ಚೌಕಬಾರ ಇದು ಕೇವಲ ಆಟವಲ್ಲ.. ಜೀವನದ ಓಟ ಅಂತಾ ಹೇಳ್ತಿದೆ ಈ ಕಿರುಚಿತ್ರ!

ಡಿಜಿಟಲ್ ಕನ್ನಡ ಟೀಮ್

ಒಬ್ಬ ವ್ಯಕ್ತಿಯ ಜೀವನದಲ್ಲಿ ಹೇಗೆಲ್ಲಾ ವಿಚಿತ್ರ ತಿರುವುಗಳು ಎದುರಾಗಬಹುದು, ಹಾಗೇ ಎದುರಾದ ಪರಿಸ್ಥಿತಿಯಲ್ಲಿ ಆತನ ಸ್ಥಿತಿ ಹೇಗಿರುತ್ತದೆ ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ ‘ಚೌಕಬಾರ’ ಕಿರುಚಿತ್ರ.

ಒಂದೆಡೆ ಸಾಲ ಕೊಟ್ಟಿರುವ ಫೈನಾನ್ಶಿಯರ್ ಒತ್ತಡ, ಮತ್ತೊಂದೆಡೆ ಗೊತ್ತಿಲ್ಲದ ಮಹಿಳೆಗೆ ಡಿವೋರ್ಸ್ ನೀಡಬೇಕು ಎಂಬ ಅನಾಮಿಕ ವ್ಯಕ್ತಿಯ ಕರೆ, ಈ ಎರಡರ ಮಧ್ಯೆ ರವೀಶ್ ಎಂಬ ಪಾತ್ರ ಸಿಕ್ಕಿಕೊಂಡು ಹೇಗೆ ಒದ್ದಾಡುತ್ತದೆ ಹಾಗೂ ಜೀವನ ಚೌಕಬಾರ ಆಟದಂತಾದರೆ ಹೇಗಿರುತ್ತದೆ ಎಂಬುದು ಈ ಚಿತ್ರದ ತಿರುಳು. ಈ ಎರಡೂ ಸಂಕಷ್ಟಗಳನ್ನು ನಿಭಾಯಿಸುವಲ್ಲಿ ರವೀಶ್ ಹೇಗೆ ವಿಫಲನಾಗುತ್ತಾನೆ. ಮಾಡದ ತಪ್ಪಿಗೆ ಹೇಗೆ ವಿಲವಿಲ ಒದ್ದಾಡುತ್ತಾನೆ ಎಂಬ ರೋಚಕ ಕಥೆಯನ್ನು 20 ನಿಮಿಷಗಳ ಈ ಕಿರುಚಿತ್ರ ನೋಡಿಯೇ ತಿಳಿಯಬೇಕು.

ನಟ ನಿನಾಸಂ ಸತೀಶ್ ನಿರ್ಮಾಣ, ರಘು ಶಿವಮೊಗ್ಗ ಅವರ ನಿರ್ದೇಶನದಲ್ಲಿ ಮೂಡಿೂಂದಿರೋ ಈ ಚಿತ್ರ ಖ್ಯಾತ ನಟರಾದ ಅಚ್ಯುತ ಕುಮಾರ್, ಶರತ್ ಲೋಹಿತಾಶ್ವ ಮನೋಜ್ಞ ಅಭಿನಯದಲ್ಲಿ ಕಿಕ್ ನೀಡುವುದು ಖಂಡಿತಾ.

Leave a Reply