ಇಂದು ನೀವು ತಿಳಿಯಬೇಕಿರುವ ಎಲ್ಲ ಸುದ್ದಿಗಳು

ಚಿತ್ರಕಲಾ ಪರಿಷತ್ತಿಗೆ 50 ವರ್ಷ. ಹಾಗೆಯೇ ಇದು ದೇವರಾಜು ಅರಸು ಜನ್ಮಶತಮಾನೋತ್ಸವ ವರ್ಷ. ಇವೆರಡನ್ನೂ ಸಮೀಕರಿಸಿ ಗುರುವಾರ ಪರಿಷತ್ ಹಮ್ಮಿಕೊಂಡಿದ್ದ ಚಿತ್ರಪಟಗಳ ಪ್ರದರ್ಶನ.

ಡಿಜಿಟಲ್ ಕನ್ನಡ ಟೀಮ್

  • ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್ ಲಿಮಿಟೆಡ್ (ಐಆರ್ ಸಿಟಿಸಿ) ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ ಎಂಬ ವರದಿಯನ್ನು ಸಂಸ್ಥೆಯ ಮಾಧ್ಯಮ ಸಂಬಂಧ ಅಧಿಕಾರಿಗಳು ನಿರಾಕರಿಸಿದ್ದಾರೆ. ವೆಬ್ ಸೈಟ್ ಹ್ಯಾಕ್ ಆಗಿರುವ ಬಗ್ಗೆ ವಿವರವಾಗಿ ಮಾಹಿತಿ ನೀಡಿ ಎಂದು ಐಆರ್ ಸಿಟಿಸಿಯು ಮಹಾರಾಷ್ಟ್ರ ಸೈಬರ್ ಸೆಲ್ ಗೆ ಆಗ್ರಹಿಸಿದೆ.
  • ಮತಕ್ಕಾಗಿ ಲಂಚ ಪಡೆದಿರುವ ಆರೋಪದಲ್ಲಿ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ. ‘ಬಿಜೆಪಿ ಸಿಬಿಐ ಸಮನ್ ನೀಡುವ ಮೂಲಕ ಒತ್ತಡ ಹೇರಲು ಮುಂದಾಗಿದೆ. ಬಹುಮತ ಸಾಬೀತುಪಡಿಸಲು ಬಿಜೆಪಿ ಸಿಬಿಐ ಅನ್ನು ಅಸ್ತ್ರವಾಗಿ ಬಳಸಿದರೆ, ಜನರು ಅದಕ್ಕೆ ಉತ್ತರಿಸುತ್ತಾರೆ’ ಎಂದು ರಾವತ್ ತಿಳಿಸಿದ್ದಾರೆ.
  • ವಿಜಯ್ ಮಲ್ಯಗೆ ಸಂಬಂಧಿಸಿದ ಎರಡು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ಮೇ 9ರಂದು ನೀಡಲು ಹೈದರಾಬಾದ್ ಸ್ಥಳೀಯ ನ್ಯಾಯಾಲಯ ನಿರ್ಧರಿಸಿದೆ. ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಿಎಂಆರ್ ಹೈದರಾಬಾದ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿ. ಪ್ರಕರಣ ದಾಖಲಿಸಿತ್ತು.
  • ಉಜ್ಜೈನಿಯಲ್ಲಿ ನಡೆಯುತ್ತಿರುವ ಸಿಂಹಸ್ತ ಕುಂಭ ಮೇಳೆದ ವೇಳೆ ಟೆಂಟ್ ಕುಸಿದ ಪರಿಣಾಮ ಐವರು ಮೃತಪಟ್ಟಿದ್ದಾರೆ. ಗುರುವಾರ ಭಾರಿ ಮಳೆ ಸುರಿದ ಪರಿಣಾಮ ಟೆಂಟ್ ಕುಸಿಯಿತು. ಈ ವೇಳೆ ಅಲ್ಲಿದ 30 ಮಂದಿ ಗಾಯಗೊಂಡಿದ್ದಾರೆ. ಏ.22 ರಂದು ಆರಂಭವಾದ ಒಂದು ತಿಂಗಳ ಕಾಲ ನಡೆಯುವ ಈ ಕುಂಭಮೇಳದಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಭಕ್ತಾದಿಗಳು ಆಗಮಿಸುತ್ತಾರೆ.

 

ಕೀನನ್ ಸ್ಯಾಂಟೋಸ್ ಮತ್ತು ರುಬೆನ್ ಫರ್ನಾಂಡಿಸ್ ಅವರನ್ನು ನಾಲ್ಕೂವರೆ ವರ್ಷಗಳ ಹಿಂದೆ ಕೊಲೆಗೈದ ನಾಲ್ವರಿಗೂ ಜೀವನಪರ್ಯಂತ ಜೈಲುಶಿಕ್ಷೆಯನ್ನು ಮುಂಬೈ ನ್ಯಾಯಾಲಯ ವಿಧಿಸಿದೆ. ಯುವತಿಯ ಮಾನರಕ್ಷಣೆಗೆ ಹೋದಾಗ ಕೊಲೆಯಾದ ಇವರ ಪ್ರಕರಣಕ್ಕೆ ನ್ಯಾಯ ಸಿಕ್ಕಿರುವುದು ಅತ್ಯಾಚಾರಿಗಳಿಗೆ ಎಚ್ಚರಿಕೆ ಗಂಟೆ ಆಗಬೇಕಿದೆ.

ಇಡೀ ದೇಶದ ರೈತರ ಬೆಳೆ ಸಾಲ ಒಂದು ತೂಕವಾದರೆ, ಅದಾನಿ ಗ್ರೂಪ್ ನ ಸಾಲವೇ ಮತ್ತೊಂದು ತೂಕ! ಇದು ಜೆಡಿಯು ಸಂಸದ ಸದನದಲ್ಲಿ ಹಂಚಿಕೊಂಡ ಮಾಹಿತಿ

ನಿಮ್ಮ ಮಕ್ಕಳನ್ನು ಮಾತಾಡಿಸಿದರೆ, ಪ್ರತಿಬಾರಿ ಅವರ ಪರ ನೀವೇಕೆ ಉತ್ತರ ಕೊಡಲು ಹೋಗ್ತೀರಿ ಅಂತ ಪ್ರಶ್ನಿಸಿದ್ದಾರೆ, ಶಮ ನಂದಿಬೆಟ್ಟ ತಮ್ಮ ಅಂಕಣದಲ್ಲಿ.

ಜಾನ್ಸನ್ ಆ್ಯಂಡ್ ಜಾನ್ಸನ್ ಟಾಲ್ಕಂ ಪೌಡರ್ ನೀವೂ ಬಳಸ್ತೀರಾ? ಹುಷಾರು, ಅದು ಕ್ಯಾನ್ಸರ್ ಕಾರಕ ಅಂತ ದಂಡ ಹಾಕಿಸಿಕೊಂಡಿರೋದರ ವಿವರ ಇಲ್ಲಿದೆ.

ಉತ್ತರ ಪ್ರದೇಶದ ಬುಂದೇಲಖಂಡದಲ್ಲಿ ಬರ ಇರೋದು ಸೂರ್ಯನಷ್ಟೇ ಸತ್ಯ. ಆದರೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಾತ್ರ ಕೇಂದ್ರ ಕಳುಹಿಸಿದ್ದ ನೀರಿನ ರೈಲು ಬೇಡವೆಂದ್ರು.

ರಾಜ್ಯ ರಾಜಕೀಯದ ಧ್ವನಿಗಳನ್ನು ಲೈಟಾಗಿ ಅವಲೋಕಿಸೋಣ…

ನೀವು ಕಣ್ಣಾಡಿಸಬಹುದಾದ ಸಿನಿಮಾ ಸ್ಟಿಲ್ಸ್

Leave a Reply