
ಡಿಜಿಟಲ್ ಕನ್ನಡ ಟೀಮ್
ಇಷ್ಟು ದಿನ ಚುನಾವಣೆಯಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮನ ಓಲೈಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದ ಕಾಂಗ್ರೆಸ್ ಈಗ ಉತ್ತರಪ್ರದೇಶದಲ್ಲಿ ಕಾರ್ಯತಂತ್ರ ಬದಲಿಸಿದೆ. ಇಲ್ಲಿ ಶೇ. 13 ರಷ್ಟಿರುವ ಬ್ರಾಹ್ಮಣರ ಮತಗಳಿಕೆಗೆ ಆದ್ಯತೆ ನೀಡಿದೆ.ಕಾಂಗ್ರೆಸ್ ನ ಚುನಾವಣೆ ಕಾರ್ಯತಂತ್ರದ ಉಸ್ತವಾರಿ ವಹಿಸಿರುವ ಪ್ರಶಾಂತ್ ಕಿಶೋರ್ ನೀಡುತ್ತಿರುವ ಸೂಚನೆಗಳೇ ಇದಕ್ಕೆ ಸಾಕ್ಷಿ.
ಕಾಂಗ್ರೆಸ್ ಬ್ರಾಹ್ಮಣರ ಮತ ಗಳಿಸಬೇಕಾದರೆ, ಮೇಲ್ವರ್ಗದ ಮುಖಗಳಾದ ರಾಹುಲ್ ಗಾಂಧಿ ಅಥವಾ ಪ್ರಿಯಾಂಕ ಗಾಂಧಿ ಮುಖ್ಯಮಂತ್ರಿ ಅಭ್ಯರ್ಥಿಗಳಾಗಬೇಕು ಎಂದು ಸಲಹೆ ಮಾಡಿರುವ ಪ್ರಶಾಂತ್ ಕಿಶೋರ್, ಅವರು ಒಪ್ಪದಿದ್ದರೆ ಇರಲಿ ಎಂದು ಬೇರೆ ಮೂವರ ಹೆಸರು ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಕಾಂಗ್ರೆಸ್ ನ ಈ ನಿರ್ಧಾರ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ಕ್ರಮಿಸಿದ ಹಾದಿಯನ್ನು ನೆನಪಿಸುತ್ತಿದೆ. ಬಿಎಸ್ಪಿ ಕೂಡ ಆರಂಭದಲ್ಲಿ ಬ್ರಾಹ್ಮಣ ವಿರೋಧಿ ನಿಲುವು ತಾಳಿತ್ತು. ನಂತರ ಅದನ್ನು ಬದಲಿಸಿಕೊಂಡಿತು. ಅದಕ್ಕೆ 1984 ರಿಂದ ಈಚೆಗೆ ಚುನಾವಣೆ ವೇಳೆ ಬಳಸಿದ ರಣತಂತ್ರ ನೋಡುವುದು ಸೂಕ್ತ.
1984 ರಲ್ಲಿ ಆನೆಯನ್ನು ಅಲ್ಪಸಂಖ್ಯಾತರ ಸಂಕೇತವಾಗಿಸಿ ನೀಲಿ ಬಣ್ಣವನ್ನು ಆಕಾಶಕ್ಕೆ ಹೋಲಿಸಲಾಗಿತ್ತು. ಅಂದರೆ ಅಲ್ಪಸಂಖ್ಯಾತರೂ ಕೂಡ ಬಹುಸಂಖ್ಯಾತರಷ್ಟೇ ಸಮಾನರು ಎಂಬ ಸಂದೇಶ ಅದರಲ್ಲಿತ್ತು. ಅದೇ ಕಾಲಕ್ಕೆ ‘ತಿಲಕ್, ತರಾಜು ಔರ್ ತಲ್ವಾರ್, ಇನ್ಕೊ ಮಾರೊ ಜೂತೆ ಚರ್’ (ತಿಲಕ, ತಕ್ಕಡಿ ಮತ್ತು ಖಡ್ಗದವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ) ಎಂಬ ಘೋಷವಾಕ್ಯದಿಂದ ಬ್ರಾಹ್ಮಣರು, ವೈಶ್ಯರು ಹಾಗೂ ಕ್ಷತ್ರಿಯರ ವಿರೋಧಿ ನಿಲುವು ಪ್ರದರ್ಶಿಸಿತ್ತು.
ಆರಂಭದಲ್ಲಿ ಇಷ್ಟು ಕಟುವಾಗಿ ಮೇಲ್ವರ್ಗದವರನ್ನು ವಿರೋಧಿಸಿದ್ದ ಮಾಯಾವತಿ ಕಾಲಕ್ರಮೇಣ ತಮ್ಮ ನಿಲುವು ಸಡಿಲ ಮಾಡಿಕೊಂಡದ್ದು ಆಸಕ್ತಿದಾಯಕ. 1993 ರ ಚುನಾವಣೆ ವೇಳೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಹೆಚ್ಚು ಚರ್ಚೆಯಲ್ಲಿತ್ತು, ಪ್ರಭಾವ ಬೀರಿತ್ತು. ಆಗ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷದ (ಎಸ್ಪಿ) ಜತೆ ಕೈಜೋಡಿಸಿದ ಬಿಎಸ್ಪಿ ಹೇಳಿದ್ದು, ‘ಮಿಲೆ ಮುಲಾಯಂ ಕನ್ಶಿರಾಮ್, ಹವಾ ಮೆ ಉಡ್ ಗಯೇ ಜೈಶ್ರೀರಾಮ್’ (ಎಸ್ಪಿ ಮತ್ತು ಬಿಎಸ್ಪಿ ಮುಂದೆ ಶ್ರೀರಾಮ ಲೆಕ್ಕಕ್ಕಿಲ್ಲ) ಅಂತಾ. ಆದರೆ ಮೇಲ್ವರ್ಗದವರನ್ನು ವಿರೋಧಿಸಿ ಅಧಿಕಾರ ಹಿಡಿಯುವುದು ಕಷ್ಟ ಎಂಬುದರ ಅರಿವಾಗಲು ಬಿಎಸ್ಪಿಗೆ ಹೆಚ್ಚು ದಿನ ಬೇಕಾಗಲಿಲ್ಲ. ಹೀಗಾಗಿ 2002 ರ ಚುನಾವಣೆ ವೇಳೆಗೆ ತನ್ನ ಮೇಲ್ವರ್ಗ ವಿರೋಧಿ ನಿಲುವನ್ನು ಸಡಿಲ ಮಾಡಿತು. ‘ಬ್ರಾಹ್ಮಿಣ್ ಸಾಫ್, ಠಾಕೂರ್ ಹಾಫ್, ಬನಿಯಾ ಮಾಫ್’ (ಬ್ರಾಹ್ಮಣರನ್ನು ಪೂರ್ತಿ ತೆಗೆಯಿರಿ, ಠಾಕೂರ್ ಸಮುದಾಯವನ್ನು ಅರ್ಧ ಹಾಗೂ ಬನಿಯ ಸಮುದಾಯವನ್ನು ಪೂರ್ತಿ ಮನ್ನಿಸಿ) ಎಂಬುದು ಬಿಎಸ್ಪಿ ಚುನಾವಣಾ ಘೋಷಣೆಯಾಯಿತು. ಆಗ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದ ಎರಡು ಮೇಲ್ವರ್ಗದವರಿಗೆ ಚುನಾವಣೆ ಟಿಕೆಟ್ ನೀಡಲಾಗಿತ್ತು.
2003 ರಲ್ಲಿ ಮೇಲ್ವರ್ಗದ ಶಾಸಕರು ಸಮಾಜವಾದಿ ಪಕ್ಷದತ್ತ ಮುಖ ಮಾಡಿದರು. ಆಗ ಸೋಷಿಯಲ್ ಎಂಜಿನಿಯರಿಂಗ್ ಸೂತ್ರದತ್ತ ಮುಖಮಾಡಿದ ಬಿಎಸ್ಪಿ, ಎಸ್. ಸಿ ಮಿಶ್ರಾ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿ ಹೇಳಿದ್ದು, ‘ಹಾತಿ ನಹೀ, ಗಣೇಶ್ ಹೇ, ಬ್ರಹ್ಮ, ವಿಷ್ಣು, ಮಹೇಶ್ ಹೈ’ (ಇದು ಆನೆಯಲ್ಲ (ಪಕ್ಷದ ಗುರುತು) ಗಣೇಶ. ಬ್ರಹ್ಮ, ವಿಷ್ಣು, ಮಹೇಶ ಕೂಡ ಜತೆಗಿದ್ದಾರೆ) ಎಂದು ತನ್ನ ನಿಲುವು ಬದಲಿಸಿತು.
ಇನ್ನು 2007ರ ಚುನಾವಣೆಯಲ್ಲಿ ಬಿಎಸ್ಪಿಯಲ್ಲಿ ಬ್ರಾಹ್ಮಣ ವಿರೋಧಿ ನಿಲುವು ಸಂಪೂರ್ಣ ಮೆತ್ತಗಾಗಿತ್ತು. ‘ಜಿಸ್ಕಿ ಜಿತ್ನಿ ಸಂಖ್ಯಾ ಭಾರಿ, ಉಸ್ಕಿ ಇತ್ನಿ ಭಾಗಿದಾರಿ’, ‘ಜಿಸ್ಕಿ ಜೀತ್ನಿ ಹೈ ತಯಾರಿ, ಉಸ್ಕಿ ಉತ್ನಿ ಹಿಸ್ಸೆದಾರಿ’ (ತಾಕತ್ತು ಮತ್ತು ಮತಬಲ ಇದ್ದವರಿಗೆ ಟಿಕೆಟ್ ) ಎಂಬುದು ಬಿಎಸ್ಪಿ ನಿರ್ಧಾರವಾಯಿತು. ಆ ಮೂಲಕ ಚುನಾವಣೆಯಲ್ಲಿ ಬ್ರಾಹ್ಮಣರು ಮತ್ತು ಮುಸಲ್ಮಾನರಿಗೆ ಹೆಚ್ಚು ಪ್ರಮಾಣದ ಟಿಕೆಟ್ ನೀಡಲಾಯಿತು. 2009 ರ ಚುನಾವಣೆಯಲ್ಲಿ ಬಿಎಸ್ಪಿ ಬ್ರಾಹ್ಮಣ ಸಮುದಾಯಕ್ಕೆ ಸಂಪೂರ್ಣ ಆದ್ಯತೆ ನೀಡಿತು. ‘ಬ್ರಾಹ್ಮಣ್ ಶಂಖಾ ಬಜಾಯೆಗಾ, ಹಾತಿ ದಿಲ್ಲಿ ಜಾಯೇಗ’ (ಬ್ರಾಹ್ಮಣರು ಶಂಖಾ ಊದುತ್ತಾರೆ, ಆನೆ ದಿಲ್ಲಿಯತ್ತ ಸಾಗುತ್ತದೆ) ಎಂಬುದು ಆಗಿನ ಘೋಷಣೆ ಆಗಿತ್ತು.
ಆರಂಭದಲ್ಲಿ ಬ್ರಾಹ್ಮಣರ ನಾಶ ಮಾಡಬೇಕು ಎಂದು ಹೊರಟಿದ್ದ ಬಿಎಸ್ ಪಿ ಈಗ ಬ್ರಾಹ್ಮಣರನ್ನು ಎದುರು ಹಾಕಿಕೊಳ್ಳಲು ಸಿದ್ಧವಿಲ್ಲ. ಏಕಾಏಕಿ ಅಲ್ಲದಿದ್ದರೂ ಕ್ರಮೇಣವಾಗಿ ತನ್ನ ನಿಲುವು ಬದಲಿಸುತ್ತಾ ಬ್ರಾಹ್ಮಣ ಸಮುದಾಯದವರ ಪುಸಲಾಯಿಸಲು ಮುಂದಾಯಿತು. ಒಟ್ಟಿನಲ್ಲಿ ಅಲ್ಪಸಂಖ್ಯಾತರ ನಾಯಕಿ ಎಂದೇ ಬಿಂಬತವಾದ ಘಟಾನುಘಟಿ ಮಾಯಾವತಿಯೇ ತಮ್ಮ ನಿಲುವು ಬದಲಿಸಿಕೊಂಡರು. ಈಗ ಬಿಎಸ್ಪಿ ಹಾದಿಯಲ್ಲಿ ಕಾಂಗ್ರೆಸ್ ಹೊರಟಿದೆ. ಬ್ರಾಹ್ಮಣರ ವಿಶ್ವಾಸ ಗಳಿಸಿಕೊಳ್ಳಲು…