ಲಾಲು ಥರದ ಒಬ್ಬ ಅಪರಾಧಿಗೆ ಇಂಥ ಮನ್ನಣೆಯ ಭಾಗ್ಯ ಎಂಥ ದುರಂತವಲ್ಲವೇ?

 

ಡಿಜಿಟಲ್ ಕನ್ನಡ ಟೀಮ್

ತನ್ನದು ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದಿದ್ದ ಅರವಿಂದ ಕೇಜ್ರಿವಾಲ್, ಸಾರ್ವಜನಿಕ ಸಭೆಯಲ್ಲಿ ಲಾಲು ಪ್ರಸಾದ್ ಯಾದವ್ ಎಂಬ ಹಗರಣ ಸಾಬೀತಾಗಿ ಜೈಲಿಗೆ ಹೋಗಿಬಂದ ವ್ಯಕ್ತಿಯನ್ನು ಅಪ್ಪಿಕೊಂಡಾಗಲೇ ವ್ಯಂಗ್ಯವೆಂಬುದು ಸಾವಿರ ಬಾರಿ ಸತ್ತಿತ್ತು!

Lalu-Arvind

ನಂತರ ಪೊಳ್ಳು ಕ್ರಾಂತಿಕಾರಿ ಕನ್ಹಯ್ಯ, ಲಾಲು ಕಾಲಿಗೆರಗಿ ಪಾವನವಾಗಿದ್ದಾಯ್ತು….

lalu-1

ಇವರೆಲ್ಲ ಸಾಕಾಗಲಿಲ್ಲ ಅಂತ ಈಗ ಲಾಲು ಪ್ರಸಾದ್ ಯಾದವರಿಗೆ ಪೂಸಿ ಹೊಡೆಯುವ ಸರದಿ ಬಾಬಾ ರಾಮದೇವರದ್ದು. ಬಾಬಾ ರಾಮದೇವ್ ತಮ್ಮ ಸ್ವದೇಶಿ ಛಾಪಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳನ್ನು ಬೆಚ್ಚಿಬೀಳಿಸುವ ರೀತಿ ಬೆಳೆಯುತ್ತಿರೋದು ಹಲ ಬಗೆಯಲ್ಲಿ ಸ್ವಾಗತಾರ್ಹ ವಿದ್ಯಮಾನವೇ. ಆದರೆ ಅಂಥ ವ್ಯಾಪಾರಕ್ಕೆ ಎಲ್ಲರಂತೆ ಯಾವ ಅನುಕೂಲ ಸಿಂಧುವಿಗಾದರೂ ಎಳೆಸಲು ಸಿದ್ಧ ಅಂತ ರಾಮದೇವರು ಬುಧವಾರದ ಲಾಲು ಭೇಟಿ ಮೂಲಕ ನಿರೂಪಿಸಿದಂತಿದೆ.

ಲಾಲು ಪ್ರಸಾದರ ಎದುರು ತಮ್ಮ ಉತ್ಪನ್ನಗಳನ್ನೆಲ್ಲ ಹರವಿಟ್ಟು ರಾಮದೇವ್ ವಿವರಿಸುತ್ತಾ ಹೋದರು. ಇದು ವೃದ್ಧಾಪ್ಯದ ನೆರಿಗೆ ಇಲ್ಲವಾಗಿಸುತ್ತೆ ನೋಡಿ ಅಂತ ತಮ್ಮ ಕಂಪನಿಯ ಕ್ರೀಮನ್ನೂ ಲಾಲು ಹಣೆಗೆ ಹಚ್ಚಿದರು. ‘ರಾಮದೇವರು ಗ್ರಾಮೀಣ ಮದ್ದುಗಳನ್ನು ಅಳವಡಿಸಿಕೊಂಡ ಉತ್ಪನ್ನ ತರುತ್ತಿರೋದು ಒಳ್ಳೇಯದೇ ಅಲ್ವೇ? ಇದರಿಂದ ಎಷ್ಟೊಂದು ಮಂದಿಗೆ ಉದ್ಯೋಗವೂ ಸಿಗುತ್ತೆ’ ಅಂದ್ರು ಲಾಲು ಪ್ರಸಾದ್.

ಇದೇ ಲಾಲು ಪ್ರಸಾದರು, ‘ರಾಮಲೀಲಾ ಮೈದಾನದಲ್ಲಿ ಯೋಗಾಸನ ಮಾಡ್ತೀನಿ ಅಂತ ಹೋದ ರಾಮದೇವರು ಪೋಲೀಸರು ಬರುತ್ತಲೇ ಲಾಗಾ ಹಾಕಿದರು’ ಅಂತ ಈ ಹಿಂದೆ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಬಾಬಾ ನಡೆಯನ್ನು ಟೀಕಿಸಿದ್ದರು. ಇನ್ನು ಬಿಜೆಪಿ ಜತೆಗಿನ ರಾಮದೇವ್ ಸಖ್ಯವಂತೂ ಲಾಲುಗೆ ಆಗಿಬರದ ವಿಚಾರ.

ಇಕನಾಮಿಕ್ಸ್ ಎಲ್ಲವನ್ನೂ ಒಟ್ಟುಗೂಡಿಸುತ್ತೆ ನೋಡಿ. ಬಿಹಾರದಲ್ಲಿ ನೇಪಥ್ಯದಲ್ಲಿ ನಿಂತು ಅಧಿಕಾರ ಚಲಾಯಿಸುತ್ತಿರುವವರು ಲಾಲು ಅನ್ನೋದು ತೆರೆದಿಟ್ಟ ರಹಸ್ಯ. ಅವರೊಂದಿಗೆ ರಾಯಭಾರಕ್ಕಿಳಿದ ಬಾಬಾ ರಾಮದೇವ್ ನಡೆ, ಬಿಹಾರದಲ್ಲಿ ಅವರ ಕಂಪನಿಗೊಂದಿಷ್ಟು ಒಳ್ಳೇದು ಮಾಡೀತು. ಆದರೆ ವ್ಯಾಪಾರ ಬೇರೆ, ಪ್ರಾಮಾಣಿಕತೆ ಭಾಷಣಗಳು ಬೇರೆ ಅಂತ ಅಫಡವಿಟ್ ಇಟ್ಟೇ ಬಾಬಾ ಮಾತಾಡಬೇಕಾಗುತ್ತದೆ.

Leave a Reply