ಟ್ ನ ಸಂಸ್ಥಾಪಕರು. ಗೆಲುವನ್ನು ಸಂಭ್ರಮಿಸಿ, ಆದರೆ ಸೋಲಿನ ಅಧ್ಯಯನದ ಬಗ್ಗೆ ನಿರ್ಲಕ್ಷ್ಯ ತೋರಬಾರದು. ವಾರವೀಡೀ ಮಾಡಿದ ಕೆಲಸಗಳ ಸರಿ- ತಪ್ಪುಗಳನ್ನು ವಿಶ್ಲೇಷಿಸುವ ಸಮಯ ಸಿಗುವುದು ವಾರಾಂತ್ಯದಲ್ಲಿ. ಇದು ಮುಂದಿನ ಬೆಳವಣಿಗೆಗೆ ಸಹಕಾರಿ ಕೂಡ ಎನ್ನುತ್ತಾರೆ.

Leave a Reply