ಸುದ್ದಿ ಸಂತೆ: ಕಾಡ್ಗಿಚ್ಚಿಗೆ ತತ್ತರಿಸಿದ ಉತ್ತರಾಖಂಡ, ಮೋದಿ ಫಸ್ಟ್ ಕ್ಲಾಸ್ ಪಾಸ್, ವಾರಾಂತ್ಯದ ಎಲ್ಲ ವಿದ್ಯಮಾನ

ಡಿಜಿಟಲ್ ಕನ್ನಡ ಟೀಮ್

ಮುಂದುವರಿದ ಕಾಡ್ಗಿಚ್ಚು, ಪರಿಸ್ಥಿತಿ ನಿಯಂತ್ರಿಸಲು ವಾಯು ಸೇನೆ ಮತ್ತು ಎನ್ ಡಿ ರ್ ಫ್ ಹರಸಾಹಸ

ಉತ್ತರಾಖಂಡದಲ್ಲಿ ಕಳೆದ ಕೆಲವು ದಿನಗಳಿಂದ ಕಾಡುತ್ತಿರುವ ಕಾಡ್ಗಿಚ್ಚಿನ ಅಟ್ಟಹಾಸ ಇನ್ನು ಮುಂದುವರಿದಿದೆ. 6 ಜನರ ಬಲಿ ಬಡೆದಿರುವ ಈ ಕಾಡ್ಗಿಚ್ಚು ಡೆಹ್ರಾಡೂನ್, ನೈನಿತಾಲ್, ಚಮೋಲಿ ಮತ್ತು ಪೌಲಿ ಗರ್ಹವಾಲ್ ಜಿಲ್ಲೆಯ ಹಲವು ಹಳ್ಳಿಗಳನ್ನು ನಾಶ ಮಾಡಿದೆ. ಭಾರತೀಯ ವಾಯು ಸೇನೆ ಹಾಗೂ ಎನ್ ಡಿ ಆರ್ ಎಫ್ ಈ ಕಾಡ್ಗಿಚ್ಚು ನಿಯಂತ್ರಿಸಲು ಹರ ಸಾಹಸ ಮುಂದುವರಿಸಿದೆ. ಜತೆಗೆ ಸೇನಾ ಪಡೆಯ ನೆರವನ್ನು ಸಹ ಕೋರಿದ್ದು, ಸ್ಯಾಟಲೈಟ್ ಡಾಟಾ ನೀಡುವಂತೆ ಹೈದರಾಬಾದ್ ನ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಗೆ ಮನವಿ ಮಾಡಲಾಗಿದೆ.

ಖಿರ್ಸು, ಹುಲಾಕಿ, ಮಂಡರ್ಖೆಟ್ ಪ್ರದೇಶಗಳಲ್ಲಿ ಅಗ್ನಿ ನಿಯಂತ್ರಿಸಲು ಎನ್ ಡಿ ಆರ್ ಎಫ್ ಯಶಸ್ವಿಯಾಗಿದೆ. ಈ ಕಾಡ್ಗಿಚ್ಚಿಗೆ ಮೂಲ ಕಾರಣ ಮರದ ಮಾಫಿಯಾ ಎಂದು ಹೇಳಲಾಗುತ್ತಿದೆ. ಉತ್ತರಾಖಂಡದಲ್ಲಿ ಪ್ರತಿ ವರ್ಷ ಕಾಡ್ಗಿಚ್ಚು ಫೆಬ್ರವರಿಯಿಂದ ಜೂನ್ ವರೆಗೂ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ಆದರೆ, ಹಿಂದೆಂದೂ ಈ ರೀತಿಯಾದ ದೊಡ್ಡ ಪ್ರಮಾಣಕ್ಕೆ ವಿಸ್ತರಿಸಿರಲಿಲ್ಲ. ಈ ಬಾರಿ ಕಡಿಮೆ ಮಳೆಯಾಗಿರುವ ಪ್ರಮಾಣ ಕಾಡ್ಗಿಚ್ಚು ತೀವ್ರತೆ ಹೆಚ್ಚಾಗಿದೆ. ಈ ವರ್ಷ 991 ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಇದರಿಂದ 2111 ಹೆಕ್ಟೇರ್ ಪ್ರದೇಶ ಹಾನಿಗೊಳಗಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.  ಈ ರಾಜ್ಯದಲ್ಲಿ ಬಹು ಭಾಗ ಗುಡ್ಡಗಾಡು ಪ್ರದೇಶವಾಗಿದ್ದು, ಕಾಡ್ಗಿಚ್ಚಿನಿಂದ ಅಪಾರ ಪ್ರಮಾಣದಲ್ಲಿ ಹೊಗೆ ಎದ್ದಿದ್ದು, ಇತರೆ ಪ್ರದೇಶಗಳ ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇಲ್ಲಿನ ಜನರು ಕಣ್ಣಿಮ ಉರಿ ಮತ್ತು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳಿಗೆ ದೂರು ಬಂದಿವೆ.

ಮೋದಿ ಸ್ನಾತಕೋತ್ತರ ಪದವಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ

ಮೋದಿ ವಿದ್ಯಾಭ್ಯಾಸದ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಹಿತಿ ಆಯುಕ್ತರಿಗೆ ಮನವಿ ಮಾಡಿದ್ದರು. ನಂತರ ಕೇಂದ್ರ ಮಾಹಿತಿ ಆಯೋಗ ದೆಹಲಿ ಮತ್ತು ಗುಜರಾತ್ ವಿಶ್ವವಿದ್ಯಾಲಯದಳು ನರೇಂದ್ರ ಮೋದಿ ಅವರ ಶಿಕ್ಷಣದ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿತ್ತು. ಈ ಬೆಳವಣಿಗೆ ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಗುಜರಾತ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಮೋದಿ ಸ್ನಾತಕೋತ್ತರ ಪದವಿ ಪಡೆದಿದ್ದು, ಶೇ.70ರಷ್ಟು ಅಂಕಗಳನ್ನು ಗಳಿಸಿದ್ದಾಗಿ ಅಹ್ಮದಾಬಾದ್ ಮಿರರ್ ಪತ್ರಿಕೆ ವರದಿ ಮಾಡಿದೆ. ಆದರೆ ಈ ಬಗ್ಗೆ ಕೇಂದ್ರ ಮಾಹಿತಿ ಆಯೋಗ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಇನ್ನುಳಿದಂತೆ ನೀವು ತಿಳಿಯಬೇಕಿರುವ ಸುದ್ದಿ ಸಾಲುಗಳು..

  • ಭಾರತದ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ತಮ್ಮ ಗೆಲುವಿನ ನಾಗಾಲೋಟದಲ್ಲಿ ಮುಂದುವರಿದಿದ್ದಾರೆ. ಶನಿವಾರ ರಾತ್ರಿ ಲಂಡನ್ ನಲ್ಲಿ ನಡೆದ ತಮ್ಮ 5ನೇ ವೃತ್ತಿಪರ ಬಾಕ್ಸಿಂಗ್ ಪಂದ್ಯದಲ್ಲಿ ವಿಜೇಂದರ್ ಫ್ರಾನ್ಸ್ ನ ಮಾಟಿಯೋಜ್ ರೊಯರ್ ವಿರುದ್ಧ ಜಯ ಸಾಧಿಸಿದರು. ಆ ಮೂಲಕ ಆಡಿರುವ ಐದೂ ಪಂದ್ಯಗಳನ್ನು ಗೆದ್ದು ಅಜೇಯರಾಗಿ ಮುಂದುವರಿದಿದ್ದಾರೆ.
  • ಶನಿವಾರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿದ್ದ ಜನಸಾಮಾನ್ಯನಿಗೆ ಭಾನುವಾರ ಮತೊಂದು ಬರೆ ಬಿದ್ದಿದೆ. ಕಾರಣ, ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಗಳ ಬೆಲೆ ₹ 18ರಷ್ಟು ಹೆಚ್ಚಾಗಿದೆ.
  • ದೆಹಲಿಯ ನ್ಯಾಷನಲ್ ಕ್ಯಾಪಿಟಲ್ ರೀಜನ್ ನಲ್ಲಿ ಮೇ 1ರಿಂದ ಡೀಸೆಲ್ ಕ್ಯಾಬ್ ಗಳಿಗೆ ನಿಷೇಧ ಹೇರಲಾಗಿದೆ. ಡೀಸೆಲ್ ನಿಂದ ಹಸಿರು ಇಂಧನ ಸಿಎನ್ ಜಿಗೆ ಬದಲಾಗದ ಕ್ಯಾಬ್ ಗಳಿಗೆ ನಿಷೇಧಿಸುವಂತೆ ಶನಿವಾರ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸುಮಾರು 50 ಸಾವಿರ ಕ್ಯಾಬ್ ಗಳು ರಸ್ತೆಗಿಳಿಯುವಂತಿಲ್ಲ.
  • ಬಡವರಿಗೆ ಎಲ್ ಪಿ ಜಿ ಒದಗಿಸುವ ಪ್ರಧಾನಿ ಯೋಜನೆ ಇಂದು ಉತ್ತರ ಪ್ರದೇಶದಲ್ಲಿಶುಭಾರಂಭವಾಯಿತು.

ಮುಂದುವರಿದು…

ಕನ್ಹಯ್ಯ ಕುಮಾರ್ ಭಾಷಣದ ವೇಳೆ ಕಪ್ಪುಬಾವುಟ ತೋರಿ ಪ್ರತಿಭಟನೆ ಮಾಡಿದಾತಗೆ ಕನ್ಹಯ್ಯ ಬೆಂಬಲಿಗರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಾಗಾದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಅನ್ನೋದು ಕನ್ಹಯ್ಯ ಗ್ಯಾಂಗಿನ ಸ್ವತ್ತೇ?

ತನ್ನ ದಂತ ಸಂಗ್ರಹವನ್ನೆಲ್ಲ ಕೀನ್ಯಾ ಬೆಂಕಿಯಿಟ್ಟು ಭಸ್ಮ ಮಾಡ್ತಿದೆ. ಏಕೆ ಅಂದಿರಾ? ಈ ಪೋಸ್ಟ್ ಓದಿ.

ಆತ್ಮಹತ್ಯೆ ಯಾರ ಆಯ್ಕೆಯೂ ಆಗಬಾರದು ಅಂತ ವಾದಿಸಿದ್ದಾರೆ ಜಯಶ್ರೀ ದೇಶಪಾಂಡೆ.

ಆಟೋಚಾಲಕನಾಗಿದ್ದು ಆಗಸದೆತ್ತರ ಸಾಧನೆಗೆ ನೆಗೆದ ಈತನ ಯಶೋಗಾಥೆ ಓದಲೇಬೇಕು.

Leave a Reply