ಈ ಶುಕ್ರವಾರ ಕಣ್ತುಂಬಬಹುದಾದ ಸಿನಿ ಜಗತ್ತಿನ ನೋಟಗಳು

ಅಕಿರ

ಎಸ್ 2 ಎಂಟರ್ ಟೈನ್‍ಮೆಂಟ್ ಲಾಂಛನದಲ್ಲಿ ಎಸ್.ಎಸ್.ರೆಡ್ಡಿ, ಚೇತನ್ ಹಾಗೂ ಶ್ರೀಕಾಂತ್ ಅವರು ನಿರ್ಮಿಸಿರುವ `ಅಕಿರ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನವೀನ್ ರೆಡ್ಡಿ ನಿರ್ದೇಶನದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಯೋಗಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿಕ್ರಂ ಸಾಹಸ ನಿರ್ದೇಶನ ಹಾಗೂ ಜಾನಿ, ಗಣೇಶ್ ಸ್ವಾಮಿ, ಪ್ರಭು ಶ್ರೀನಿವಾಸ್, ವಿದ್ಯಾಸಾಗರ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅನೀಶ್, ಅದಿತಿ ರಾವ್, ಕೃಷಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

krishi.

ತಿಥಿ

ಅದಾಗಲೇ ಹಲವು ಚಿತ್ರೋತ್ಸವಗಳಲ್ಲಿ ಭಾಗಿಯಾಗಿ ಪ್ರಶಸ್ತಿಗೂ ಪಾತ್ರವಾಗಿರುವ ತಿಥಿ ಚಿತ್ರ ಈ ವಾರ ಬಿಡುಗಡೆ. ಪಿಆರ್‍ಎಸ್‍ಪಿಸಿಟಿವಿಎಸ್ ಲಾಂಛನದಲ್ಲಿ ಪ್ರತಾಪ್ ರೆಡ್ಡಿ ಅವರು ನಿರ್ಮಿಸಿದ್ದಾರೆ. ರಾಮ್ ರೆಡ್ಡಿ ನಿರ್ದೇಶನದ ಈ ಚಿತ್ರಕ್ಕೆ ಈರೇಗೌಡ ಕಥೆ ಬರೆದಿದ್ದಾರೆ. ಡೊರಾನ್ ಟೆಂಪರ್ಟ್ ಛಾಯಾಗ್ರಹಣ, ಜಾನ್ ಜೆ ಮೊಮೆನ್, ರಾಮ್ ರೆಡ್ಡಿ ಸಂಕಲನ, ನಿತಿನ್ ಲೂಕೂಸ್ ಧ್ವನಿ ವಿನ್ಯಾಸ ಹಾಗೂ ಈರೇಗೌಡ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಚನ್ನೇಗೌಡ, ತಮ್ಮೇಗೌಡ, ಅಭಿಷೇಕ್, ಪೂಜಾ, ಸಿಂಗ್ರಿ ಗೌಡ, ಸೋಮಶೇಖರ್, ಶ್ರೀನಿವಾಸ್, ಚನ್ನವೀರೇಗೌಡ, ಮಹದೇವ, ಗೌರಮ್ಮ, ಶಂಕರೇಗೌಡ ಇದ್ದಾರೆ.

abhishek - pooja

channegowda

Leave a Reply