ಪ್ರಕೃತಿ ವಿಕೋಪದ ಮುಂದೆ ಮಾನವ ಕೈಚೆಲ್ಲಿ ಕೂರಲಷ್ಟೇ ಶಕ್ತ, ಇದಕ್ಕೆ ಕೆನಡಾದ ದೈತ್ಯ ಕಾಡ್ಗಿಚ್ಚೇ ಸಾಕ್ಷಿ!

ಡಿಜಿಟಲ್ ಕನ್ನಡ ಟೀಮ್

ಉತ್ತರಾಖಂಡ ನಲುಗಿಸಿದ್ದ ಕಾಡ್ಗಿಚ್ಚನ್ನು ನಿಯಂತ್ರಿಸಲು ಪಟ್ಟ ಹರಸಾಹಸ ನಮ್ಮ ಮನಸ್ಸಿಂದ ಇನ್ನು ಮಾಸಿಲ್ಲ. ಇದರ ಬೆನ್ನಲ್ಲೇ ಈಗ ಕೆನಡಾವನ್ನು ಕಂಗೆಡಿಸಿರುವ ಕಾಡ್ಗಿಚ್ಚು ಎಲ್ಲರಲ್ಲೂ ನಡುಕ ಹುಟ್ಟಿಸಿದೆ. ಈ ಕಾಡ್ಗಿಚ್ಚಿನ  ರೌದ್ರಾವತಾರ ಹೇಗಿದೆ ಎಂದರೆ, ಇಲ್ಲಿ ಚಿಮ್ಮುತ್ತಿರುವ ಹೊಗೆ ಬಾನೆತ್ತರಕ್ಕೆ ಚಾಚಿದ್ದು ಆಕಾಶ ಭೂಮಿಯನ್ನು ಒಂದು ಮಾಡಿದಂತೆ ಕಾಣುತ್ತಿದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಸೋಕಾಲ್ಡ್ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿರೋ ಕೆನಡಾ ಸಹ ವಿಫಲವಾಗಿ ದಿಕ್ಕುತೋಚದಂತಾಗಿದೆ.

ಕೆನಡಾದ ಅಲ್ಬೆರ್ಟಾ ಪ್ರದೇಶದಲ್ಲಿ ಹೊತ್ತಿ ಉರಿಯುತ್ತಿರುವ ಕಾಡ್ಗಿಚ್ಚು ಪ್ರಮಾಣ ಅಷ್ಟಿಷ್ಟಲ್ಲ. ಬರೋಬ್ಬರಿ ನ್ಯೂಯಾರ್ಕ್ ನಗರ ವಿಸ್ತೀರ್ಣಕ್ಕೂ ಮಿಗಿಲಾಗಿ ಈ ಕಾಡ್ಗಿಚ್ಚು ವಿಸ್ತರಿಸಿದೆ. ಈವರೆಗೂ ಕಾಡ್ಗಿಚ್ಚು 85 ಸಾವಿರ ಹೆಕ್ಟೇರ್ ಪ್ರದೇಶ, 328 ಸ್ಕ್ವೈರ್ ಮೈಲು (850 ಕಿ.ಮಿ) ನಷ್ಟು ವ್ಯಾಪಕವಾಗಿ ಹರಡಿದೆ. ಫೋರ್ಟ್ ಮ್ಯಾಕ್ ಮರ್ರೆ ನಗರವನ್ನು ಈಗಾಲೇ ಸಂಪೂರ್ಣವಾಗಿ ಖಾಲಿ ಮಾಡಿಸಲಾಗಿದೆ. ಇಲ್ಲಿನ ವಾತಾವರಣ ಹೆಚ್ಚು ಉಷ್ಣತೆಯಿಂದ ಕೂಡಿದ್ದು, ಗಾಳಿಯು ತೀವ್ರವಾಗಿ ಬೀಸುತ್ತಿದೆ. ಪರಿಣಾಮ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಎಲ್ಲ ಸಾಧ್ಯತೆಗಳಿವೆ.

wildfire2

ಈಗಾಗಲೇ ಈ ಪ್ರದೇಶದಲ್ಲಿ 1600 ಮನೆ ಹಾಗೂ ಕಟ್ಟಡಗಳು ನಾಶವಾಗಿವೆ. ಅಲ್ಲದೆ, 88 ಸಾವಿರ ಜನರನ್ನು ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಈ ಪ್ರದೇಶದ ಇತಿಹಾಸದಲ್ಲೇ ಇದು ಅತಿ ದೊಡ್ಡ ಸ್ಥಳಾಂತರ. ಸುಮಾರು 1 ಸಾವಿರಕ್ಕೂ ಹೆಚ್ಚು ಅಗ್ನಿ ನಿಯಂತ್ರಣ ವಿಮಾನಗಳು (ಫೈರ್ ಫೈಟರ್) ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ನಡೆಸುತ್ತಿವೆ. ಆ ಪೈಕಿ ನಿಯಂತ್ರಣ ಸಿಗದೇ 7 ಫೈರ್ ಫೈಟರ್ ಗಳು ಬೆಂಕಿಗೆ ಆಹುತಿಯಾಗಿವೆ. ಈ ಅನಾಹುತ ಅಲ್ಬರ್ಟಾದಲ್ಲಿ ತುರ್ತು ಪರಿಸ್ಥಿತಿಗೆ ಕಾರಣವಾಗಿದೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳೆಲ್ಲಾ ಹೊಗೆಯಿಂದ ಆಕ್ರಮಿಸಿಕೊಂಡಿದ್ದು, ಸಂಚಾರಕ್ಕೂ ತೊಂದರೆಯಾಗಿದೆ. ‘ಈ ಹೊಗೆಯ ನಡುವೆಯೇ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು. ಪರಿಣಾಮ 7 ಗಂಟೆಯ ಪ್ರಯಾಣ 14 ಗಂಟೆ ತೆಗೆದುಕೊಂಡಿತು. ಈ ಕಾಡ್ಗಿಚ್ಚಿಗೆ ಎಲ್ಲವೂ ಉರಿದು ಹೋಗುತ್ತಿದ್ದವು. ಸ್ನೇಹಿತರ ಮನೆಯು ಉರಿಯುತ್ತಿತ್ತು. ಅಲ್ಲಿ ಯಾರು ಇದ್ದರು ಎಂಬುದು ತಿಳಿದಿರಲಿಲ್ಲ’ ಎಂಬುದು ಕಾಡ್ಗಿಚ್ಚಿನಿಂದ ಪಾರಗಿ ಇದರ ರೌದ್ರ ಪರಿಸ್ಥಿತಿಯನ್ನು ಕಣ್ಣಾರೆ ಕಂಡ ಸ್ಥಳೀಯ ನಾಗರೀಕ ಮಾಧ್ಯಮಗಳಿಗೆ ನೀಡಿದ ವಿವರಣೆ.

Smoke rises from a wildfire outside of Fort McMurray, Alberta, Tuesday, May 3, 2016. The entire population of the Canadian oil sands city of Fort McMurray, has been ordered to evacuate as a wildfire whipped by winds engulfed homes and sent ash raining down on residents. (Mary Anne Sexsmith-Segato/The Canadian Press via AP) MANDATORY CREDIT

‘ಎಷ್ಟೇ ವಿಮಾನ ಟ್ಯಾಂಕರ್ ಗಳಲ್ಲಿ ನೀರು ಸುರಿದರೂ ಈ ಕಾಡ್ಗಿಚ್ಚು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅಗಾಧ ಪ್ರಮಾಣದಲ್ಲಿ ಬೆಂಕಿಯ ಕೆನ್ನಾಲಿಗೆ ಚಾಚಿದೆ. ಮುಂದಿನ ಒಂದೆರಡು ದಿನಗಳು ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದ್ದು, ಮಳೆ ಬಾರದ ಹೊರತಾಗಿ ನಾವೇನು ಮಾಡಲು ಸಾಧ್ಯವಿಲ್ಲ’ ಎಂದು ಹತಾಶರಾಗಿದ್ದಾರೆ ಕೆನಡಾ ಕಾಡ್ಗಿಚ್ಚು ನಿರ್ವಹಣಾ ತಜ್ಞ ಚಡ್ ಮೊರಿಸನ್.

ಇಲ್ಲಿನ ದ ನ್ಯಾ,ನಲ್ ಹಾಕಿ ಲೀಗ್ 1 ಲಕ್ಷ ಅಮೆರಿಕನ್ ಡಾಲರ್ ಮೊತ್ತವನ್ನು ಕೆನಡಾ ರೆಡ್ ಕ್ರಾಸ್ ಸಂಸ್ಥೆಗೆ ನೀಡಲು ಮುಂದಾಗಿದೆ. ಈಗಾಗಲೇ ಈ ಸಂಸ್ಥೆ ಸುಮಾರು 11 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ದೇಣಿಗೆ ಸಂಗ್ರಹವಾಗಿದೆ ಎಂದು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಪ್ರಧಾನಿ ಜಸ್ಟಿನ್ ಟ್ರಡೇವ್, ‘ಇಂತಹ ಕಠಿಣ ಸಂದರ್ಭದಲ್ಲಿ ನಾವೆಲ್ಲಾ ಒಟ್ಟಾಗಿರಬೇಕು’ ಎಂದು ಕರೆ ನೀಡಿದ್ದಾರೆ.

Leave a Reply